ಶ್ರೀನಗರ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ(PoK boy) ಅಪ್ರಾಪ್ತ ಬಾಲಕನೊಬ್ಬ ಜಮ್ಮು ಮತ್ತು ಕಾಶ್ಮೀರದ ಬಳಿಕ ಭಾರತದ ಗಡಿ ದಾಟಿದ್ದು, ಪೂಂಚ್ ಜಿಲ್ಲೆಯ ಸಲೋತ್ರಿ ಪ್ರದೇಶದಲ್ಲಿ ಭದ್ರತಾ ಪಡೆಗಳು ಆ ಬಾಲಕನ್ನು ಬಂಧಿಸಿವೆ ಎಂದು ಬುಧವಾರ(ಜೂ. 10) ವರದಿಯಾಗಿದೆ.
ಬಾಲಕನನ್ನು ಜಾವಿದ್ ಅಲಿ ಎಂದು ಗುರುತಿಸಲಾಗಿದ್ದು, ಈತ ಪಿಒಕೆಯ ಟೆಟ್ರಿನೋಟ್ ನಿವಾಸಿ ಮೊಹಮ್ಮದ್ ಶರೀಫ್ ಅವರ ಪುತ್ರ. ಸೂಕ್ಷ್ಮ ಗಡಿ ವಲಯದಲ್ಲಿ ಭದ್ರತಾ ಪಡೆಗಳು ಆತನ ಚಲನವಲನಗಳನ್ನು ಪತ್ತೆಹಚ್ಚಿದ ನಂತರ ಆತನನ್ನು ವಶಕ್ಕೆ ತೆಗೆದುಕೊಂಡಿವೆ ಎನ್ನಲಾಗಿದೆ.
ಪ್ರಾಥಮಿಕ ವಿಚಾರಣೆಯಲ್ಲಿ, ಜಾವಿದ್ ಅಲಿ ಅಧಿಕಾರಿಗಳಿಗೆ ಸ್ನಾನ ಮಾಡಲು ಹತ್ತಿರದ ನದಿಗೆ ಹೋಗಿದ್ದೆ. ಮತ್ತು ಅಜಾಗರೂಕತೆಯಿಂದ ಗಡಿ ನಿಯಂತ್ರಣ ರೇಖೆಯನ್ನು ದಾಟಿದೆ ಎಂದು ಹೇಳಿದ್ದಾನೆ. ಆದಾಗ್ಯೂ, ಭದ್ರತಾ ಪಡೆಗಳು ಸೂಕ್ಷ್ಮವಾಗಿ ವಿಚಾರಣೆ ನಡೆಸುತ್ತಿವೆ.
ಬಾಲಕನ ನಿಜವಾದ ಉದ್ದೇಶಗಳನ್ನು ಖಚಿತಪಡಿಸಿಕೊಳ್ಳಲು ಅವರು ಅವನನ್ನು ಸಂಪೂರ್ಣವಾಗಿ ಪ್ರಶ್ನಿಸುತ್ತಿದ್ದಾರೆ. ಹಿಂದೆ ಪಾಕ್ ಸೇನೆಯು ಎಲ್‌ಒಸಿ ಉದ್ದಕ್ಕೂ ಭಾರತೀಯ ಸೈನಿಕರ ಜಾಗರೂಕತೆಯನ್ನು ಪರೀಕ್ಷಿಸಲು ಬಾಲಕರನ್ನು ಬಳಸಿಕೊಂಡಿದೆ. ಈ ಹಿನ್ನೆಲೆ ಆ ಕೋನದಲ್ಲೂ ವಿಚಾರಣೆ ನಡೆಸುತ್ತಿದದ್ದಾರೆ.
ಈ ಕುರಿತು ಮಾತನಾಡಿರುವ ಭದ್ರತಾ ಪಡೆಯ ಅಧಿಕಾರಿಯೊಬ್ಬರು, ಅವನು ತಪ್ಪಾಗಿ ದಾಟಿದ್ದರೆ, ಪಡೆಗಳು ಅವನನ್ನು 24 ಗಂಟೆಗಳ ಕುಟುಂದಬ ಸಹವರ್ತಿಗಳಿಗೆ ಹಸ್ತಾಂತರಿಸುತ್ತವೆ. ಆದರೆ ಬೇರೆ ಯಾವುದಾದ್ರೂ ಉದ್ದೇಶದಿಂದ ದಾಟಿದ್ದಾನೆ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಲು ತನಿಖೆ ಮಾಡಲಾಗುತ್ತಿದೆ ಎಂದಿದ್ದಾರೆ (ಏಜೆನ್ಸೀಸ್).