ಬೈಕ್ ಸವಾರನಿಗೆ ಬುದ್ಧಿ ಕಲಿಸಿದ ಅಜ್ಜಿ (ಚಿತ್ರ X)
- ರಸ್ತೆ ಶಿಸ್ತು ಮತ್ತು ನಾಗರಿಕ ಪ್ರಜ್ಞೆಯ ಬಗ್ಗೆ ಕೇವಲ ಭಾಷಣ ಮಾಡುವವರ ಮಧ್ಯೆ ಬೈಕ್ ಸವಾರನಿಗೆ ಬುದ್ಧಿ ಕಲಿಸಿದ ಅಜ್ಜಿ
- ಭಾರೀ ಟ್ರಾಫಿಕ್ ನಡುವೆ ಬೈಕ್ ಸವಾರನೊಬ್ಬ ಸಮಯ ಉಳಿಸಲು ಪಾದಚಾರಿ ಮಾರ್ಗಕ್ಕೆ ಎಂಟ್ರಿ ಕೊಟ್ಟಿದ್ದಾರೆ
- ಸವಾರನ ಅಶಿಸ್ತನ್ನು ಗಮನಿಸಿ, ಪಕ್ಕಕ್ಕೆ ಸರಿಯುವ ಬದಲಿಗೆ ಆತನ ದಾರಿಗೆ ಅಡ್ಡಲಾಗಿ ನಿಂತಿದ್ದಾರೆ
ತಿರುವನಂತಪುರಂ: ರಸ್ತೆ ಶಿಸ್ತು ಮತ್ತು ನಾಗರಿಕ ಪ್ರಜ್ಞೆಯ ಬಗ್ಗೆ ಕೇವಲ ಭಾಷಣ ಮಾಡುವವರ ಮಧ್ಯೆ, ಕೇರಳದ ಹಿರಿಯ ಮಹಿಳೆಯೊಬ್ಬರು ತಮ್ಮ ಚಾಣಾಕ್ಷತನದಿಂದ ಬೈಕ್ ಸವಾರನೊಬ್ಬನಿಗೆ (Scooty rider) ಬುದ್ಧಿ ಕಲಿಸಿರುವ ವಿಡಿಯೋ ಸಧ್ಯ ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದೆ.
ವಿಡಿಯೋದಲ್ಲೇನಿದೆ?
ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಭಾರೀ ಟ್ರಾಫಿಕ್ ನಡುವೆ ಬೈಕ್ ಸವಾರನೊಬ್ಬ ಸಮಯ ಉಳಿಸುವ ಸಲುವಾಗಿ ಪಾದಚಾರಿ ಮಾರ್ಗವನ್ನು ಶಾರ್ಟ್ ಕಟ್ ಆಗಿ ಬಳಸಲು ಪ್ರಾರಂಭಿಸುತ್ತಾನೆ. ಈ ವೇಳೆ ಆ ದಾರಿಯಲ್ಲೇ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯೊಬ್ಬರು ಸವಾರನ ಅಶಿಸ್ತನ್ನು ಗಮನಿಸಿ, ಪಕ್ಕಕ್ಕೆ ಸರಿಯುವ ಬದಲಿಗೆ ಆತನ ದಾರಿಗೆ ಅಡ್ಡಲಾಗಿ ನಿಂತು ಮುಂದೆ ಹೋಗದಂತೆ ತಡೆದಿದ್ದಾರೆ.
ಈ ವೇಳೆ ಆ ಮಹಿಳೆಯು ತನ್ನ ಮೊಬೈಲ್ ತೆಗೆದು ಅದರಲ್ಲಿ ವಿಡಿಯೋ ಮಾಡಲು ಪ್ರಾರಂಭಿಸುತ್ತಾರೆ. ಅವರ ದೃಢಸಂಕಲ್ಪವು ಅಂತಿಮವಾಗಿ ಫಲ ನೀಡುವುದರ ಜೊತೆಗೆ ಬೈಕ್ ಸವಾರ ಪಾದಚಾರಿ ರಸ್ತೆಯನ್ನು ತೆರವುಗೊಳಿಸಿ ಮುಖ್ಯ ರಸ್ತೆಗೆ ಹಿಂತಿರುಗುತ್ತಾನೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ, ಮಹಿಳೆಯ ಧೈರ್ಯ ಮತ್ತು ಸ್ಪಷ್ಟತೆಗೆ ಅನೇಕ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು ಶಿಕ್ಷಣ ಪದವಿಗಳು ಮತ್ತು ಉದ್ಯೋಗಗಳನ್ನು ಮೀರಿದ್ದಾಗಿದೆ. ಇದು ದೈನಂದಿನ ನಡವಳಿಕೆಯಲ್ಲಿ ಪ್ರತಿಬಿಂಬಿಸುವುದು ಮತ್ತು ಸಾರ್ವಜನಿಕ ಸ್ಥಳಗಳನ್ನು ಗೌರವಿಸಿ, ನಿಯಮಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ ಎಂದು ಹೇಳಿದ್ದಾರೆ.
ಇನ್ನು ಕೆಲವರು ದ್ವಿಚಕ್ರ ವಾಹನಗಳು ಮತ್ತು ನಾಲ್ಕು ಚಕ್ರಗಳ ವಾಹನಗಳು ಪಾದಚಾರಿ ರಸ್ತೆಯನ್ನು ಆಕ್ರಮಿಸುವುದರಿಂದ ಅಲ್ಲಿ ಓಡಾಡುವ ಜನರಿಗೆ ಬಹಳ ತೊಂದರೆಯಾಗುತ್ತಿರುವುದನ್ನು ತಿಳಿಸಿದರು. ಆದಾಗ್ಯೂ, ಕಟ್ಟುನಿಟ್ಟಿನ ಜಾರಿ ಮತ್ತು ಸಿಸಿಟಿವಿ ಕ್ಯಾಮೆರಾಗಳ ವ್ಯಾಪಕ ಬಳಕೆಯು ಪಾದಚಾರಿಗಳಿಗೆ ರಸ್ತೆ ಸುರಕ್ಷತೆಯನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).