ಅಳಲು ತೋಡಿಕೊಂಡ ರೋಗಿ ಉಷಾ 
ದೇಶ

ಎಕ್ಸ್​-ರೇಯಲ್ಲಿ ಪತ್ತೆಯಾಯ್ತು ವೈದ್ಯರ ಎಡವಟ್ಟು! ಸ್ಕ್ಯಾನಿಂಗ್​ ರಿಪೋರ್ಟ್​ ಕಂಡು ಮಹಿಳೆ ಕಣ್ಣೀರು | Surgery ​

ಪ್ರಮುಖ ಮುಖ್ಯಾಂಶಗಳು

  • ಐದು ವರ್ಷದ ಹಿಂದೆ ಹೊಟ್ಟೆಯ ಭಾಗದಲ್ಲಿ ಶಸ್ತ್ರಚಿಕಿತ್ಸೆ
  • ಶಸ್ತ್ರಚಿಕಿತ್ಸೆಯ ಬಳಿಕವೂ ತಪ್ಪದ ನೋವು
  • ಭಾರೀ ನೋವಿನಿಂದ ಎಕ್ಸ್​-ರೇ ಮಾಡಿಸಿದ ಮಹಿಳೆಗೆ ಕಾದಿತ್ತು ಭಯಾನಕ ಶಾಕ್​
ಅಲಪ್ಪುಳ: ಐದು ವರ್ಷಗಳ ಹಿಂದೆ ಹೊಟ್ಟೆಯ ಕೆಳಭಾಗದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಉಷಾ ಜೋಸೆಫ್​ಗೆ ಇದೀಗ ಎಕ್ಸ್​-ರೇ ರಿಪೋರ್ಟ್​ ಕಂಡು ಭಾರೀ ಆಘಾತವಾಗಿದ್ದು, ನನಗೆ ಕೇರಳದ ಅಲಪ್ಪುಳದ ವಂದನಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಹೋಗಲು ಭಯವಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಮೇ 5, 2021ರಂದು ಆಲಪ್ಪುಳ ವಂದನಂ ವೈದ್ಯಕೀಯ ಕಾಲೇಜಿನಲ್ಲಿ, ಗರ್ಭಕೋಶದಲ್ಲಿ ಕಾಣಿಸಿಕೊಂಡ ಗೆಡ್ಡೆಯನ್ನು ತೆಗೆಸಲು ಉಷಾ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಆದ್ರೆ, ಅದಾದ ಬಳಿಕ ನೋವು ಹಿಂದಿಗಿಂತ ಜಾಸ್ತಿಯಾಗಲು ಪ್ರಾರಂಭಿಸಿತು. ಇದಕ್ಕೆ ಪೇನ್​ ಕಿಲ್ಲರ್ಸ್ ಮಾತ್ರೆ ನುಂಗುವಂತೆ ಹೇಳಿದ ವೈದ್ಯರು, ನೋವಿನ ಹಿಂದಿರುವ ಕಾರಣವೇನು? ಅಂತ ಹೇಳಲಿಲ್ಲ ಎಂದು ರೋಗಿ ದೂರಿದ್ದಾರೆ. ಬಳಿಕ ಬೇರೆ ಆಸ್ಪತ್ರೆಯಲ್ಲಿ ತೋರಿಸಿದ ಉಷಾಗೆ ಎಕ್ಸ್​-ರೇ ಮಾಡಿಸಲು ವೈದ್ಯರು ಹೇಳಿದರು. ಆಗಲೇ ಗೊತ್ತಾಗಿದ್ದು, ಈಕೆಯ ಹೊಟ್ಟೆಯಲ್ಲಿ ಸಿಲುಕಿದೆ ಎಂಬ ಭಯಾನಕ ಸಂಗತಿ. ​
ಐದು ವರ್ಷಗಳ ಹಿಂದೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು, ಹೊಟ್ಟೆಯಲ್ಲೇ ಕತ್ತರಿ ಬಿಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಉಷಾ ಗಂಭೀರ ಆರೋಪ ಎಸಗಿದ್ದು, ವಂದನಂ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯ ವೈದ್ಯರೇ ಇದಕ್ಕೆಲ್ಲ ಕಾರಣ ಎಂದು ಅಳಲು ತೋಡಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಡಾ. ಶಾಹಿದಾ ಎಂಬುವವರು, ಇದು ಘೋರ ತಪ್ಪು. ಆದರೆ, ಆ ರೀತಿಯ ಶಸ್ತ್ರಚಿಕಿತ್ಸೆಯನ್ನು ನಾವು ಮಾಡಿದ ನೆನಪಿಲ್ಲ. ಅಕಸ್ಮಾತ್​, ತಪ್ಪು ಮಾಡಿದ್ದರೆ, ಅದು ಉದ್ದೇಶಪೂರ್ವಕವಾಗಿ ಆಗಿರಲ್ಲ. ಇದಕ್ಕೆ ಅವರು ಕೇಳಿದರೆ ವಿವರಣೆ ನೀಡಲು ನಾನು ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಪಡೆದ ಸಂಸದ ಕೆ.ಸಿ. ವೇಣುಗೋಪಾಲ್, ಉಷಾ ಅವರಿಗೆ ವಿಶೇಷ ಚಿಕಿತ್ಸೆ ಕೊಡಿಸಲು ಅಮೃತ ಆಸ್ಪತ್ರೆಗೆ ದಾಖಲಿಸಿದ್ದಾರೆ. ಉಷಾ ಅವರ ಕುಟುಂಬದೊಂದಿಗೆ ಮಾತನಾಡಿದ ಅವರು, ಆಲಪ್ಪುಳ ವಂದನಂ ವೈದ್ಯಕೀಯ ಕಾಲೇಜಿಗೆ ಹೋಗಲು ರೋಗಿ ಹೆದರುತ್ತಿದ್ದಾರೆ. ಮತ್ತು ಚಿಕಿತ್ಸೆಗಾಗಿ ಬೇರೆಡೆಗೆ ಕಳುಹಿಸಿ ಎಂದು ಕೋರಿದರು. ಆಂಬ್ಯುಲೆನ್ಸ್ ಕಳುಹಿಸಿ ಉಷಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಮೃತ ಆಸ್ಪತ್ರೆಗೆ ಕರೆದೊಯ್ಯಲು ಸೌಲಭ್ಯಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದರು. ಘಟನೆಯ ಕುರಿತು ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).