cancer 
ದೇಶ

ಕ್ಯಾನ್ಸರ್​​ನಿಂದ ಕೂದಲು ಉದುರಿದ ಸ್ನೇಹಿತೆಗಾಗಿ ಇಡೀ ಶಾಲೆಯ ವಿದ್ಯಾರ್ಥಿನಿಯರು ತಲೆ ಬೋಳಿಸಿಕೊಂಡರು! ವಿಡಿಯೋ ನೋಡಿ ಕಣ್ಣೀರಿಟ್ಟ ನೆಟ್ಟಿಗರು.. cancer

ರಾಜಸ್ಥಾನ: ( cancer) ಸ್ನೇಹಕ್ಕೆ ಯಾವುದೇ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂಬುದಕ್ಕೆ ಈ ಹೃದಯಸ್ಪರ್ಶಿ ಘಟನೆಯೇ ಸಾಕ್ಷಿ. ಕ್ಯಾನ್ಸರ್‌ನಿಂದ ಬಳಲುತ್ತಿರುವ ತನ್ನ ಸಹಪಾಠಿಯ ಧೈರ್ಯ ಹೆಚ್ಚಿಸಲು ಶಾಲೆಯ ಎಲ್ಲಾ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರು ತಮ್ಮ ತಲೆ ಕೂದಲನ್ನು ತೆಗೆಸಿಕೊಂಡಿರುವ ವಿಡಿಯೋ ನೆಟ್ಟಿಗರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ.
ರಾಜಸ್ಥಾನದ ಜೋಧ್‌ಪುರದ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯೊಬ್ಬಳು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಕೀಮೋಥೆರಪಿ ಚಿಕಿತ್ಸೆಯ ನಂತರ ಆಕೆಯ ತಲೆ ಕೂದಲು ಸಂಪೂರ್ಣವಾಗಿ ಉದುರಿ ಹೋಗಿತ್ತು. ಇದರಿಂದ ಆ ಬಾಲಕಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಳು ಮತ್ತು ತನ್ನ ಗೆಳೆಯರ ಮುಂದೆ ಬರಲು ಸಂಕೋಚ ಪಡುತ್ತಿದ್ದಳು.
ತಮ್ಮ ಗೆಳತಿಯ ಈ ಸ್ಥಿತಿಯನ್ನು ಕಂಡು ಮರುಗಿದ ಇತರ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರು ಆಕೆಗೆ ಬೆಂಬಲ ನೀಡಲು ನಿರ್ಧರಿಸಿದರು. ಆಕೆ ಒಬ್ಬಳೇ ಅಲ್ಲ, ನಾವೆಲ್ಲರೂ ಆಕೆಯ ಜೊತೆಗಿದ್ದೇವೆ ಎಂಬ ಭಾವನೆ ಮೂಡಿಸಲು ಇಡೀ ಶಾಲೆಯ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರು ಸಾಮೂಹಿಕವಾಗಿ ತಮ್ಮ ಕೂದಲನ್ನು ತೆಗೆಸಿಕೊಂಡರು.
ಕ್ಯಾನ್ಸರ್ ಪೀಡಿತ ಬಾಲಕಿ ಶಾಲೆಗೆ ಬಂದಾಗ ತನ್ನ ಎಲ್ಲ ಗೆಳೆಯರು ಮತ್ತು ಶಿಕ್ಷಕಿಯರು ಕೂಡ ತನ್ನಂತೆಯೇ ಇರುವುದನ್ನು ಕಂಡು ಆಶ್ಚರ್ಯಚಕಿತಳಾಗುತ್ತಾಳೆ. ಅವರೆಲ್ಲರ ಪ್ರೀತಿಯನ್ನು ಕಂಡು ಆಕೆಯ ಮುಖದಲ್ಲಿ ನಗು ಅರಳುತ್ತದೆ. ಈ ದೃಶ್ಯವು ಇಂಟರ್ನೆಟ್‌ನಲ್ಲಿ ಮಾನವೀಯತೆಯ ದ್ಯೋತಕವಾಗಿ ಹೊರಹೊಮ್ಮಿದೆ.