V. D. Savarkar ಬಿಡುಗಡೆಯಾಗಿದ್ದು ಕ್ಷಮಾಪಣೆಯಿಂದಲ್ಲ, ಕಾಂಗ್ರೆಸ್ ಒತ್ತಾಯದಿಂದ
- V. D. Savarkar ಬಿಡುಗಡೆಯಾಗಿದ್ದು ಕ್ಷಮಾಪಣೆಯಿಂದಲ್ಲ, ಕಾಂಗ್ರೆಸ್ ಒತ್ತಾಯದಿಂದ
- ರಾಹುಲ್ ಗಾಂಧಿ ಸುಳ್ಳು ಹಬ್ಬಿಸುತ್ತಿದ್ದಾರೆ: ಸತ್ಯಕಿ ಸಾವರ್ಕರ್
- ಕಾಂಗ್ರೆಸ್ ಒತ್ತಾಯ ಮತ್ತು ಸಾರ್ವಜನಿಕರ ಒತ್ತಡದಿಂದ ನನ್ನಜ್ಜನ ಬಿಡುಗಡೆ
ಪುಣೆ: ಸ್ವಾತಂತ್ರ ಹೋರಾಟಗಾರ, ಹಿಂದುತ್ವ ಸಿದ್ಧಾಂತ ಪ್ರತಿಪಾದಕ ವಿ.ಡಿ.ಸಾವರ್ಕರ್ ತಾವು ಬರೆದ ಕ್ಷಮಾಪಣೆ ಅರ್ಜಿಯಿಂದಲ್ಲ, ಬದಲಾಗಿ ಸಾರ್ವಜನಿಕರ ಒತ್ತಾಯಕ್ಕೆ ಮಣಿದ ಬ್ರಿಟಿಷ್ ಸರ್ಕಾರದಿಂದ ಜೈಲಿನಿಂದ ಬಿಡುಗಡೆ ಮಾಡಿತ್ತು ಎಂದು ಸಾವರ್ಕರ್ ಮೊಮ್ಮಗ (Satyaki Savarkar on V D Savarkar) ಹೇಳಿದ್ದಾರೆ.
ಲೋಕಸಭಾ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ, ಸವರ್ಕರ್ ಅವರ ತೇಜೋವಧೆ ಮಾಡಿದ್ದಾರೆಂದು ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ನ್ಯಾಯಾಲಯದಲ್ಲಿ ತಮ್ಮ ಅಜ್ಜನ ಬಗ್ಗೆ ಮೊಮ್ಮಗ ಸತ್ಯಕಿ ಸಾವರ್ಕರ್ ಮಾತನಾಡಿದ್ದಾರೆ.
ನನ್ನಜ್ಜನ ಬಿಡುಗಡೆಗೆ ಕಾಂಗ್ರೆಸ್ ಕಾರಣ!
ನ್ಯಾಯಾಲಯದಲ್ಲಿ ಮಾತನಾಡಿದ ಸತ್ಯಕಿ ಸಾವರ್ಕರ್, ನನ್ನ ಅಜ್ಜ ವಿನಾಯಕ ಸಾವರ್ಕರ್ ಬ್ರಿಟಿಷರಿಗೆ ಕ್ಷಮಾಪಣೆ ಕೇಳಿ, ಮುಂದಿನ ದಿನಗಳಲ್ಲಿ ಸ್ವಾತಂತ್ರ್ಯದ ಚಟುವಟಿಕೆಗಳಲ್ಲಿ ಭಾಗವಹಿಸಲ್ಲ ಎಂದು ಹೇಳಿದಕ್ಕೆ ಬಿಡುಗಡೆಯಾಗಿಲ್ಲ.
ಸಾವರ್ಕರ್ ಅವರ ಸಿದ್ಧಾಂತ, ದೇಶಭಕ್ತಿಗೆ ಅಂದಿನ ಅನೇಕ ಭಾರತೀಯರು ಪ್ರೇರಿತರಾಗಿದ್ದರು. ಹಲವಾರು ಜನ ಅವರ ಅಭಿಮಾನಿಗಳಿದ್ದರು. ಅವರೆಲ್ಲಾ ಇವರ ಬಿಡುಗಡೆಗಾಗಿ ಹೋರಾಟ ನಡೆಸಿದರು. ಹೀಗಾಗಿ 1923 ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ತನ್ನ ಕಾಕಿನಾಡ ಅಧಿವೇಶನದಲ್ಲಿ ಸಾವರ್ಕರ್ ಅವರನ್ನು ಬಿಡುಗಡೆ ಮಾಡಬೇಕೆಂದು ಬ್ರಿಟಿಷ್ ಸರ್ಕಾರಕ್ಕೆ ಕೇಳಿಕೊಂಡ ಪರಿಣಾಮ ಅವರು ಜೈಲಿನಿಂದ ಹೊರಬಂದರು ಎಂದಿದ್ದಾರೆ.
ಇದೇ ರೀತಿಯ ಅಧಿವೇಶವನ್ನು ನಡೆಸಿ ಭಗತ್ ಸಿಂಗ್, ರಾಜ ಗುರು ಹಾಗೂ ಸುಖದೇವ್ ಅವರನ್ನು ಗಲ್ಲಿಗೇರಿಸುವುದನ್ನು ತಪ್ಪಿಸಲು ಕಾಂಗ್ರೆಸ್ಗೆ ಅವಕಾಶವಿತ್ತೆಂದು ಸತ್ಯಕಿ ಸಾವರ್ಕರ್ ನ್ಯಾಯಾಲಯದ ಎದುರು ಹೇಳಿದ್ದಾರೆ.
ರಾಹುಲ್ ಗಾಂಧಿ ಸುಳ್ಳನ್ನು ಹಬ್ಬಿಸುತ್ತಿದ್ದಾರೆ!
ನನ್ನಜ್ಜ ವಿನಾಯಕ ಸಾವರ್ಕರ್ ಯಾವ ಉದ್ದೇಶವನ್ನು ಇಟ್ಟುಕೊಂಡು ಕ್ಷಮಾಪಣೆ ಅರ್ಜಿ ಬರೆದಿದ್ದರು ಎನ್ನುವುದು ನನಗೆ ಗೊತ್ತಿಲ್ಲ. ಆದರೆ ಅವರು ಬರೆದ ಅರ್ಜಿಯಿಂದಲೇ ಅವರನ್ನು ಜೈಲಿನಿಂದ ಬಿಡುಗಡೆ ಮಾಡಿದ್ದು ಎನ್ನುವುದನ್ನು ಒಪ್ಪಲು ಸಾಧ್ಯವಿಲ್ಲ.
ಹಾಗಾದರೆ, 1923 ರಲ್ಲಿ ಮೊಹಮ್ಮದ್ ಅಲಿ ಜೋಹಾರ್ ಅಧ್ಯಕ್ಷತೆಯಲ್ಲಿ ನಡೆದ ಕಾಕಿನಾಡ ಕಾಂಗ್ರೆಸ್ ಅಧಿವೇಶನದಲ್ಲಿ ಏಕೆ ಸಾವರ್ಕರ್ ಅವರನ್ನು ಬಿಡುಗಡೆ ಮಾಡಿ, ಇಲ್ಲದಿದ್ದರೆ ಜನ ರೊಚ್ಚಿಗೇಳಲಿದ್ದಾರೆಂದು ಠರಾವನ್ನು ಬ್ರಿಟಿಷ್ ಸರ್ಕಾರಕ್ಕೆ ಸಲ್ಲಿಸಲಾಗಿತ್ತೆಂದು ಸತ್ಯಕಿ ಪ್ರಶ್ನಿಸಿದ್ದಾರೆ.
2023 ರಲ್ಲಿ ಲಂಡನ್ನಲ್ಲಿ ರಾಹುಲ್ ಗಾಂಧಿ ವಿನಾಯಕ ದಾಮೋದರ ಸಾವರ್ಕರ್ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ರಾಹುಲ್ ಗಾಂಧಿ ನನ್ನಜ್ಜ ಹಾಗೂ ಸ್ವತಂತ್ರ್ಯ ಹೋರಾಟಗಾರನ ತೇಜೋವಧೆ ಮಾಡಿದ್ದಾರೆಂದು ಸತ್ಯಕಿ ಮಾನನಷ್ಟ ಮೊಕದ್ದಮೆ ಹೂಡಿದ್ದರು, (ಏಜನ್ಸೀಸ್).