ಸಾರಾ ತೆಂಡೂಲ್ಕರ್‌ 
ದೇಶ

ಸೀರೆಗೆ ಬ್ಲೌಸ್ ಬದಲು ಕಾರ್ಸೆಟ್‌! ಸಾರಾ ತೆಂಡೂಲ್ಕರ್‌ ಹೊಸ ಲುಕ್‌ಗೆ ಫ್ಯಾನ್ಸ್ ಫಿದಾ | Sara Tendulkar

ಮಂಜುನಾಥ್ ಹಾಲವರ್ತಿ

ಪ್ರಮುಖ ಮುಖ್ಯಾಂಶಗಳು

  • ಸಾರಾ ತೆಂಡೂಲ್ಕರ್‌ ಹೊಸ ಲುಕ್‌ಗೆ ಫ್ಯಾಷನ್ ಪ್ರಿಯರು ಫಿದಾ
  • ಸೀರೆಗೆ ಬ್ಲೌಸ್ ಬದಲು ಐವರಿ ಕಾರ್ಸೆಟ್ ಧರಿಸಿದ ಸಾರಾ
  • ಸಾಂಪ್ರದಾಯಿಕ ಬನಾರಸಿ ಸೀರೆಗೆ ಆಧುನಿಕ ಟಚ್
Sara Tendulkar new look: ಸೀರೆ ಎಂದಾಕ್ಷಣ ಸಾಂಪ್ರದಾಯಿಕ ಬ್ಲೌಸ್ ಇರಲೇ ಬೇಕು. ಆದರೆ ಸಾರಾ ತೆಂಡೂಲ್ಕರ್‌ ಈ ಟ್ರೆಂಡ್‌ಗೆ ಹೊಸ ಟ್ವಿಸ್ಟ್ ನೀಡಿದ್ದಾರೆ. ಇತ್ತೀಚಿನ ಫೋಟೋ ಶೂಟ್‌ಗಾಗಿ ಸಾರಾ ಸೀರೆಗೆ ಸಾಮಾನ್ಯ ರವಿಕೆ ಬದಲು ಐವರಿ ಬಣ್ಣದ ಕಾರ್ಸೆಟ್ ಧರಿಸಿದ್ದು, ಅವರ ವಿಭಿನ್ನ ಲುಕ್‌ ಈಗ ಗಮನ ಸೆಳೆಯುತ್ತಿದೆ. ಸಾರಾ ಮೃದು ನೀಲಿ ಮಿಶ್ರಿತ ಹಸಿರು ಬನಾರಸಿ ಸೀರೆಯನ್ನು ತೊಟ್ಟಿದ್ದಾರೆ. ಸೀರೆ ಸಾಂಪ್ರದಾಯಿಕ ಲುಕ್ ನೀಡಿದರೆ, ಕಾರ್ಸೆಟ್ ಅದಕ್ಕೆ ಆಧುನಿಕ ಟಚ್ ಕೊಟ್ಟಿದೆ.
ಇನ್ನು, ಸ್ಯಾಟಿನ್ ರೇಷ್ಮೆಯಿಂದ ತಯಾರಿಸಿದ ಕಾರ್ಸೆಟ್ ಸಾರಾ ಮೈಯ ಮೇಲೆ ಚೆನ್ನಾಗಿ ಕುಳಿತಿತ್ತು. ಅದರ ವಿನ್ಯಾಸ ಮತ್ತು ಆಕರ್ಷಕವಾಗಿದ್ದು, ಇದರಿಂದ ಸಾಂಪ್ರದಾಯಿಕ ಬನಾರಸಿ ಸೀರೆಗೆ ಆಧುನಿಕ ಹಾಗೂ ಸ್ಟೈಲಿಶ್ ಲುಕ್ ಸಿಕ್ಕಿತ್ತು. ಸಾರಾ ಧರಿಸಿದ್ದ ನೀಲಿ-ಹಸಿರು ಬಣ್ಣದ ಕಾಟನ್-ಸಿಲ್ಕ್ ಬನಾರಸಿ ಸೀರೆಯಲ್ಲಿದ್ದ ಸಣ್ಣ ಹೂವಿನ ವಿನ್ಯಾಸ ಮತ್ತು ಸುಂದರವಾದ ನೇಯ್ಗೆ ಅದರ ಅಂದವನ್ನು ಮತ್ತಷ್ಟು ಹೆಚ್ಚಿಸಿತ್ತು.

ಸೀರೆ ಜೊತೆ ಡೈಮಂಡ್ ಆಭರಣ

ಸಾರಾ ಆಕ್ಸೆಸರೀಸ್ ವಿಚಾರದಲ್ಲೂ ಹೆಚ್ಚು ಜಾಗರೂಕರಾಗಿದ್ದಾರೆ. ಗೋಲುಭಾಯ್ ಬದಾಲಿಯಾ ಡೈಮಂಡ್‌ನ ಸ್ಟೇಟ್‌ಮೆಂಟ್ ಡೈಮಂಡ್ ನೆಕ್ಲೇಸ್ ಹಾಗೂ ಅದಕ್ಕೆ ಹೊಂದುವ ಡೈಮಂಡ್ ಕಫ್ ಧರಿಸಿದ್ದರು. ಅವರ ಮೇಕಪ್ ಕೂಡ ಸಿಂಪಲ್ ಆಗಿತ್ತು. ಮೃದುವಾಗಿ ಹೈಲೈಟ್ ಮಾಡಿದ ಕಣ್ಣುಗಳು, ಶೇಪ್ ಮಾಡಿದ ಹುಬ್ಬುಗಳು, ಗ್ಲೋಯಿಂಗ್ ಸ್ಕಿನ್ ಮತ್ತು ಲೈಟ್ ಪಿಂಕ್ ಲಿಪ್‌ಸ್ಟಿಕ್‌ ಲುಕ್‌ಗೆ ಇನ್ನಷ್ಟು ಸೊಬಗು ನೀಡಿತ್ತು. ಅವರ ಹೇರ್​ ಸ್ಟೈಲ್ ಸಹ ಮತ್ತೊಂದು ಆಕರ್ಷಣೆ ಎನ್ನಬಹುದು. ಮುಖದ ಸುತ್ತ ಕೆಲವು ಕೂದಲಿನ ಎಳೆಗಳನ್ನು ಹಾಗೆಯೇ ಬಿಡಲಾಗಿದ್ದು, ಒಟ್ಟಾರೆ ಈ ಲುಕ್‌ಗೆ ಅದು ಎಲಿಗಂಟ್ ಟಚ್ ನೀಡಿತ್ತು.

ಸಾಂಪ್ರದಾಯಿಕ ಸೀರೆಗೆ ಮಾಡರ್ನ್ ಟಚ್​

ಸಾರಾ ಅವರ ಈ ಲುಕ್‌ನ ವಿಶೇಷತೆ ಎಂದರೆ ಸಾಂಪ್ರದಾಯಿಕ ಬನಾರಸಿ ಸೀರೆ ಮತ್ತು ಟ್ರೆಂಡಿ ಕಾರ್ಸೆಟ್ ನಡುವಿನ ಕಾಂಟ್ರಾಸ್ಟ್. ಸೀರೆ ತನ್ನ ಸಾಂಪ್ರದಾಯಿಕ ಅಂದವನ್ನು ಉಳಿಸಿಕೊಂಡಿದ್ದರೆ, ಕಾರ್ಸೆಟ್ ಇಡೀ ಲುಕ್‌ಗೆ ಹೊಸ ಸ್ಟೈಲ್ ನೀಡಿದೆ. ಸೀರೆಗೆ ಯಾವಾಗಲೂ ಸಾಂಪ್ರದಾಯಿಕ ಬ್ಲೌಸ್‌ ಇರಬೇಕು ಎಂಬ ಕಲ್ಪನೆಗೆ ಸಾರಾ ಅವರ ಈ ಲುಕ್ ವಿಭಿನ್ನ ಉತ್ತರ ನೀಡಿದೆ. ಹೀಗಾಗಿ ಅವರ ಲುಕ್ ಇದೀಗ ಫ್ಯಾಷನ್ ಪ್ರಿಯರ ಗಮನ ಸೆಳೆಯುತ್ತಿದೆ,(ಏಜೆಮ್ಸೀಸ್​).