ಶಿವಸೇನೆ (ಉದ್ಧವ್​) ಸಂಸದ ಸಂಜಯ್​ ರಾವತ್​ 
ದೇಶ

ಭಾರತದಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ: ಸರ್ಕಾರ ಸುಳ್ಳು ಹೇಳುತ್ತಿದೆ; ಮೋದಿ ಸರ್ಕಾರಕ್ಕೆ ಸಂಜಯ್​ ರಾವತ್​ ತರಾಟೆ! Sanjay Raut on Gas Cylinder Shortage

ಪ್ರಮುಖ ಮುಖ್ಯಾಂಶಗಳು

  • ದೇಶದಲ್ಲಿ ಗ್ಯಾಸ್​ ಸಿಲಿಂಡದರ್​ ಕೊರೆತೆಯಿದೆ
  • ಸರ್ಕಾರ ಜನರಿಗೆ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು
  • ನಮ್ಮ ನೆರೆ ದೇಶಗಳಲ್ಲಿ ಲಾಕ್​ಡೌನ್​ ಹೇರಲಾಗುತ್ತಿದೆ
  • ವಿರೋಧ ಪಕ್ಷಗಳು ತಪ್ಪು ಮಾಹಿತಿ ಹಂಚಬಾರದು: ಕೇಂದ್ರ ಸರ್ಕಾರ
  • ನಮ್ಮ ಹಡಗುಗಳು ಹಾರ್ಮುಂಜ್​ ಜಲಸಂಧಿ ದಾಟಿ ಬರುತ್ತಿವೆ
ಮುಂಬೈ: ಮಧ್ಯಪ್ರಾಚ್ಯದಲ್ಲಿ ಇರಾನ್​, ಅಮೆರಿಕ ಮತ್ತು ಇಸ್ರೇಲ್​ ನಡುವೆ ನಡೆಯುತ್ತಿರುವ ಸಂಘರ್ಷದಿಂದ ಭಾರತದಲ್ಲಿ ಸಿಲಿಂಡರ್​ ಪೂರೈಕೆಯಲ್ಲಿ ವ್ಯತ್ಯಯ ಸಂಭವಿಸುತ್ತಿದೆ. ಆದರೆ ಕೇಂದ್ರ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ ಎಂದು ಶಿವಸೇನೆ (ಉದ್ಧವ್​ ಠಾಕ್ರೆ) ಸಂಸದ ಸಂಜಯ್​ ರಾವತ್​ (Sanjay Raut on Gas Cylinder Shortage) ರಗಂ ಆಗಿದ್ದಾರೆ.
ಬುಧವಾರ ( ಏ.1) ಸುದ್ದಿಗಾರರೊಂದಿದೆ ಮಾತನಾಡಿದ ಸಂಜಯ್​ ರಾವತ್​, ಜನ ಸರ್ಕಾರದ ಯಾವುದೇ ಮಾತನ್ನು ನಂಬಬೇಡಿ, ದೇಶದಲ್ಲಿ ಇಂಧನ ಕೊರತೆ ಇರುವುದು ಸತ್ಯ. ಆದರೆ ಈ ಕುರಿತು ಕೇಂದ್ರ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಇರುವುದು ದುಃಖಕರ ಸಂಗತಿಯಾಗಿದೆ ಎಂದು ಹೇಳಿದ್ದಾರೆ.

ಜನರಿಗೆ ಸುಳ್ಳು ಹೇಳಬೇಡಿ: ರಾವತ್​

ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಪರಿಸ್ಥಿತಿಗಳ ಮೇಲೆ ನಮ್ಮ ಯಾವುದೇ ನಿಯಂತ್ರಣ ಇರುವುದಿಲ್ಲ. ದಯವಿಟ್ಟು ಕೇಂದ್ರ ಸರ್ಕಾರ ಜನರಿಗೆ ಸುಳ್ಳು ಬರವಸೆಗಳನ್ನು ನೀಡುವುದನ್ನು ನಿಲ್ಲಿಸಬೇಕೆಂದು ನಾನು ಕೇಳಿಕೊಳ್ಳುತ್ತೆನೆ ಎಂದು ಅವರು ಹೇಳಿದರು.
ನಮ್ಮ ನೆರೆಯ ದೇಶಗಳಾದ ಪಾಕಿಸ್ತಾನದಲ್ಲಿ ಈಗಾಗಲೇ ಲಾಕ್​ಡೌನ್ ಘೋಷಣೆಯಾಗಿದೆ. ನಮ್ಮಲ್ಲಿ ಸಹ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಬಹುದು. ಜನರು ಇದಕ್ಕೆ ಪೂರ್ವ ತಯಾರಿ ನಡೆಸುವುದು ಒಳ್ಳೆಯದು ಎಂದು ಸಂಜಯ್​ ರಾವತ್​ ಎಚ್ಚರಿಸಿದ್ದಾರೆ.

ವಿರೋಧ ಪಕ್ಷಗಳು ಸುಳ್ಳು ವದಂತಿ ಹರಡಿಸಬೇಡಿ

ಕಾಂಗ್ರೆಸ್​, ಶಿವಸೇನೆ(ಉದ್ಧವ್​) ಸೇರಿದಂತೆ ಇತರ ವಿರೋಧ ಪಕ್ಷಗಳು ಭಾರತದಲ್ಲಿ ಇಂಧನ ವ್ಯತ್ಯಯದ ಬಗ್ಗೆ ಮಾತನಾಡಿಲಾರಂಭಿಸಿದಾಗ, ಆಡಳಿತ ಪಕ್ಷವು ನೀವು ಈ ರೀತಿಯ ವದಂತಿಗಳನ್ನು ಹಬ್ಬಿಸುವುದನ್ನು ನಿಲ್ಲಿಸಿ. ಇದರಿಂದ ಜನರಲ್ಲಿ ಭಯ ಸೃಷ್ಟಿಯಾಗುತ್ತದೆ, ನಮ್ಮಲ್ಲಿ 60 ದಿನಗಳ ಇಂಧನದ ರಿಸರ್ವಯಿದೆ, ಹಾಗೆಯೇ ನಮ್ಮ ದೇಶದ ಹಡಗುಗಳು ಹಾರ್ಮುಂಜ್​ ಜಲಸಂಧಿ ದಾಟಿ ಬರುತ್ತಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ,(ಏಜನ್ಸೀಸ್​).