ಸಂಧ್ಯಾ ದೇವನಾಥನ್ 
ದೇಶ

ಫೇಸ್​ಬುಕ್ ಮಾತೃ ಸಂಸ್ಥೆ ಮೆಟಾ ಇಂಡಿಯಾ ಮತ್ತು ಆಗ್ನೇಯ ಏಷ್ಯಾ ವಿಭಾಗದ ಮುಖ್ಯಸ್ಥೆ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಂಧ್ಯಾ ದೇವನಾಥನ್ | Sandhya Devanathan

ನವದೆಹಲಿ: ಫೇಸ್​ಬುಕ್, ವಾಟ್ಸಾಪ್ ಹಾಗೂ ಇನ್​ಸ್ಟಾಗ್ರಾಂ ಎಂಬ ಪ್ರಮುಖ ಸಾಮಾಜಿಕ ಜಾಲತಾಣಗಳ ಮಾತೃ ಸಂಸ್ಥೆಯಾದ ಮೆಟಾ ಕಂಪನಿಯ ಭಾರತ ಮತ್ತು ಆಗ್ನೇಯ ಏಷ್ಯಾ ವಿಭಾಗದ ಮುಖ್ಯಸ್ಥೆ ಸ್ಥಾನಕ್ಕೆ ಸಂಧ್ಯಾ ದೇವನಾಥನ್(Sandhya Devanathan) ಶುಕ್ರವಾರ(ಆ. 28) ರಾಜೀನಾಮೆ ಘೋಷಣೆ ಮಾಡಿದ್ದಾರೆ.
ಸುಮಾರು 10 ವರ್ಷಗಳ ಕಾಲ ಭಾರತದ ಫೇಸ್​ಬುಕ್ ಸಂಸ್ಥೆಯ ಮುಖ್ಯಸ್ಥೆಯಾಗಿದ್ದ ಸಂಧ್ಯಾ ದೇವನಾಥನ್ ಅವರು, ಲಿಂಕ್ಡ್ ಇನ್​​ನಲ್ಲಿ ಪೋಸ್ಟ್ ಮಾಡುವ ಮೂಲಕ ಸಂಧ್ಯಾ ಅವರು ರಾಜೀನಾಮೆ ಪ್ರಕಟಿಸಿದ್ದು, ಮುಂದಿನ ವೃತ್ತಿಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮೊದಲು ಸ್ವಲ್ಪ ಕಾಲ ವಿರಾಮ ಪಡೆಯುವುದಾಗಿ ತಿಳಿಸಿದ್ದಾರೆ.
ಸಂಧ್ಯಾ ಅವರ ರಾಜೀನಾಮೆ ಸಾಮಾಜಿಕ ಜಾಲತಾಣದ ಈ ಪ್ರಮುಖ ಕಂಪನಿಯಲ್ಲಿನ ಮಹತ್ವದ ನಾಯಕತ್ವ ಬದಲಾವಣೆಯಾಗಿದೆ. 2016ರಲ್ಲಿ ಅವರು ಮೆಟಾ ಸೇರಿದ್ದರು ಮತ್ತು ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಕಂಪನಿಯ ವಿವಿಧ ವ್ಯವಹಾರಗಳಲ್ಲಿ ಹಲವು ನಾಯಕತ್ವದ ಹುದ್ದೆಗಳನ್ನು ನಿರ್ವಹಿಸಿದ್ದರು.
ಅಜಿತ್ ಮೋಹನ್ ಬಳಿಕ, 2023ರಲ್ಲಿ ಸಂಧ್ಯಾ ಅವರು ಮೆಟಾ ಇಂಡಿಯಾದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು. ಭಾರತವು ಮೆಟಾದ ಅತ್ಯಂತ ಪ್ರಮುಖ ಜಾಗತಿಕ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಸೇರಿದಂತೆ ವಿವಿಧ ವೇದಿಕೆಗಳ ಬಳಕೆದಾರರನ್ನು ಹೊಂದಿದೆ.
2025 ಜೂನ್​ನಲ್ಲಿ ಸಂಧ್ಯಾ ಮೆಟಾದ ಆಗ್ನೇಯ ಏಷ್ಯಾ ವ್ಯವಹಾರವನ್ನು ನೋಡಿಕೊಳ್ಳುವ ವಿಸ್ತೃತ ಪಾತ್ರವನ್ನು ವಹಿಸಿಕೊಂಡರು ಮತ್ತು ಸಿಂಗಾಪುರಕ್ಕೆ ತೆರಳಿದರು. ಬಳಿಕ ಕಂಪನಿಯೂ 2025 ಜುಲೈನಲ್ಲಿ ಅರುಣ್ ಶ್ರೀನಿವಾಸ್ ಅವರನ್ನು ಭಾರತದ ಕಾರ್ಯಾಚರಣೆಗಳ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯಸ್ಥರನ್ನಾಗಿ ನೇಮಿಸಿತು (ಏಜೆನ್ಸೀಸ್).