ಪ್ರಧಾನಿ ನರೇಂದ್ರ ಮೋದಿ 2025ರ ಆಗಸ್ಟ್ 15ರಂದು ಕೆಂಪುಕೋಟೆಯಿಂದ ದೇಶವನ್ನು ಉದ್ದೇಶಿಸಿ ಮಾತನಾಡಿ, ‘ನಾವೀಗ ಸಮುದ್ರ ಮಂಥನದತ್ತ ಮುನ್ನಡೆಯುತ್ತಿದ್ದೇವೆ. ಆಳವಾದ ನೀರಿನಡಿ ತೈಲ, ಅನಿಲ ನಿಕ್ಷೇಪಗಳನ್ನು ಹುಡುಕಲು ನಾವು ಮಿಷನ್ ಮೋಡ್ನಲ್ಲಿ ಕೆಲಸ ಮಾಡಲು ಬಯಸುತ್ತೇವೆ’ ಎಂದು ಘೊಷಿಸಿದ್ದರು. ಈಗ ಕೇಂದ್ರ ಸರ್ಕಾರ 84,084 ಕೋಟಿ ರೂ. ವೆಚ್ಚದ ‘ಸಮುದ್ರ ಮಂಥನ’ ಯೋಜನೆಗೆ ಅನುಮೋದನೆ ನೀಡಿದೆ. ಆಳಸಮುದ್ರದಲ್ಲಿ ತೈಲ, ಅನಿಲವನ್ನು ಹೇಗೆ ಹುಡುಕಲಾಗುತ್ತದೆ? ಈ ಕುರಿತ ಮಾಹಿತಿ ಇಲ್ಲಿದೆ.
ಪೆಟ್ರೋಲಿಯಂ ಸಚಿವಾಲಯದ ‘ಸಮುದ್ರಮಂಥನ’ ಯೋಜನೆಗೆ ಕೇಂದ್ರ ಸಂಪುಟ ಜುಲೈ 31ರಂದು ಹಸಿರು ನಿಶಾನೆ ನೀಡುವ ಮೂಲಕ, ಭಾರತದ ಇಂಧನ ಭದ್ರತೆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿದೆ. ಇದು ಭಾರತದ ಅತ್ಯಂತ ದೊಡ್ಡ ‘ನ್ಯಾಷನಲ್ ಆಫ್ಶೋರ್ ಎಕ್ಸ್ಪ್ಲೋರೇಷನ್ ಪ್ರಾಜೆಕ್ಟ್’ ಆಗಿದ್ದು, ಸಮುದ್ರದ ಆಳದ ಪ್ರದೇಶಗಳಲ್ಲಿ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲವನ್ನು ಹುಡುಕುವ ಬೃಹತ್ ಯೋಜನೆಯಾಗಿದೆ. ಭಾರತದ ಕರಾವಳಿ ತೀರಕ್ಕೆ ಹೊಂದಿಕೊಂಡಿರುವ 10 ಲಕ್ಷ ಚದರ ಕಿ.ಮೀ.ಗಿಂತಲೂ ಹೆಚ್ಚಿನ ‘ವಿಶೇಷ ಆರ್ಥಿಕ ವಲಯ’ ವ್ಯಾಪ್ತಿಯಲ್ಲಿ ಈ ಅನ್ವೇಷಣೆ ನಡೆಯಲಿದೆ ಎಂಬುದು ಗಮನಾರ್ಹ.
ಕೃಷ್ಣಾ-ಗೋದಾವರಿ, ಕಾವೇರಿ, ಮಹಾನದಿಯಂತಹ ನದಿ ಪಾತ್ರಗಳು ಮತ್ತು ಅಂಡಮಾನ್ನ ಆಳಸಮುದ್ರದಲ್ಲಿ ಅಪಾರ ಪ್ರಮಾಣದ ತೈಲ, ನೈಸರ್ಗಿಕ ಅನಿಲದ ಭಂಡಾರಗಳಿವೆ. ಅದನ್ನು ಪತ್ತೆ ಹಚ್ಚಿ, ಕೊರೆಯುವಿಕೆ ಮುಗಿಸಿ ಉತ್ಪಾದನೆ ಆರಂಭಿಸಲು 510 ವರ್ಷ ಬೇಕಾಗುತ್ತದೆ. ಸಮುದ್ರದಲ್ಲಿ ತೈಲದ ಒಂದು ಬಾವಿಯನ್ನು ಕೊರೆಯಲು -ಠಿ;1,192 ಕೋಟಿಯಿಂದ -ಠಿ;1,431 ಕೋಟಿ ವೆಚ್ಚವಾಗುತ್ತದೆ. 2031ರವರೆಗಿನ ಯೋಜನೆಯ ಮೊದಲ ಹಂತದಲ್ಲಿ ಒಟ್ಟು -ಠಿ;84,084 ಕೋಟಿ ವೆಚ್ಚವಾಗಲಿದೆ. ದೇಶದಲ್ಲಿ ಪ್ರಸ್ತುತ ಇರುವ ತೈಲ ಮತ್ತು ಗ್ಯಾಸ್ ಬಾವಿಗಳಿಂದ ತೈಲ ಉತ್ಪಾದನೆ ಪ್ರತಿವರ್ಷ ಶೇಕಡ 6ರಿಂದ 7 ರಷ್ಟು ಕುಸಿಯುತ್ತಿದೆ. ಹೀಗಾಗಿ ದೇಶೀಯ ತೈಲ ಪೂರೈಕೆಯನ್ನು ಸ್ಥಿರವಾಗಿಡಲು ಹೊಸ ಬಾವಿಗಳನ್ನು ಹುಡುಕುವುದು ಅತ್ಯಗತ್ಯವಾಗಿದೆ.
ಬಜೆಟ್ ಹಂಚಿಕೆ
2031ರ ಮಾರ್ಚ್ವರೆಗಿನ ಯೋಜನೆಯ ಮೊದಲ ಹಂತದಲ್ಲಿ ಒಟ್ಟು -ಠಿ;84,084 ಕೋಟಿ ವೆಚ್ಚವಾಗಲಿದೆ. ಇದರಲ್ಲಿ -ಠಿ;28,500 ಕೋಟಿಯನ್ನು ಸಿಸ್ಮಿಕ್ ಡೇಟಾ ಸಂಗ್ರಹಿಸಲು ಮತ್ತು -ಠಿ;43,200 ಕೋಟಿ ವೆಚ್ಚದಲ್ಲಿ ಆಳ ಸಮುದ್ರದಲ್ಲಿ 60 ಅನ್ವೇಷಣಾ ಬಾವಿಗಳನ್ನು ಕೊರೆಯಲು ಮೀಸಲಿಡಲಾಗಿದೆ. ಸಮುದ್ರದಲ್ಲಿ ಕೊರೆಯುವ ಪ್ರತಿ ಬಾವಿಗೆ ಸರ್ಕಾರ ಗರಿಷ್ಠ -ಠಿ;675 ಕೋಟಿ ಅಥವಾ ಒಟ್ಟು ವೆಚ್ಚದ ಶೇ.50ರಷ್ಟು ಹಣಕಾಸಿನ ನೆರವು ನೀಡಲಿದೆ. ಉಳಿದ ವೆಚ್ಚವನ್ನು ಯೋಜನೆಯಲ್ಲಿ ಭಾಗವಹಿಸುವ ತೈಲ ಕಂಪನಿ ಭರಿಸಬೇಕಾಗುತ್ತದೆ.
ಆಳ ಸಮುದ್ರದಿಂದ ತೈಲ ಪತ್ತೆ ಹಚ್ಚಿ ಹೊರತೆಗೆಯುವುದು ಹೇಗೆ?
ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲವು ಸಮುದ್ರ ಹಾಗೂ ನದಿಗಳ ಆಳವಾದ ನೀರಿನ ಅಡಿಯಲ್ಲಿರುವ ಬಂಡೆಗಳ ನಡುವೆ ಸಿಗುತ್ತದೆ. ಮೃತಪಟ್ಟ ಸಮುದ್ರ ಜೀವಿಗಳು, ಸಸ್ಯಗಳು ಸಮುದ್ರದ ತಳಭಾಗದಲ್ಲಿ ಸಿದ್ಧಗೊಂಡ ಬಂಡೆಗಳ ಅಡಿಯಲ್ಲಿ ಕೋಟ್ಯಂತರ ವರ್ಷಗಳ ಕಾಲ ಸಿಲುಕಿ ದೀರ್ಘಕಾಲದ ತಾಪಮಾನ ಮತ್ತು ಒತ್ತಡಕ್ಕೆ ಒಳಗಾದಾಗ ಹೈಡ್ರೋಕಾರ್ಬನ್ಗಳು ರೂಪುಗೊಳ್ಳುತ್ತವೆ. ಇವುಗಳಿಂದಲೇ ಕಚ್ಚಾ ತೈಲ ಮತ್ತು ಗ್ಯಾಸ್ ಉತ್ಪತ್ತಿಯಾಗುತ್ತದೆ. ಮುಂದೆ ತೈಲ ಸಂಸ್ಕರಣಾ ಕಂಪನಿಗಳು ಇವುಗಳನ್ನು ಸಂಸ್ಕರಿಸಿ ಪೆಟ್ರೋಲ್, ಡೀಸೆಲ್ ಮತ್ತು ಅನಿಲವಾಗಿ ಪರಿವರ್ತಿಸುತ್ತವೆ.
ಸಮುದ್ರದಡಿಯಿಂದ ತೈಲ-ಗ್ಯಾಸ್ ಪತ್ತೆ ಹಚ್ಚಿ, ಉತ್ಪಾದನೆ ಮಾಡುವ ಪ್ರಕ್ರಿಯೆಯಲ್ಲಿ ಪ್ರಮುಖವಾಗಿ 4 ಹಂತಗಳಿವೆ.
ಹಂತ:1
ಸರ್ವೆ ಹಡಗುಗಳ ಮೂಲಕ ತೈಲದ ಶೋಧನೆ (ಸಿಸ್ಮಿಕ್ ಸರ್ವೆ)
ತೈಲ ಹುಡುಕಾಟದ ಮೊದಲ ಹಂತದಲ್ಲಿ ಸಿಸ್ಮಿಕ್ ಸರ್ವೆ ನಡೆಸುವ ವಿಶೇಷ ಹಡಗುಗಳನ್ನು ಬಳಸಲಾಗುತ್ತದೆ. ಈ ಹಡಗುಗಳು ಉದ್ದನೆಯ ಕೇಬಲ್ಗಳ ಮೂಲಕ ನೀರಿನೊಳಗೆ ಏರ್-ಗನ್ ಅರೇ ಸಿಸ್ಟಮ್ (ಗಾಳಿಯ ಒತ್ತಡದ ಯಂತ್ರಗಳು) ಹಾಕಿ ಸಮುದ್ರದಲ್ಲಿ ಚಲಿಸುತ್ತವೆ. ಈ ಯಂತ್ರಗಳು ನೀರಿನ ಅಡಿಯಲ್ಲಿ ತೀವ್ರ ಧ್ವನಿಯುಳ್ಳ ಶಬ್ದ ತರಂಗಗಳನ್ನು ಹೊರಸೂಸುತ್ತವೆ. ಈ ಧ್ವನಿ ತರಂಗಗಳು ಸಮುದ್ರದ ಅಡಿಯ ಬಂಡೆಗಳಿಗೆ ಅಪ್ಪಳಿಸಿ ಮತ್ತೆ ಮೇಲ್ಮೈಗೆ ಹಿಂತಿರುಗುತ್ತವೆ.
ಅಲ್ಟ್ರಾಸೌಂಡ್ ತಂತ್ರಜ್ಞಾನ: ಕೇಬಲ್ನಲ್ಲಿ ಅಳವಡಿಸಲಾದ ಹೈಡ್ರೋಫೋನ್ ಸಾಧನಗಳು ಹಿಂತಿರುಗುವ ಧ್ವನಿ ತರಂಗಗಳನ್ನು ದಾಖಲಿಸುತ್ತವೆ. ಇದನ್ನು ಸಮುದ್ರದ ಗರ್ಭದ ‘ಅಲ್ಟ್ರಾಸೌಂಡ್’ ಪರೀಕ್ಷೆ ಎಂದೇ ಕರೆಯಬಹುದು.
3ಡಿ ನಕ್ಷೆ ತಯಾರಿಕೆ: ಈ ಡೇಟಾವನ್ನು ಆಧರಿಸಿ ಸಮುದ್ರದಾಳದ ಭೂಗರ್ಭದ 3ಡಿ ನಕ್ಷೆಯನ್ನು ತಯಾರಿಸಲಾಗುತ್ತದೆ. ಇದರಿಂದ ಸಮುದ್ರದ ಯಾವ ಬಂಡೆಗಳ ಅಡಿಯಲ್ಲಿ ಹೈಡ್ರೋಕಾರ್ಬನ್ಗಳು (ತೈಲ ಮತ್ತು ಗ್ಯಾಸ್) ಅಡಗಿರಬಹುದು ಎಂಬುದು ನಿಖರವಾಗಿ ತಿಳಿಯುತ್ತದೆ.
ಹಂತ:2 ಶೋಧನಾ ಬಾವಿಯ ಕೊರೆಯುವಿಕೆ (ಎಕ್ಸ್ಪ್ಲೋರೇಷನ್ ಡ್ರಿಲ್ಲಿಂಗ್)
ಸಿಸ್ಮಿಕ್ ಸರ್ವೆಯಲ್ಲಿ ತೈಲ ಮತ್ತು ಅನಿಲ ಇರುವ ಸೂಚನೆಗಳು ದೊರೆತ ನಂತರ, ಅದನ್ನು ಖಚಿತಪಡಿಸಿಕೊಳ್ಳಲು ಎಕ್ಸ್ಪ್ಲೋರೇಷನ್ ವೆಲ್ (ಶೋಧನಾ ಬಾವಿ) ಕೊರೆಯಲಾಗುತ್ತದೆ. ಇದಕ್ಕಾಗಿ ವಿಭಿನ್ನ ಮಾದರಿಯ ಹಡಗುಗಳು ಹಾಗೂ ಬೃಹತ್ ಯಂತ್ರೋಪಕರಣಗಳನ್ನು ಬಳಸಲಾಗುತ್ತದೆ. ಉದಾಹರಣೆಗೆ ಸೆಮಿ-ಸಬ್ವುರ್ಸಿಬಲ್ ರಿಗ್, ಡ್ರಿಲ್ ಶಿಪ್ ಹಾಗೂ ಜ್ಯಾಕ್-ಅಪ್ ಇತ್ಯಾದಿ. ಇವುಗಳನ್ನು ತಾಂತ್ರಿಕವಾಗಿ ಮೊಬೈಲ್ ಆಫ್ಶೋರ್ ಡ್ರಿಲ್ಲಿಂಗ್ ಯೂನಿಟ್ಸ್ (ಎಂಒಡಿಯು) ಎಂದು ಕರೆಯಲಾಗುತ್ತದೆ.
ವಿಶೇಷ ರಿಗ್ಗಳ ಬಳಕೆ: ಸೆಮಿ-ಸಬ್ವುರ್ಸಿಬಲ್ ರಿಗ್ಗಳು ನೀರಿನಲ್ಲಿ ಭಾಗಶಃ ಮುಳುಗಿರುವ ಬೃಹತ್ ಪ್ಯಾಂಟೂನ್ಗಳ ಮೇಲ್ಮೈನಲ್ಲಿ ತೇಲುತ್ತಿರುತ್ತವೆ. ಇನ್ನು ಕೆಲವು ಕಡೆ ನೇರವಾಗಿ ಕೊರೆಯುವ ಯಂತ್ರಗಳನ್ನು ಹೊಂದಿರುವ ಡ್ರಿಲ್ ಶಿಪ್ಗಳನ್ನು ನಿಯೋಜಿಸಲಾಗುತ್ತದೆ.
ಹಂತ:3 ಗುಣಮಟ್ಟ ಮತ್ತು ಪ್ರಮಾಣದ ವಿಶ್ಲೇಷಣೆ (ಅಪ್ರೖೆಸಲ್ ವೆಲ್ಸ್)
ಸಿಸ್ಮಿಕ್ ಸರ್ವೆ ಮತ್ತು ಶೋಧನಾ ಬಾವಿಗಳಿಂದ ತೈಲ ಅಥವಾ ಅನಿಲದ ಇರುವಿಕೆ ತಿಳಿಯುತ್ತದೆಯೇ ಹೊರತು ಅಲ್ಲಿ ಎಷ್ಟು ಪ್ರಮಾಣದ ಒಟ್ಟು ಸಂಗ್ರಹವಿದೆ (ರಿಸರ್ವ್) ಮತ್ತು ಅದರ ಗುಣಮಟ್ಟ ಹೇಗಿದೆ ಎಂಬುದು ನಿಖರವಾಗಿ ತಿಳಿಯುವುದಿಲ್ಲ. ಇದಕ್ಕಾಗಿ ಆ ಪ್ರದೇಶದ ಬೇರೆ ಬೇರೆ ಭಾಗಗಳಲ್ಲಿ ಹಲವು ಅಪೆ ್ರೖಲ್ ವೆಲ್ (ಮೌಲ್ಯಮಾಪನ ಬಾವಿ)ಗಳನ್ನು ಕೊರೆಯಲಾಗುತ್ತದೆ.
ಇಂಜಿನಿಯರ್ಗಳು ತೈಲ ಸಂಗ್ರಹವಿರುವ ಆಳ, ಒಳಗಿನ ಒತ್ತಡ ಮತ್ತು ಪ್ರಮಾಣವನ್ನು ಸಂಪೂರ್ಣವಾಗಿ ವಿಶ್ಲೇಷಿಸುತ್ತಾರೆ. ಈ ಸ್ಥಳದಿಂದ ತೈಲವನ್ನು ಹೊರತೆಗೆಯುವುದು ಆರ್ಥಿಕವಾಗಿ ಲಾಭದಾಯಕವೇ ಅಥವಾ ಇಲ್ಲವೇ ಎಂಬುದನ್ನು ಈ ಹಂತದಲ್ಲಿ ತೀರ್ವನಿಸಲಾಗುತ್ತದೆ.
ಉತ್ಪಾದನಾ ಬಾವಿಗಳು: ಈ ಮೌಲ್ಯಮಾಪನದ ಆಧಾರದ ಮೇಲೆಯೇ ತೈಲ ಮತ್ತು ಗ್ಯಾಸ್ ಹೊರತೆಗೆಯಲು ಎಷ್ಟು ಪೊ›ಡಕ್ಷನ್ ವೆಲ್ (ಉತ್ಪಾದನಾ ಬಾವಿ)ಗಳನ್ನು ಕೊರೆಯಬೇಕು ಮತ್ತು ಅವುಗಳನ್ನು ಯಾವ ನಿಖರ ಸ್ಥಳಗಳಲ್ಲಿ ನಿರ್ವಿುಸಬೇಕು ಎಂಬುದು ಅಂತಿಮಗೊಳ್ಳುತ್ತದೆ.
ಹಂತ: 4 ತೈಲ-ಅನಿಲ ಉತ್ಪಾದನೆ
ಸಮುದ್ರದಾಳದಲ್ಲಿ ಸಾಕಷ್ಟು ಪ್ರಮಾಣದ ತೈಲ ಸಂಗ್ರಹವಿರುವುದು ದೃಢಪಟ್ಟರೆ, ಮುಂದಿನ ಹಂತವಾಗಿ ಪೊ›ಡಕ್ಷನ್ ಪ್ಲಾಟ್ಫಾಮರ್್ಗಳನ್ನು ನಿರ್ವಿುಸಲಾಗುತ್ತದೆ. ಸಾಮಾನ್ಯವಾಗಿ ಇವುಗಳನ್ನು ಕರಾವಳಿಯ ಸಮೀಪ ನಿರ್ವಿುಸಿ, ಸಮುದ್ರದಾಳದ ಬಾವಿಗಳಿಗೆ ಸಂರ್ಪಸಲಾಗುತ್ತದೆ. ಪೈಪ್ಗಳ ಮೂಲಕ ಬಂಡೆಗಳನ್ನು ಸೀಳಿ ತೈಲ ನಿಕ್ಷೇಪವನ್ನು ತಲುಪುತ್ತವೆ. ಆ ನಂತರ ಬಾವಿ ಕುಸಿಯದಂತೆ ತಡೆಯಲು ಅದರ ಸುತ್ತ ಉಕ್ಕಿನ ಕವಚವನ್ನು ಅಳವಡಿಸಿ ಬಲಪಡಿಸಲಾಗುತ್ತದೆ. ಪೊ›ಡಕ್ಷನ್ ಟ್ಯೂಬ್ಗಳನ್ನು ಅಳವಡಿಸಿದ ನಂತರ ಬಾವಿಯಿಂದ ತೈಲ ಮತ್ತು ಅನಿಲವನ್ನು ಮೇಲೆತ್ತಲು ಪ್ರಾರಂಭಿಸಲಾಗುತ್ತದೆ. ಪ್ಲಾಟ್ಫಾಮರ್್ಗೆ ತಲುಪಿದ ತೈಲ, ಗ್ಯಾಸ್ ಮತ್ತು ನೀರನ್ನು ಪ್ರತ್ಯೇಕಿಸಲಾಗುತ್ತದೆ. ತದನಂತರ ಸಂಸ್ಕರಿಸಿದ ಕಚ್ಚಾ ತೈಲ ಮತ್ತು ಅನಿಲವನ್ನು ಬೃಹತ್ ಪೈಪ್ಲೈನ್ಗಳ ಮೂಲಕ ಕರಾವಳಿಯಲ್ಲಿರುವ ತೈಲ ಸಂಸ್ಕರಣಾಗಾರಗಳಿಗೆ ರವಾನಿಸಲಾಗುತ್ತದೆ.
ಪ್ರಸ್ತುತ ಸ್ಥಿತಿ
ಭಾರತವು ಜಗತ್ತಿ ನಲ್ಲಿಯೇ ಕಚ್ಚಾ ತೈಲವನ್ನು ಅತ್ಯಧಿಕವಾಗಿ ಬಳಸುವ ಮೂರನೇ ಅತಿದೊಡ್ಡ ದೇಶವಾಗಿದೆ. ಸರ್ಕಾರದ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಭಾರತವು ತನ್ನ ಒಟ್ಟು ಕಚ್ಚಾ ತೈಲ ಅಗತ್ಯದ ಶೇಕಡ 88ರಷ್ಟನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಇದಕ್ಕಾಗಿ ದೇಶವು ವಾರ್ಷಿಕವಾಗಿ 144 ಬಿಲಿಯನ್ ಡಾಲರ್ ಅಂದರೆ -ಠಿ;13 ಲಕ್ಷ ಕೋಟಿ ಹಣವನ್ನು ವೆಚ್ಚ ಮಾಡುತ್ತಿದೆ. ಭಾರತವು ತನ್ನ ಒಟ್ಟು ತೈಲ ಅಗತ್ಯದ ಶೇ.12ರಷ್ಟನ್ನು ಮಾತ್ರ ಸ್ವತಃ ಉತ್ಪಾದಿಸಲು ಶಕ್ತವಾಗಿದೆ. ಈ ಉತ್ಪಾದನೆಯಲ್ಲಿ ಶೇ.47ರಷ್ಟು ಪಾಲು ಆನ್ಶೋರ್ (ನೆಲದ ಮೇಲಿನ ಬಾವಿಗಳು)ನಿಂದ ಬಂದರೆ, ಶೇ.53ರಷ್ಟು ಪಾಲು ಆಫ್ಶೋರ್ (ಸಮುದ್ರದಲ್ಲಿರುವ ಬಾವಿಗಳು) ನಿಂದ ದೊರೆಯುತ್ತದೆ.
ಪೆಟ್ರೋಲಿಯಂ ಪ್ಲಾನಿಂಗ್ ಆಂಡ್ ಅನಾಲಿಸಿಸ್ ಸೆಲ್ನ ಮಾಹಿತಿಯಂತೆ, 2025-26ರಲ್ಲಿ ಭಾರತವು ಒಟ್ಟು 28 ಮಿಲಿಯನ್ ಮೆಟ್ರಿಕ್ ಟನ್ ಕಚ್ಚಾ ತೈಲವನ್ನು ಉತ್ಪಾದಿಸಿದೆ. ಭಾರತದ ಭೂಭಾಗ ಹಾಗೂ ಕರಾವಳಿ ವ್ಯಾಪ್ತಿಯಲ್ಲಿ ತೈಲ ಮತ್ತು ಗ್ಯಾಸ್ ನಿಕ್ಷೇಪಗಳನ್ನು ಹೊಂದಿರುವ 26 ಪ್ರಮುಖ ಪ್ರದೇಶಗಳನ್ನು ಗುರುತಿಸಲಾಗಿದ್ದು, ಇವುಗಳಲ್ಲಿ ನೂರಾರು ತೈಲ ಬಾವಿಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ಭಾರತದ ಪಶ್ಚಿಮ ಕರಾವಳಿಯಲ್ಲಿರುವ ‘ಮುಂಬೈ ಹೈ’ ದೇಶದ ದೊಡ್ಡ ಆಫ್ಶೋರ್ (ಸಮುದ್ರ) ತೈಲ ಕ್ಷೇತ್ರವಾಗಿದೆ. ಇದಲ್ಲದೆ ಆಂಧ್ರಪ್ರದೇಶ ಕರಾವಳಿಯ ಕೃಷ್ಣಾ-ಗೋದಾವರಿ ಬೇಸಿನ್, ಒಡಿಶಾ-ಪಶ್ಚಿಮ ಬಂಗಾಳದ ಮಹಾನದಿ ಮತ್ತು ಅಂಡಮಾನ್ ಸಮುದ್ರದ ಅಂಡಮಾನ್ ಬೇಸಿನ್ಗಳು ಸಮುದ್ರದಲ್ಲಿ ತೈಲ-ಅನಿಲ ಹೊಂದಿರುವ ಪ್ರಮುಖ ಆಫ್ಶೋರ್ ಪ್ರದೇಶಗಳಾಗಿವೆ. ಇವುಗಳ ಜೊತೆಗೆ ಅಸ್ಸಾಂ, ಗುಜರಾತ್, ರಾಜಸ್ಥಾನ ಮತ್ತು ತಮಿಳುನಾಡಿನ ಕಾವೇರಿ ಬೇಸಿನ್ನಲ್ಲಿ ಆನ್ಶೋರ್ (ನೆಲದ ಮೇಲಿನ) ತೈಲ ಬಾವಿಗಳಿವೆ.