ಅಭಿಮಾನಿಗಳ​ ಜತೆ ತಾಯ್ತನದ ಅನುಭವ ಹಂಚಿಕೊಂಡ ನಟಿ ಸಮಂತಾ  
ದೇಶ

11 ಕೆಜಿ ತೂಕ ಹೆಚ್ಚಾಗಿದೆ... ಪ್ರೆಗ್ನೆನ್ಸಿ ಬಗ್ಗೆ ಸಮಂತಾ ಓಪನ್ ಟಾಕ್, ಹೇಳಿದ್ದೇನು ಗೊತ್ತಾ? | Samantha Pregnancy Update

ಪ್ರಮುಖ ಮುಖ್ಯಾಂಶಗಳು

  • ಫ್ಯಾನ್ಸ್​ ಜತೆ ತಾಯ್ತನದ ಅನುಭವ ಹಂಚಿಕೊಂಡ ಸಮಂತಾ
  • ಈಗಾಗಲೇ ಪ್ರೆಗ್ನೆನ್ಸಿಯಲ್ಲಿ 11 ಕೆಜಿ ತೂಕ ಹೆಚ್ಚಾಗಿದೆ ಎಂದ ಸ್ಯಾಮ್​
Samantha Motherhood: ನಟಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಸಮಂತಾ ರುತ್ ಪ್ರಭು ತಮ್ಮ ಜೀವನದ ಹೊಸ ಹಂತವನ್ನು ಅನುಭವಿಸುತ್ತಿದ್ದಾರೆ. ಆಗಾಗ ತಮ್ಮ ಪ್ರೆಗ್ನೆನ್ಸಿ ಜರ್ನಿಯ ಸಣ್ಣ ಸಣ್ಣ ಕ್ಷಣಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಇನ್‌ಸ್ಟಾಗ್ರಾಂನಲ್ಲಿ ನಡೆದ ‘ಆಸ್ಕ್ ಮಿ ಎನಿಥಿಂಗ್’ನಲ್ಲಿ(AMA) ತಮ್ಮ ತಾಯ್ತನದ ಅನುಭವದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಈ ವೇಳೆ, ಸಮಂತಾ ಹೊಸದಾಗಿ ತಾಯಂದಿರಾದ ಅಭಿಮಾನಿಗಳಿಗೆ, ‘ನ್ಯೂ ಮಾಮಾಸ್, ಹೇಗಿದ್ದೀರಾ?’ ಎಂದು ಕೇಳಿದ್ದಾರೆ. ಇದಕ್ಕೆ ಹಲವು ಅಭಿಮಾನಿಗಳು ತಮ್ಮ ಮದರ್‌ಹುಡ್ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅವರ ಮಾತುಗಳಿಗೆ ಪ್ರತಿಕ್ರಿಯಿಸುತ್ತಾ ಸಮಂತಾ ಕೂಡ ತಮ್ಮ ಪ್ರೆಗ್ನೆನ್ಸಿ ಅಪ್‌ಡೇಟ್ ನೀಡಿದ್ದಾರೆ.

11 ಕೆಜಿ ತೂಕ ಹೆಚ್ಚಾಗಿದೆ

ಒಬ್ಬ ಅಭಿಮಾನಿ ಬಸಿರಿನ ವೇಳೆ ತೂಕ ಹೆಚ್ಚಾಗುತ್ತಿರುವ ಬಗ್ಗೆ ಮಾತನಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಮಂತಾ, ಈಗಾಗಲೇ 11 ಕೆಜಿ ತೂಕ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಇನ್ನೊಬ್ಬ ಅಭಿಮಾನಿ ‘ಮಾಮ್ ಬ್ರೈನ್’ ಬಗ್ಗೆ ಹೇಳಿಕೊಂಡಿದ್ದು, ಕೆಲವೊಮ್ಮೆ ಏನು ಹೇಳಬೇಕು ಅಂತ ಗೊತ್ತಿಲ್ಲದಿದ್ದರೂ ವಾಕ್ಯ ಶುರು ಮಾಡಿಬಿಡುತ್ತೇನೆ ಎಂದು ಹಂಚಿಕೊಂಡಿದ್ದಾರೆ. ಇದಕ್ಕೆ ಸಮಂತಾ ಕೂಡ ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ಹೊಸ ತಾಯಿ ಮಗುವಿಗೆ ಹಾಲುಣಿಸುವುದು, ತೂಗುವುದು ಹೀಗೆ ದಿನವಿಡೀ ಬ್ಯುಸಿಯಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಇದಕ್ಕೆ ಸಮಂತಾ, ‘ಅದು ಈಗಾಗಲೇ ಫುಲ್‌ಟೈಮ್ ಜಾಬ್‌ನಂತೆ ಕಾಣ್ತಿದೆ’ ಎಂದು ತಮಾಷೆಯಾಗಿ ಹೇಳಿದ್ದಾರೆ.
11 ಕೆಜಿ ತೂಕ ಹೆಚ್ಚಾಗಿದೆ ಎಂದ ಸಮಂತಾ

ಈ ಅನುಭವ ನನ್ನನ್ನು ಮತ್ತಷ್ಟು ಗಟ್ಟಿ ಮಾಡಿದೆ

ತಾಯ್ತನ ತನ್ನಲ್ಲಿ ಮತ್ತಷ್ಟು ಸಾಧಿಸಬೇಕು ಎಂಬ ಉತ್ಸಾಹ ಮೂಡಿಸಿದೆ ಎಂದು ಅಭಿಮಾನಿಯೊಬ್ಬರು ಹೇಳಿಕೊಂಡಿದ್ದಾರೆ. ಇದಕ್ಕೆ ಸಮಂತಾ ಕೂಡ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ‘ಈ ಇಡೀ ಅನುಭವ ನನ್ನನ್ನು ಇಷ್ಟು ಎಂಪವರ್ಡ್ ಮಾಡುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ನಾನು ಹೆಚ್ಚಾಗಿ ಓವರ್‌ವೆಲ್ಮ್ ಆಗಬಹುದು ಎಂದುಕೊಂಡಿದ್ದೆ” ಎಂದು ಸಮಂತಾ ಹೇಳಿದ್ದಾರೆ. ಬಸಿರಿನ ಈ ಹಂತವನ್ನು ಎಂಜಾಯ್ ಮಾಡ್ತಿದ್ದೀರಾ ಎಂದು ಮತ್ತೊಬ್ಬ ಅಭಿಮಾನಿ ನೇರವಾಗಿ ಕೇಳಿದಾಗ, ಸಮಂತಾ ‘ನನ್ನ ಹೃದಯಪೂರ್ವಕವಾಗಿ’ ಎಂದು ಭಾವುಕರಾಗಿದ್ದಾರೆ.

ವಿಯೆಟ್ನಾಂನಲ್ಲಿ ಬೇಬಿಮೂನ್

ಸಮಂತಾ ಇತ್ತೀಚೆಗೆ ತಮ್ಮ ಬೇಬಿಮೂನ್‌ನ ಕೆಲವು ಫೋಟೋಗಳನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಫೋಟೋಗಳಿಗೆ ಅಭಿಮಾನಿಗಳಿಂದ ಭರ್ಜರಿ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಸಮಂತಾ ಮತ್ತು ರಾಜ್ ನಿಡಿಮೋರು 2025ರಲ್ಲಿ ಕೊಯಮತ್ತೂರಿನ ಈಶಾ ಯೋಗ ಕೇಂದ್ರದಲ್ಲಿ ನಡೆದ ಸಾಂಪ್ರದಾಯಿಕ ಯೋಗಿಕ್ ಸಮಾರಂಭದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಇಬ್ಬರೂ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ತಾಯ್ತನದ ಹೊಸ ಪಯಣಕ್ಕೆ ಕಾಲಿಟ್ಟಿರುವ ಸಮಂತಾ, ಈ ವಿಶೇಷ ಕ್ಷಣಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳ ಜತೆ ನಿರಂತರವಾಗಿ ಹಂಚಿಕೊಳ್ಳುತ್ತಿದ್ದಾರೆ,(ಏಜೆನ್ಸೀಸ್).