ಹೈದರಾಬಾದ್: ನಟಿ ಸಮಂತಾ ( Samantha) ಮತ್ತು ರಾಜ್ ನಿಧಿಮೋರು ಕೊಯಮತ್ತೂರಿನ ಇಶಾ ಫೌಂಡೇಶನ್‌ನಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ನಡೆದ ಅತ್ಯಂತ ಸರಳ ಸಮಾರಂಭದಲ್ಲಿ ವಿವಾಹವಾದರು. ಸಮಂತಾ ಆಪ್ತ ಸ್ನೇಹಿತೆ ಹಾಗೂ ಮೇಕಪ್ ಸ್ಟೈಲಿಸ್ಟ್ ಸಾದ್ನಾ ಸಿಂಗ್ ಅವರ ಪೋಸ್ಟ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಸಮಂತಾ ಇನ್ಸ್ಟಾಗ್ರಾಮ್ನಲ್ಲಿ ಮದುವೆಯ ಫೋಟೋವನ್ನು ಹಂಚಿಕೊಳ್ಳುತ್ತಿದ್ದಂತೆ ಚಲನಚಿತ್ರ ನಟ ಹಾಗೂ ನಟಿಯರು ಮತ್ತು ಅಭಿಮಾನಿಗಳು ಸಮಂತಾ ಮತ್ತು ರಾಜ್ ನಿಧಿಮೋರು ಅವರ ವಿವಾಹಕ್ಕೆ ಶುಭ ಹಾರೈಸುತ್ತಿದ್ದಾರೆ. ಮತ್ತೊಂದೆಡೆ, ಕೆಲವರು ಪರೋಕ್ಷವಾಗಿ ವಿವಾಹದ ಬಗ್ಗೆ ಪೋಸ್ಟ್ ಮಾಡಿದ್ದಾರೆ.
ಟಾಲಿವುಡ್ ನಾಯಕಿ ಪೂನಂ ಕೌರ್ , "ನಿಮ್ಮ ಸ್ವಂತ ಗೂಡು ಕಟ್ಟಲು ಬೇರೊಬ್ಬರ ಮನೆಯನ್ನು ಕೆಡವುವುದು ದುಃಖಕರ" ಎಂಬ ಪೋಸ್ಟ್ ವೈರಲ್ ಆಗಿತ್ತು. ಅವರು ಯಾರನ್ನು ಉಲ್ಲೇಖಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲವಾದರೂ, ಸಮಂತಾ ಅವರ ಮದುವೆಯ ನಂತರ ಸಾಕಷ್ಟು ಚರ್ಚೆ ನಡೆಯಿತು.
ಈಗ, ಸಮಂತಾ ಅವರ ಮಾಜಿ ವೈಯಕ್ತಿಕ ಮೇಕಪ್ ಸ್ಟೈಲಿಸ್ಟ್ ಸದ್ನಾ ಸಿಂಗ್ ಅವರ ಪೋಸ್ಟ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. "ಖಳನಾಯಕ ಬಲಿಪಶುವಿನ ಪಾತ್ರವನ್ನು ತುಂಬಾ ಚೆನ್ನಾಗಿ ನಿರ್ವಹಿಸುತ್ತಾನೆ" ಎಂದು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ತಕ್ಷಣವೇ ಸಮಂತಾ ಅವರನ್ನು ಅನ್ಫಾಲೋ ಮಾಡಿರುವುದು ಚರ್ಚೆಯ ವಿಷಯವಾಯಿತು.
ಸದ್ನಾ ಮತ್ತು ಸಮಂತಾ ಒಳ್ಳೆಯ ಸ್ನೇಹಿತರಾಗಿದ್ದರು. ಆದರೆ ಯಾರ ಹೆಸರನ್ನು ಉಲ್ಲೇಖಿಸದೆ ಯಾಕೆ? ಹೀಗೆ ಪೋಸ್ಟ್ ಮಾಡಿದರು? ಸಮಂತಾ ಯಾಕೆ ಸದ್ನಾ ಅವರ ಖಾತೆಯನ್ನು ಅನ್ಫಾಲೋ ಮಾಡಿದರು ಎನ್ನುವುದು ಇದೀಗ ಚರ್ಚೆಯಾಗುತ್ತಿದೆ.
ವೃತ್ತಿಜೀವನ ಉತ್ತಮ ಸ್ಥಿತಿಯಲ್ಲಿದ್ದಾಗ, ಅವರು ನಾಗ ಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾದರು. ಆದರೆ ಅವರು ನಾಲ್ಕು ವರ್ಷಗಳ ನಂತರ ವಿಚ್ಛೇದನ ಪಡೆದರು. ಅದಾದ ನಂತರ, ಕೆಲವು ವರ್ಷಗಳ ಕಾಲ ಒಂಟಿಯಾಗಿದ್ದ ಸಮಂತಾ ಈಗ ರಾಜ್ ನಿಧಿಮೋರು ಅವರನ್ನು ವಿವಾಹವಾದರು. ರಾಜ್ ಈ ಹಿಂದೆ ಶ್ಯಾಮಲಿ ಅವರನ್ನು ವಿವಾಹವಾಗಿದ್ದರು. ಅವರಿಗೆ ಮಕ್ಕಳಿದ್ದಾರೆ. ಆದರೆ ಅವರು ಆಕೆಗೆ ವಿಚ್ಛೇದನ ನೀಡಿದ್ದಾರೆ.