ಸಾಂದರ್ಭಿಕ ಚಿತ್ರ 
ದೇಶ

ಸಾಯಿ ಸುದರ್ಶನ್ ಶತಕದ ಅಬ್ಬರ; ಆರ್​ಸಿಬಿಗೆ 206 ರನ್​ಗಳ ಗುರಿ ನೀಡಿದ ಗುಜರಾತ್ ಟೈಟನ್ಸ್​ | RCB vs GT

RCB vs GT: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ 19ನೇ ಆವೃತ್ತಿಯ ನಿರೀಕ್ಷಿತ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಗುಜರಾತ್ ಟೈಟನ್ಸ್ ಬೃಹತ್ ಮೊತ್ತ ಕಲೆ ಹಾಕಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಾಯಿ ಸುದರ್ಶನ್ ಅವರ ಭರ್ಜರಿ ಶತಕದಾಟದಿಂದ ಜಿಟಿ ತಂಡ 20 ಓವರ್​ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 205ರನ್​ ಗಳಿಸಿದೆ. 
ಶುಭಮನ್ ಗಿಲ್ ಅವರೊಂದಿಗೆ ಆರಂಭಿಕರಾಗಿ ಆಟ ಆರಂಭಿಸಿದ ಸುದರ್ಶನ್, ಕೇವಲ 58 ಎಸೆತಗಳಲ್ಲಿ 100 ರನ್​ ಗಳಿಸಿದರು. 11 ಬೌಂಡರಿಗಳು ಮತ್ತು ಐದು ಸಿಕ್ಸರ್‌ಗಳನ್ನು ಬಾರಿಸಿದರು. 128 ರನ್‌ಗಳ ಜೊತೆಯಾಟ ನಡೆಸಿ ತಂಡ ಬೃಹತ್ ರನ್​ಗಳಿಸಲು ಸಹಾಯ ಮಾಡಿದರು.
ಇದೇ ವೇಳೆ ಐಪಿಎಲ್​ನಲ್ಲಿ ಅತ್ಯಂತ ವೇಗದಲ್ಲಿ 2,000 ರನ್ ಪೂರೈಸಿದ ಅತ್ಯಂತ ವೇಗದ ಆಟಗಾರ ಎಂಬ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿದರು. ಜೊತೆಗೆ ಆರ್‌ಸಿಬಿ ವಿರುದ್ಧ ಐಪಿಎಲ್‌ನಲ್ಲಿ ಶತಕ ಗಳಿಸಿದ 14 ನೇ ಬ್ಯಾಟ್ಸ್‌ಮನ್ ಆದರು.
ಗಿಲ್ ಕೇವಲ 24 ಎಸೆತಗಳಲ್ಲಿ 32 ರನ್ ಗಳಿಸಿದರು. ತಮ್ಮ ಚೊಚ್ಚಲ ಪಂದ್ಯವನ್ನಾಡಿದ ಜೇಸನ್ ಹೋಲ್ಡರ್ ಅಜೇಯ 23 ಅಂತಿಮ ಓವರ್‌ನಲ್ಲಿ ಎರಡು ಸಿಕ್ಸರ್‌ಗಳು ಮತ್ತು ಒಂದು ಬೌಂಡರಿ ಬಾರಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು (ಏಜೆನ್ಸೀಸ್).