ತಿರುವನಂತಪುರಂ: ಕೇರಳದ ಶಬರಿಮಲೆ ದೇವಸ್ಥಾನದ ದ್ವಾರಪಾಲಕ ವಿಗ್ರಹಗಳಿಂದ ಚಿನ್ನದ ಲೇಪಿತ ಹಾಳೆಗಳ ಕಳ್ಳತನ ಪ್ರಕರಣದಲ್ಲಿ ದೇವಸ್ಥಾನದ ಮಾಜಿ ಆಡಳಿತಾಧಿಕಾರಿ ಎಸ್.ಶ್ರೀಕುಮಾರ್ ಅವರನ್ನು ಎಸ್ಐಟಿ ಬಂಧಿಸಿದೆ(Arrest) ಎಂದು(ಡಿ. 17) ವರದಿಯಾಗಿದೆ.
ಕಳ್ಳತನ ನಡೆದಾಗ ಆಡಳಿತ ಅಧಿಕಾರಿಯಾಗಿದ್ದ ಶ್ರೀಕುಮಾರ್, ಈ ಹಿಂದೆ ಬಂಧಿಸದಂತೆ ನಿರೀಕ್ಷಣಾ ಜಾಮೀನು ಪಡೆದಿದ್ದರು. ಆದರೆ ಅವರ ಜಾಮೀನು ಅರ್ಜಿಯನ್ನು ಸದ್ಯ ಹೈಕೋರ್ಟ್ ವಜಾಗೊಳಿಸಿದ ಬಳಿಕ ಅವರನ್ನು ಎಸ್ಐಟಿ ಕಚೇರಿಗೆ ಕರೆಸಿಕೊಂಡು ಬಂಧಿಸಿದೆ ಎನ್ನಲಾಗಿದೆ.
ಚಿನ್ನ ಕಳ್ಳತನ ಪ್ರಕರಣದಲ್ಲಿ ಇದು ಏಳನೇ ಬಂಧನವಾಗಿದೆ. ಕೊಲ್ಲಂ ವಿಜಿಲೆನ್ಸ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಹಿಂದೆ ಟಿಡಿಬಿಯ ಮಾಜಿ ಮುಖ್ಯಸ್ಥ ಕೆ. ಪದ್ಮಕುಮಾರ್ ಅವರನ್ನು ಬಂಧಿಸಲಾಗಿತ್ತು (ಏಜೆನ್ಸೀಸ್).