ಹಿನ್ನೆಲೆ ಗಾಯಕಿ ಎಸ್​.ಜಾನಕಿ 
ದೇಶ

ದಕ್ಷಿಣ ಭಾರತದ ನೈಟಿಂಗೇಲ್ ಎಂದೇ ಪ್ರಸಿದ್ದರಾಗಿದ್ದ ಎಸ್​.ಜಾನಕಿ: ಗಾನ ಕೋಗಿಲೆಯ ಕುಟುಂಬ ಹಿನ್ನೆಲೆ ಇಲ್ಲಿದೆ..! | S Janaki

ಬೆಂಗಳೂರು: ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ದಕ್ಷಿಣ ಭಾರತದ ನೈಟಿಂಗೇಲ್ ಎಂದೇ ಪ್ರಸಿದ್ದರಾಗಿದ್ದ, ಭಾರತೀಯ ಚಿತ್ರರಂಗದ ಶ್ರೇಷ್ಠ ಹಿನ್ನೆಲೆ ಗಾಯಕಿ ಎಸ್​.ಜಾನಕಿ(S Janaki) ಅವರು 88ನೇ ವಯಸ್ಸಿನಲ್ಲಿ ಶನಿವಾರ(ಜು. 11) ಸಂಜೆ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ಎಸ್. ಜಾನಕಿ ಅವರು ಸುದೀರ್ಘ ಆರು ದಶಕಗಳ ಕಾಲದ ತಮ್ಮ ಸಂಗೀತ ಪಯಣದಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದೆ, ಒಡಿಯಾ ಸೇರಿ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಸುಮಾರು 48,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಮತ್ತು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು 33 ವಿವಿಧ ರಾಜ್ಯ ಚಲನಚಿತ್ರ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಎಸ್ ಜಾನಕಿಯವರ ಕುಟುಂಬದ ಹಿನ್ನೆಲೆ

ಎಸ್​.ಜಾನಕಿಯವರು ಮೂಲತಃ ಆಂಧ್ರಪ್ರದೇಶದವರು. 1938 ಏಪ್ರಿಲ್​ 23ರಂದು ಅಂದಿನ  ಬ್ರಿಟಿಷ್ ಭಾರತದ ಮದ್ರಾಸ್ ಪ್ರೆಸಿಡೆನ್ಸಿ (ಇಂದಿನ ಆಂಧ್ರಪ್ರದೇಶ) ದ ಗುಂಟೂರಿನಲ್ಲಿರುವ ರೆಪಲ್ಲೆ ತಾಲ್ಲೂಕಿನ ಪಲ್ಲಪಟ್ಲದಲ್ಲಿ ಜನಿಸಿದರು. ಅವರ ತಂದೆ ಸಿಸ್ಟಲ್ ಶ್ರೀರಾಮಮೂರ್ತಿ, ಆಯುರ್ವೇದ ವೈದ್ಯೆ ಮತ್ತು ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು.
ತಮ್ಮ ಬಹುಪಾಲು ಬಾಲ್ಯವನ್ನು ಸಿರ್ಸಿಲ್ಲಾದಲ್ಲಿ ಕಳೆದಿದ್ದ ಅವರು, ಪೈದಿಸ್ವಾಮಿ ಎಂಬ ನಾದಸ್ವರ ವಿದ್ವಾನ್ ಅವರಿಂದ ಸಂಗೀತದ ಮೂಲಭೂತ ಅಂಶಗಳನ್ನು ಕಳಿತಿದ್ದರು. ಆದರೆ ಶಾಸ್ತ್ರೀಯ ಸಂಗೀತದಲ್ಲಿ ಯಾವುದೇ ತರಬೇತಿಯನ್ನು ಪಡೆದಿರಲಿಲ್ಲ. ಕೇವಲ ಒಂಬತ್ತನೇ ವಯಸ್ಸಿನಲ್ಲಿ ತಮ್ಮ ಮೊದಲ ಸಂಗೀತ ವೇದಿಕೆಯ ಪ್ರದರ್ಶನ ನೀಡಿದ್ದರು.
1959ರಲ್ಲಿ ಎಸ್​.ಜಾನಕಿಯವರು ಕಿ ವಿ. ರಾಮಪ್ರಸಾದ್ ಅವರನ್ನು ವಿವಾಹವಾದರು. ಅವರು ಜಾನಕಿಯವರ ಸಂಗೀತ ವೃತ್ತಿಯನ್ನು  ಸಕ್ರಿಯವಾಗಿ ಬೆಂಬಲಿಸಿದರು ಮತ್ತು ಅವರ ಹೆಚ್ಚಿನ ರೆಕಾರ್ಡಿಂಗ್ ಅವಧಿಯಲ್ಲಿರುತ್ತಿದ್ದರು. 1997ರಲ್ಲಿ ಅವರು ಹೃದಯಾಘಾತದಿಂದ ನಿಧನರಾದರು. ದಂಪತಿಗೆ ಏಕೈಕ ಪುತ್ರನಿದ್ದರು. ಅವರು ಕಳೆದ ವರ್ಷ ನಿಧನರಾಗಿದ್ದರು. 

ವೃತ್ತಿಜೀವನ

ಜಾನಕಿಯವರ ಮಾತೃಭಾಷೆ ತೆಲುಗು ಆಗಿದ್ದರೂ, ಅವರು ಗಮನಾರ್ಹವಾಗಿ ಬಹುಭಾಷಾ ಬಲ್ಲವರಾಗಿದ್ದರು. ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ ಮತ್ತು ಬರೆಯುವ ಸಾಮರ್ಥ್ಯವನ್ನು ಬೆಳೆಸಿಕೊಂಡಿದ್ದರು. ಅವರು ತಮ್ಮ 19ನೇ ವಯಸ್ಸಿನಲ್ಲಿ ತಮಿಳು ಚಲನಚಿತ್ರ ವಿಧಿಯಿನ್ ವಿಲಾಯಟ್ಟು (1957) ಮೂಲಕ ತಮ್ಮ ಹಿನ್ನೆಲೆ ಗಾಯನ ವೃತ್ತಿಜೀವನವನ್ನು ಪ್ರಾರಂಭಿಸಿದರು. ಬಳಿಕ ಅದೇ ವರ್ಷ ಆರು ವಿಭಿನ್ನ ಭಾಷೆಗಳಲ್ಲಿ ಹಾಡುಗಳನ್ನು ರೆಕಾರ್ಡ್ ಮಾಡಿದರು. ಮುಂದೆ ಆರು ದಶಕಗಳ ಕಾಲ ಭಾರತೀಯ ಚಿತ್ರರಂಗದಲ್ಲಿ ಸಂಗೀತ ಕ್ಷೇತ್ರದ ಶ್ರೇಷ್ಠ ಹಿನ್ನೆಲೆ ಗಾಯಕಿ ತಮ್ಮದೇ ಛಾಪು ಮೂಡಿಸಿದರು (ಏಜೆನ್ಸೀಸ್).