ನಿಮ್ಮ ಬಳಿ ಇರುವ ಬುಲ್ಡೋಜರ್ ನನ್ನ ದೇಹದ ಮೇಲೆ ಹತ್ತಿಸಿಬಿಡಿ; ಅಭಿಷೇಕ್ ಮನೆ ಮೇಲೆ ದಾಳಿ ಮಾಡಿದವರಿಗೆ ಮಮತಾ ಬ್ಯಾನರ್ಜಿ ಸವಾಲ್ಸೋದರಳಿಯ ಅಭಿಷೇಕ್ ಬ್ಯಾನರ್ಜಿ ನಿವಾಸದ ಮೇಲೆ ದಾಳಿ ವಿರುದ್ಧ ದೀದಿ ಕೆಂಡ.
ಇರುವ ಬುಲ್ಡೋಜರ್ ನನ್ನ ದೇಹದ ಮೇಲೆ ಹತ್ತಿಸಿ ಎಂದು ಸವಾಲಾಕಿದ ಮಾಜಿ ಸಿಎಂ.
ನ್ಯಾಯಾಂಗ ಮತ್ತು ಪೊಲೀಸರು ಕಣ್ಮುಚ್ಚಿ ಕುಳಿತಿದೆ ಎಂದು ಕಿಡಿಕಾರಿದ್ದ ಅಭಿಷೇಕ್ ಬ್ಯಾನರ್ಜಿ.
'ಬನ್ನಿ ನಿಮ್ಮ ಬಳಿ ಎಷ್ಟು ಬುಲ್ಡೋಜರ್ಗಳಿದೆಯೋ ಅದನ್ನೆಲ್ಲ ನನ್ನ ದೇಹ ಮತ್ತು ಎದೆ ಮೇಲೆ ಹತ್ತಿಸಿಬಿಡಿ. ನಿಮಗೆ ಎಷ್ಟು ಧೈರ್ಯ, ಕೆಚ್ಚೆದೆ ಇದೆಯೋ ನಾನು ನೋಡಬೇಕು' ಹೀಗೆಂದು ಹಿಗ್ಗಾಮುಗ್ಗ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ್ದು ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರು.
ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರು ಎಕ್ಸ್ನಲ್ಲಿ ತಮ್ಮ ನಿವಾಸದ ಮೇಲೆ ಕಳೆದ ಆರು ತಿಂಗಳಿಂದ ದಾಳಿಯಾಗುತ್ತಿದೆ ಎಂದು ಎಕ್ಸ್ನಲ್ಲಿ ಸಾಲು ಸಾಲು ಪೋಸ್ಟ್ ಹಂಚಿಕೊಂಡಿದ್ದರು. ಈ ದಾಳಿಗೆ ಬಿಜೆಪಿ ಗೂಂಡಾಗಳು ಕಾರಣ. ಪೊಲೀಸರು ಮತ್ತು ನ್ಯಾಯಾಲಯ ಇದರ ವಿರುದ್ಧ ಮೂಖ ಪ್ರೇಕ್ಷಕನಾಗಿ ಕಣ್ಮುಚ್ಚಿ ಕುಳಿತಿದೆ. ಇದು ನನ್ನ ಮೇಲಾಗುತ್ತಿರುವ ಏಳನೇ ದಾಳಿ ಎಂದು ಅವರು ವಿಡಿಯೋ ಹಂಚಿಕೊಂಡಿದ್ದರು.
ಈ ಬಗ್ಗೆ ಮಾತನಾಡಿದ ಮಾಜಿ ಸಿಎಂ ಮಮತಾ ಬ್ಯಾನರ್ಜಿ, ಬನ್ನಿ ನಿಮ್ಮ ಬಳಿ ಎಷ್ಟು ಬುಲ್ಡೋಜರ್ ಇದೆ? ಬನ್ನಿ ನಾನು ನಿಮ್ಮ ಮುಂದೆಯೇ ನಿಂತಿದ್ದೇನೆ. ಅದನ್ನೆಲ್ಲ ತಂದು ನನ್ನ ದೇಹ ಮತ್ತು ಎದೆ ಮೇಲೆ ಹತ್ತಿಸಿಬಿಡಿ. ನಿಮಗೆಷ್ಟು ಧೈರ್ಯ, ದಮ್ಮಿದೆ ಎನ್ನುವುದನ್ನು ನಾನು ತಿಳಿದುಕೊಳ್ಳಬೇಕು ಎಂದು ಸವಾಲು ಹಾಕಿದರು.
ಬೆಳಗಿನ ಜಾವ 2 ಗಂಟೆ ಕಾಲಿಘಾಟ್ ರಸ್ತೆಯಲ್ಲಿರುವ ತಮ್ಮ ನಿವಾಸದ ಮೇಲೆ ಬಿಜೆಪಿ ಬೆಂಬಲಿತ ಗೂಂಡಾಗಳು ದಾಳಿ ನಡೆಸಿದ್ದಾರೆ ಎಂದು ಅಭಿಷೇಕ್ ಬ್ಯಾನರ್ಜಿ ಆರೋಪಿಸಿದ್ದನ್ನು ಉಲ್ಲೇಖಿಸಿ ಮಾತನಾಡಿದ ಅವರು, ಇದೊಂದು ಅಪಾಯಕಾರಿ ದಾಳಿ ಎಂದು ಕಿಡಿಕಾರಿದರು.
ಅಭಿಷೇಕ್ ಬ್ಯಾನರ್ಜಿ ಅವರು ಇಂದು(ನ.7) ನಸುಕಿನ ಮುಂಜಾನೆ ಸಾಲು ಸಾಲು ಪೋಸ್ಟ್ಗಳನ್ನು ಎಕ್ಸ್ನಲ್ಲಿ ಹಂಚಿಕೊಂಡರು. ಇದರಲ್ಲಿ ಬಿಜೆಪಿ ಗೂಂಡಾಗಳು ನನ್ನ ಮೇಲೆ ದಾಳಿಗೆ ಯತ್ನಿಸಿದ್ದಾರೆ. ಪೊಲೀಸರು ಕಣ್ಮುಂದೆ ಇದ್ದರೂ ಲೆಕ್ಕಿಸದೆ ನಿರಂತರ ದಾಳಿಯಾಗುತ್ತಿದೆ. ನನ್ನ ಸ್ಥಿತಿಯೇ ಹೀಗಿದೆ. ಇನ್ನೂ ಸಾಮಾನ್ಯರ ಸ್ಥಿತಿ ಹೇಗಾಗಬೇಡ ಎಂದು ಭೇಸರ ವ್ಯಕ್ತಪಡಿಸಿದರು. ಕಳೆದ ಆರು ತಿಂಗಳಿಂದ ನನ್ನ ಮೇಲಾಗುತ್ತಿರುವ ಏಳನೇ ದಾಳಿ ಇದು. ನ್ಯಾಯಾಂಗ ಮತ್ತು ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಕಿಡಿಕಾರಿದರು. ವಿಡಿಯೋದಲ್ಲಿ ದಾಳಿಯಿಂದ ಒಬ್ಬರಿಗೆ ಗಾಯವಾಗಿರುವುದು. ಐದಕ್ಕಿಂತ ಹೆಚ್ಚು ಜನರು ದೊಣ್ಣೆಗಳಿಂದ ಬ್ಯಾನರ್ಗೆ ಹೊಡೆದು, ಮನೆಯ ಗೇಟ್ಗೆ ಹಾನಿ ಮಾಡುತ್ತಿರುವ ದೃಶ್ಯಗಳು ಇವೆ.
ಕಾಳಿ ಪೂಜೆಗೆ ಮುಖ್ಯ ರಸ್ತೆಯಲ್ಲಿ ಅನುಮತಿ ನೀಡಲಾಗಿದೆ. ಇದರಿಂದ ಸುಮ್ಮನೆ ಗಲಭೆ ಸೃಷ್ಟಿಸುತ್ತಿದೆ. ಈ ಮುಂಚೆ ಹೀಗಿರಲಿಲ್ಲ. ಆದರೆ ಬಿಜೆಪಿ ಸರ್ಕಾರ ಗಲಭೆ ಹುಟ್ಟುಹಾಕಲು ಹೂಡಿರುವ ಸಂಚು ಇದು ಎಂದು ಅವರು ಕಿಡಿಕಾರಿದರು, (ಏಜೆನ್ಸೀಸ್).