ನವದೆಹಲಿ: ನವೆಂಬರ್ ಅಂತ್ಯಗೊಳ್ಳಲು ಇನ್ನೇನು 3 ದಿನಗಳು ಬಾಕಿ ಇದೆ. ಹೊಸ ತಿಂಗಳು ಪ್ರಾರಂಭವಾಗುತ್ತಲೇ, ಹಲವಾರು ಆರ್ಥಿಕ ಬದಲಾವಣೆಗಳು (Rule changes) ಪ್ರಾರಂಭವಾಗಲಿವೆ. ಈ ಬದಲಾವಣೆಗಳಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳಿಂದ ಹಿಡಿದು ಪಿಂಚಣಿ, ತೆರಿಗೆಗಳು ಮತ್ತು ಇಂಧನದವರೆಗೆ ಎಲ್ಲದಕ್ಕೂ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ಆಗುತ್ತಿದ್ದು, ಡಿಸೆಂಬರ್ 1 ರಿಂದಲೇ ಅವು ಜಾರಿಗೆ ಬರಲಿದೆ. ಹಾಗಿದ್ದರೆ ಅದು ಯಾವುದು ಎಂದು ನೋಡೋಣ ಬನ್ನಿ...
ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಗಳು
ಸರ್ಕಾರವು ಡಿಸೆಂಬರ್ 1 ರಿಂದ ಎಲ್‌ಪಿಜಿ ಬೆಲೆಗಳನ್ನು ಹೆಚ್ಚಾಗಿ ಪರಿಷ್ಕರಿಸುತ್ತಿದೆ. ಇದರಲ್ಲಿ ವಾಣಿಜ್ಯ ಮತ್ತು ಅಡುಗೆ ಅನಿಲ ಸಿಲಿಂಡರ್‌ಗಳಿಗೆ ಅನ್ವಯಿಸುತ್ತದೆ ಎಂದು ತಿಳಿಸಿದೆ. ನವೆಂಬರ್ನಲ್ಲಿ, ತೈಲ ಕಂಪನಿಗಳು ವಾಣಿಜ್ಯ ಅನಿಲ ಸಿಲಿಂಡರ್‌ಗಳ ದರಗಳನ್ನು ಪರಿಷ್ಕರಿಸಿದ್ದು, ನವೆಂಬರ್ 1 ರಂದು 19 ಕೆ.ಜಿ ವಾಣಿಜ್ಯ ಅನಿಲ ಸಿಲಿಂಡರ್‌ನ ಬೆಲೆಯಲ್ಲಿ 6.50 ರೂ ಕಡಿಮೆ ಮಾಡಿತ್ತು. ಹಾಗೆಯೇ ಅಡುಗೆ ಅನಿಲ ಬೆಲೆಗಳು ಸ್ವಲ್ಪ ಸಮಯದಿಂದ ಬದಲಾಗದೆ ಉಳಿದಿವೆ.
ಯುಪಿಎಸ್ ಕೊನೆಯ ದಿನಾಂಕ
ಸರ್ಕಾರಿ ನೌಕರರು ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಆಯ್ಕೆ ಮಾಡಿಕೊಳ್ಳಲು ಕೊನೆಯ ದಿನಾಂಕವನ್ನು ನವೆಂಬರ್ 30 ಎಂದು ತಿಳಿಸಿದ್ದಾರೆ. ಈ ಮೊದಲು ಈ ದಿನಾಂಕವನ್ನು ಸೆಪ್ಟೆಂಬರ್ 30 ಕ್ಕೆ ನಿಗದಿಪಡಿಸಲಾಗಿತ್ತು. ಸರ್ಕಾರಿ ಉದ್ಯೋಗಿ ಎನ್‌ಪಿಎಸ್ ಮತ್ತು ಯುಪಿಎಸ್ ನಡುವೆ ಆಯ್ಕೆ ಮಾಡಲು ಬಯಸಿದರೆ, ನವೆಂಬರ್ ಒಳಗೆ ಪ್ರತಿಕ್ರಿಯಿಸಬೇಕು. ಡಿಸೆಂಬರ್ 1 ರ ನಂತರ ಯಾವುದೇ ಅವಕಾಶ ಇರುವುದಿಲ್ಲ.
ಜೀವನ ಪ್ರಮಾಣಪತ್ರ ಸಲ್ಲಿಕೆ
ಹಿರಿಯ ನಾಗರಿಕರು ಪಿಂಚಣಿ ಸೌಲಭ್ಯಗಳನ್ನು ಪಡೆಯಲು ಜೀವನ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. ಜೀವನ ಪ್ರಮಾಣಪತ್ರವನ್ನು ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 30 ಆಗಿದ್ದು, ಈ ದಿನಗಳಲ್ಲಿ ಪತ್ರವನ್ನು ಸಲ್ಲಿಸಲು ವಿಫಲವಾದರ, ಅವರಿಗೆ ಪಿಂಚಣಿಯನ್ನು ಸ್ಥಗಿತಗೊಳಿಸಲಾಗುತ್ತದೆ.
ತೆರಿಗೆ ಕಾನೂನುಗಳಲ್ಲಿ ಬದಲಾವಣೆ
ನಿಮ್ಮ TDS ಅನ್ನು ಅಕ್ಟೋಬರ್‌ನಲ್ಲಿ ಕಡಿತಗೊಳಿಸಿದ್ದರೆ, ನೀವು ನವೆಂಬರ್ 30 ರೊಳಗೆ ಸೆಕ್ಷನ್ 194-IA, 194-IB, 194M ಮತ್ತು 194S ಅಡಿಯಲ್ಲಿ ಹೇಳಿಕೆಗಳನ್ನು ಸಲ್ಲಿಸಬೇಕಾಗುತ್ತದೆ. ಹೆಚ್ಚುವರಿಯಾಗಿ, ಸೆಕ್ಷನ್ 92E ಅಡಿಯಲ್ಲಿ ವರದಿಗಳನ್ನು ಸಲ್ಲಿಸಬೇಕಾದವರು ನವೆಂಬರ್ 30 ರ ಒಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.
CNG-PNG, ಜೆಟ್ ಇಂಧನ
ತೈಲ ಕಂಪನಿಗಳು ಪ್ರತಿ ತಿಂಗಳು LPG, CNG, PNG ಮತ್ತು ATF ಬೆಲೆಗಳನ್ನು ಪರಿಷ್ಕರಿಸುತ್ತವೆ. ಈ ತಿಂಗಳು ಸಹ, LPG, CNG, PNG ಮತ್ತು ಜೆಟ್ ಇಂಧನ (AFT) ಬೆಲೆಗಳಲ್ಲಿ ಕೆಲವು ಬದಲಾವಣೆಗಳಾಗಬಹುದು. ಜೆಟ್ ಇಂಧನ ಎಂದು ಕರೆಯಲ್ಪಡುವ ATF ಅಧಿಕ ಒತ್ತಡದ ಇಂಧನವಾಗಿದೆ. ಇದರ ಬೆಲೆಗಳಲ್ಲಿ ದೇಶೀಯ ಮತ್ತು ಅಂತರಾಷ್ಟ್ರೀಯ ಪ್ರಯಾಣಕ್ಕೆ ಬದಲಾಗುತ್ತವೆ (ಏಜೆನ್ಸೀಸ್).