ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ಕಾರ್ಯಕ್ರಮದ ಬಗ್ಗೆ ಆರ್‌ಎಸ್‌ಎಸ್ ಸ್ಪಷ್ಟನೆ 
ದೇಶ

ಮೋಹನ್ ಭಾಗವತ್‌ ಅಮೆರಿಕ ಕಾರ್ಯಕ್ರಮಕ್ಕೆ RSS ಸ್ಪಷ್ಟನೆ; ‘ಇದು ಮುಕ್ತ ಸಂವಾದದ ವೇದಿಕೆ’ ಎಂದ ಸಂಘ | Mohan Bhagwat's US program

ಪ್ರಮುಖ ಮುಖ್ಯಾಂಶಗಳು

  • ನ್ಯೂಯಾರ್ಕ್‌ನ ಮೋಹನ್ ಭಾಗವತ್ ಕಾರ್ಯಕ್ರಮಕ್ಕೆ ಆರ್‌ಎಸ್‌ಎಸ್ ಸ್ಪಷ್ಟನೆ
  • ಯಾರಿಗಾದರೂ ಆರ್‌ಎಸ್‌ಎಸ್ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದ್ದರೆ ಚರ್ಚೆಗೆ ಬನ್ನಿ
  • ಇದು ಮುಕ್ತ ಸಂವಾದ ಮತ್ತು ಪರಸ್ಪರ ಗೌರವದ ವೇದಿಕೆ ಎಂದ ಆರ್‌ಎಸ್‌ಎಸ್
RSS Centenary: ಅಮೆರಿಕದ ನ್ಯೂಯಾರ್ಕ್‌ನಲ್ಲಿ ಆರ್​ಎಸ್​ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾಗಿಯಾಗಲಿರುವ ಕಾರ್ಯಕ್ರಮ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ಕಾರ್ಯಕ್ರಮದ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸ್ಪಷ್ಟನೆ ನೀಡಿದ್ದು, ‘ಇದು ಮುಕ್ತ ಸಂವಾದವಾಗಿದ್ದು, ಪರಸ್ಪರ ಗೌರವದ ಮನೋಭಾವದಲ್ಲಿ ನಡೆಯುತ್ತಿರುವ ಕಾರ್ಯಕ್ರಮ’ ಎಂದು ಹೇಳಿದೆ.
ನ್ಯೂಯಾರ್ಕ್‌ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿರುವ ಇನ್ಫೋಸಿಸ್ ಥಿಯೇಟರ್‌ನಲ್ಲಿ ನಡೆಯಲಿರುವ ‘ಯೂನಿವರ್ಸಲ್ ಒನಿನೆಸ್ ಸೆಲೆಬ್ರೇಷನ್’ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಭಾಗವಹಿಸಲಿದ್ದಾರೆ. ವಿವಿಧ ಧರ್ಮ, ಸಮುದಾಯ, ಸಂಸ್ಕೃತಿಯ ಜನರು ಸೇರುವ ಈ ಕಾರ್ಯಕ್ರಮದಲ್ಲಿ ಭಾಗವತ್ ಆರ್​ಎಸ್​ಎಸ್​ನ ವಿಚಾರಧಾರೆ ಬಗ್ಗೆ ಮಾತನಾಡಲಿದ್ದಾರೆ ಎಂದು ಸಂಘ ತಿಳಿಸಿದೆ.

ಆಸಕ್ತಿ ಇದ್ದವರು

ಭಾಗವಹಿಸಿ

ಆರ್​ಎಸ್​ಎಸ್​ನ ರಾಷ್ಟ್ರೀಯ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಸುನಿಲ್ ಅಂಬೇಕರ್, ‘ವಿವಿಧ ಸಮುದಾಯಗಳ ನಡುವೆ ಪರಸ್ಪರ ಅರ್ಥ ಮಾಡಿಕೊಳ್ಳುವಿಕೆ ಬೆಳೆಸುವುದು ಹಾಗೂ ಎಲ್ಲರೂ ಒಂದೇ ಉದ್ದೇಶದೊಂದಿಗೆ ಸಾಗುವ ವಾತಾವರಣ ನಿರ್ಮಿಸುವುದು ಆರ್​ಎಸ್​ಎಸ್​ನ ಸಂವಾದ ಪರಂಪರೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಆರ್​ಎಸ್​ಎಸ್​ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವ ಆಸಕ್ತಿ ಇದ್ದವರೂ, ಇಂತಹ ಮುಕ್ತ ಸಂವಾದಗಳಲ್ಲಿ ಭಾಗವಹಿಸಬಹುದು ಎಂದು ಅವರು ಆಹ್ವಾನ ನೀಡಿದ್ದಾರೆ.

ಆರ್​ಎಸ್​ಎಸ್

ಕಾರ್ಯಕ್ರಮಕ್ಕೆ

ಮೋಹನ್ ಭಾಗವತ್ ಅವರ ನ್ಯೂಯಾರ್ಕ್ ಕಾರ್ಯಕ್ರಮಕ್ಕೆ ಮೇಯರ್ ಜೊಹ್ರಾನ್ ಮಮ್ದಾನಿ ವಿರೋಧ ವ್ಯಕ್ತಪಡಿಸಿದ್ದಾರೆ. ಆರ್​ಎಸ್​ಎಸ್

ವಿಚಾರಧಾರೆ ಬಗ್ಗೆ ಕೆಲ ಸಂಘಟನೆಗಳ ಆಕ್ಷೇಪವೂ ವಿವಾದಕ್ಕೆ ಮತ್ತಷ್ಟು ಕಿಚ್ಚು ಹಚ್ಚಿದೆ. ಆದರೆ ಇದು ಖಾಸಗಿ ಕಾರ್ಯಕ್ರಮವಾಗಿರುವುದರಿಂದ ರದ್ದುಪಡಿಸುವ ಅಧಿಕಾರ ನಗರಾಡಳಿತಕ್ಕೆ ಇಲ್ಲ ಎಂದು ಮಮ್ದಾನಿ ಹೇಳಿದ್ದಾರೆ.

ಮಮ್ದಾನಿ ವಿರುದ್ಧ ಗಾಯಕಿ ಮೇರಿ ಮಿಲ್ಬೆನ್ ವಾಗ್ದಾಳಿ

ಇನ್ನು, ಇದರ ಬೆನ್ನಲ್ಲೇ ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್ ಅವರು ಮಮ್ದಾನಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಭಾಗವತ್ ಕಾರ್ಯಕ್ರಮವನ್ನು ವಿರೋಧಿಸುವುದು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ವಿರೋಧಿಸುವ ರಾಜಕೀಯ ನಿಲುವಿನ ಭಾಗವಾಗಿದೆ ಎಂದು ಆರೋಪಿಸಿದ್ದಾರೆ.

ಆಗಸ್ಟ್ 29ಕ್ಕೆ ಬಿಗ್ ಈವೆಂಟ್

ಆರ್​ಎಸ್​ಎಸ್​ನ ಶತಮಾನೋತ್ಸವದ ಅಂಗವಾಗಿ ಅಮೆರಿಕ ಪ್ರವಾಸದಲ್ಲಿರುವ ಮೋಹನ್ ಭಾಗವತ್, ಆಗಸ್ಟ್ 29ರಂದು ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಸುಮಾರು 5,000 ಜನರನ್ನು ಉದ್ದೇಶಿಸಿ ಮಾತನಾಡುತ್ತಾರೆ.. ಭಾರತೀಯ ಸಂಸ್ಕೃತಿ, ಏಕತೆ ಮತ್ತು ಆರ್​ಎಸ್​ಎಸ್​ನ ವಿಚಾರಧಾರೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವುದು ಕಾರ್ಯಕ್ರಮದ ಉದ್ದೇಶ ಎಂದು ಸಂಘ ತಿಳಿಸಿದೆ.(ಏಜೆನ್ಸೀಸ್​).