Shwetambari 
ದೇಶ

30 ಕೋಟಿ ರೂ. ವಂಚನೆ ಪ್ರಕರಣ: ಖ್ಯಾತ ನಿರ್ಮಾಪಕನ ಪತ್ನಿ ಶ್ವೇತಾಂಬರಿಗೆ ನ್ಯಾಯಾಂಗ ಬಂಧನ

ಮುಂಬೈ: 30 ಕೋಟಿ ರೂ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಖ್ಯಾತ ಚಲನಚಿತ್ರ ನಿರ್ಮಾಪಕ ವಿಕ್ರಮ್ ಭಟ್ ಮತ್ತು ಅವರ ಪತ್ನಿ ಶ್ವೇತಾಂಬರಿ ಅವರನ್ನು ಬುಧವಾರ ಉದಯಪುರದ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಆರೋಪಿಯ ವಕೀಲರು ವೈದ್ಯಕೀಯ ಆಧಾರದ ಮೇಲೆ ಮಧ್ಯಂತರ ಜಾಮೀನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದರು. ಆದರೆ, ಉದಯಪುರ ಕೋರ್ಟ್ ಅವರ​ ಮಧ್ಯಂತರ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ಈ ಬೆಳವಣಿಗೆಯನ್ನು ದೃಢಪಡಿಸಿದ ಡಿಎಸ್ಪಿ ಸೂರ್ಯವೀರ್ ಸಿಂಗ್, "ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನದಲ್ಲಿಡಲು ಆದೇಶಿಸಿದೆ. ಈಗ ಅವರನ್ನು ಉದಯಪುರದ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗುವುದು" ಎಂದು ಸುದ್ದಿಸಂಸ್ಥೆ ಎಎನ್​ಎಗೆ ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ

ತಮ್ಮ ಪತ್ನಿಯ ಬಯೋಪಿಕ್ ಚಿತ್ರ ಮಾಡುವ ಭರವಸೆ ನೀಡಿ, ಲಾಭದ ಆಮಿಷ ಒಡ್ಡಿ 30 ಕೋಟಿಗೂ ಹೆಚ್ಚು ಹಣ ವಂಚಿಸಲಾಗಿದೆ ಎಂದು ಆರೋಪಿಸಿ ಉದಯಪುರ ಮೂಲದ ಇಂದಿರಾ IVF ಸಂಸ್ಥಾಪಕ ಡಾ. ಅಜಯ್ ಮುರ್ಡಿಯಾ ಅವರು ನವೆಂಬರ್(2025) ದೂರು ದಾಖಲಿಸಿದ್ದರು.
ಉದಯಪುರದ ಭೂಪಾಲ್‌ಪುರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಶ್ವೇತಾಂಬರಿ ಭಟ್ ಹೆಸರಿನಲ್ಲಿ ಕಂಪನಿ ರಿಜಿಸ್ಟರ್ ಮಾಡಿ, ನಕಲಿ ಬಿಲ್‌ಗಳ ಮೂಲಕ ಹಣ ವರ್ಗಾವಣೆ ಮಾಡಲಾಗಿದೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಈ ಹಿನ್ನೆಲೆ ಮುಂಬೈನಲ್ಲಿ ಬಂಧನ ಮಾಡಿದ್ದ ಪೊಲೀಸರು ಉದಯಪುರಕ್ಕೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಡಿ.9ಕ್ಕೆ ಕೋರ್ಟ್​ 7 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಇದೀಗ ವೈದ್ಯಕೀಯ ಆಧಾರದ ಮೇಲೆ ಮಧ್ಯಂತರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಕೋರ್ಟ್​ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದೆ,(ಏಜೆನ್ಸೀಸ್​).