KKRVsGT | ಕ್ಯಾಮರೂನ್ ಗ್ರೀನ್ ಸ್ಫೋಟಕ ಬ್ಯಾಟಿಂಗ್
KKRVsGT: ಇಂದು ( ಶುಕ್ರವಾರ ಏ.17) ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವಿನ ಪಂದ್ಯದಲ್ಲಿ ಕೆಕೆಆರ್ ನಿಗದಿತ 20 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 180 ರನ್ ಕಲೆಹಾಕಿದೆ.
ಟಾಸ್ ಗೆದ್ದ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಕೈಗೊಂಡರು. ನರೇಂದ್ರ ಮೋದಿ ಕ್ರೀಡಾಂಗಣ ಬ್ಯಾಟಿಂಗ್‌ಗೆ ಪೂರಕವಾಗಿರಲಿದೆ ಎಂಬ ನಾಯಕನ ಲೆಕ್ಕಾಚಾರ ಆರಂಭದಲ್ಲಿ ತಲೆಕೆಳಗಾದಂತೆ ಕಂಡಿತು. ತಂಡದ ಮೊತ್ತ ಕೇವಲ 32 ರನ್ ಆಗುವಷ್ಟರಲ್ಲಿ ಕೆಕೆಆರ್ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಇಂತಹ ಸಂಕಷ್ಟದ ಸಮಯದಲ್ಲಿ ಕ್ರೀಸ್‌ಗೆ ಬಂದ ಕ್ಯಾಮರೂನ್ ಗ್ರೀನ್, ಹರಾಜಿನಲ್ಲಿ ತಮಗೆ ನೀಡಿದ ದುಬಾರಿ ಬೆಲೆಗೆ ತಕ್ಕಂತೆ ಆಟವಾಡಿದರು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಎದೆಗುಂದದ ಇನ್ನಿಂಗ್ಸ್ ಕಟ್ಟಿದ ಗ್ರೀನ್, ಗುಜರಾತ್ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ವಿಶೇಷವಾಗಿ ಸ್ಲಾಗ್ ಓವರ್‌ಗಳಲ್ಲಿ ಅಬ್ಬರಿಸಿದ ಗ್ರೀನ್, ಕೇವಲ 55 ಎಸೆತಗಳಲ್ಲಿ 79 ರನ್ ಸಿಡಿಸಿದರು ಅಂತಿಮ ಎಸೆತದಲ್ಲಿ ತಮ್ಮ ವಿಕೆಟ್ ಒಪ್ಪಿಸಿದರು. ಗುಜರಾತ್ ಟೈಟನ್ಸ್ ಪರ ಕಗಿಸೊ ರಬಾಡ 4 ಓವರ್‌ಗಳಲ್ಲಿ ಕೇವಲ 29 ರನ್ ನೀಡಿ 3 ಪ್ರಮುಖ ವಿಕೆಟ್ ಪಡೆದರು. ಇವರಿಗೆ ಸಾಥ್ ನೀಡಿದ ಮೊಹಮ್ಮದ್ ಸಿರಾಜ್ 2 ವಿಕೆಟ್ ಕಬಳಿಸಿದರು(ಏಜೆನ್ಸೀಸ್).