Rs 1.77 crore, condoms recovered school in Bengal
ಕೋಲ್ಕತ್ತಾ: ಇತ್ತೀಚೆಗೆ ಬಂಗಾಳದ ಪ್ರತಿಷ್ಠಿತ ಕಾಲೇಜು ಸುರೇಂದ್ರ ನಾಥ ಕ್ಯಾಂಪಸ್ನ ಯೂನಿಯನ್ ಕಚೇರಿಯಲ್ಲಿ ಗನ್ ಸೇರಿದಂತೆ ಗೆದ್ದಲು ಹಿಡಿದ ಕೋಟಿಗೂ ಹೆಚ್ಚು ಹಣ ಪತ್ತೆಯಾಗಿತ್ತು. ಆ ಘಟನೆ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಕಾಂಚ್ರಾಪಾರಾದ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ನಡೆದಿದೆ. ಇಲ್ಲಿನ ಅಕೌಂಟ್ಸ್ ಕಚೇರಿಯಲ್ಲಿ ಒಂದು ಕೋಟಿ ಸಿದಿಕ್ಕಿದ್ದರೆ , ಎಸಿ ರೂಂನಲ್ಲಿ ಬೆಡ್ ಹಾಗೂ ಕಾಂಡೋಮ್ಸ್ ಸಿಕ್ಕಿದೆ ಎಂದು ಪೊಲೀಸರು ಹೇಳಿದ್ದಾರೆ. ಜೊತೆಗೆ ಮೂವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಅಕ್ರಮ ಹಣ ಜಮೆ ಮತ್ತು ಅನೈತಿಕ ಚಟುವಟಿಕೆ ನಡೆಸುತ್ತಿರುವ ಆರೋಪದ ಮೇಲೆ ಬಿಜೆಪಿ ಶಾಸಕ ಸಂದೀಪ್ ದಾಸ್ ಅವರು ಹಾಗೂ ಪೊಲೀಸರು ಜಂಟಿಯಾಗಿ ಬುಧವಾರ ರಾತ್ರಿ ದಾಳಿ ನಡೆಸಿದರು. ಈ ವೇಳೆ ಶಾಲೆಯ ವಿವೀಧ ಕೊಠಡಿಯಲ್ಲಿ ಅಪಾರ ಪ್ರಮಾಣದ ಕಾಂಡೋಮ್ ಹಾಗೂ ಹಣ ಪತ್ತೆಯಾಗಿದೆ ಎನ್ನಲಾಗಿದೆ.
ಕಾಂಡೋಮ್, ಕಂತೆ ಕಂತೆ ಹಣ ಪತ್ತೆ
ಶಾಲೆಯ ಅಕೌಂಟ್ಸ್ ಕಚೇರಿ ಪರಿಶೀಲಿಸಿದಾಗ ಪೊಲೀಸರಿಗೆ 1.77 ಕೋಟಿ ನಗದು ರೂಪಾಯಿ ಸಿಕ್ಕಿದೆ. 500, 200 ಹಾಗೂ 100ರ ಮುಖಬೆಲೆಯ ಕಂತೆ ಕಂತೆ ನೋಟನ್ನು ಬುಧವಾರ ರಾತ್ರಿಯಿಂದ ಮುಂಜಾನೆ ಆರರವರೆಗೂ ಯಂತ್ರಗಳ ಮುಖೇನ ಎಣಿಸಲಾಗೊದ್ದು, ಈ ಸಂಬಂಧ ಮೂವರು ಉದ್ಯೋಗಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕಚೇರಿಯ ಪಕ್ಕದಲ್ಲೇ ಇದ್ದ ಎಸಿ ವ್ಯವಸ್ಥಿತ ಮಲಗುವ ಕೋಣೆಯಲ್ಲಿ ಅಲ್ಏಮಾರದಲ್ಲಿ ಕಾಂಡೋಮ್ ಸಿಕ್ಕಿದೆ ಎನ್ನಲಾಗಿದೆ.
ಬ್ಯಾರಕ್ ಪುರದ ಸಂಸದ ಪಾರ್ಥ ಭೌಮಿಕ್ ಹಾಗೂ ಕಮಲ್ ಅಧಿಕಾರಿ ಅಕ್ರಮ ಹಣವನ್ನು ಶಾಲೆಯಲ್ಲಿ ಬಚ್ಚಿಟ್ಟಿದ್ದಾರೆ. ಬಿಜ್ಪುರದ ಮಾಜಿ ಶಾಸಕ ಸುಭೋದ್ ಅಧಿಕಾರಿ ಜಾರಿ ನಿರ್ದೇಶನಲಾಯ ದಾಳಿ ನಡೆಸಿದ ಸಂದರ್ಭಧಲ್ಲಿ ಹಣವನ್ನು ಬೇರೆಡೆಗೆ ಸಾಗಿಸಿದ್ದರು. ಕಾಂಡೋಮ್ ಸಿಕ್ಕಿ. ಈ ಶಾಳಗೆಗೆ ಯಾರು ಆಗಾಗ್ಗೆ ಭೇಟಿ ನೀಡುತ್ತಿದ್ದರು ಎಂಬುವ ಬಗ್ಗೆ ವರದಿ ನೀಡುವಂತೆ ಮಾಹಿತಿ ಕೇಳಿದ್ದೇವೆ ಎಂದು ಸಂದೀಪ್ ದಾಸ್ ಮಾತನಾಡಿದರು.
ಶಾಲಾ ಪ್ರಾಂಶುಪಾಲರು ಹೇಳಿದ್ದೇನು
ಪೊಲೀಸರಿಗೆ ಸಿಕ್ಕ ಹಣವು ಶಾಲಾ ಮಕ್ಕಳು ಕಟ್ಟಿದ ಪ್ರವೇಶಾತಿ ಶುಲ್ಕವಾಗಿದೆ. ಸಾಮಾನ್ಯವಾಗಿ ಇದನ್ನು ಬ್ಯಾಂಕ್ಗೆ ಜಮೆ ಮಾಡಲಾಗತ್ತದೆ. ಆದರೆ, ಕಾರಣಾಂತರಗಳಿಂದ ಮಾರ್ಚ್, ಏಪ್ರಿಲ್, ಮೇನಲ್ಲಿ ಸಂಗ್ರಹವಾದ ಹಣವನ್ನು ಜಮೆ ಮಾಡಲು ಸಾಧ್ಯವಾಗಿಲ್ಲ ಎಂದು ವಿಕಾಸ್ ಚಂದ್ರಪಾಲ್ ಸಮರ್ಥನೆ ಕೊಟ್ಟುಕೊಂಡರು. ಆದರೆ, ಬೆಡ್ ಮತ್ತು ಕಾಂಡೋಮ್ ಸಿಕ್ಕ ಬಗ್ಗೆ ಮೌನವಾಗಿದ್ದರು ಎನ್ನಲಾಗಿದೆ.