ನವದೆಹಲಿ: ಫುಟ್ಬಾಲ್ ದಂತಕತೆ, ತಮ್ಮ ವೃತ್ತಿಜೀವನದ 48 ನೇ ಟ್ರೋಫಿಯನ್ನು ಗೆದ್ದ ಅರ್ಜೆಂಟೀನಾದ ಆಟಗಾರ ಲಿಯೋನೆಲ್ ಮೆಸ್ಸಿ(Lionel Messi) GOAT ಇಂಡಿಯಾ ಟೂರ್-2025 ಭಾಗವಾಗಿ ಮೂರು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದು, ಅಂತಿಮ ದಿನವಾದ ಇಂದು(ಡಿ.14) ನವದೆಹಲಿಗೆ ಬಂದಿಳಿದ್ದಾರೆ.
ಲಿಯೋನೆಲ್ ಮೆಸ್ಸಿ ಅವರ ಸೋಮವಾರ ದೆಹಲಿಯಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಸ್ಫೋಟಕ ಬ್ಯಾಟರ್ ವಿರಾಟ್ ಕೊಹ್ಲಿ ಅವರನ್ನು ಸಂದರ್ಶಿಸಲಿದ್ದಾರೆ. ಇದಕ್ಕೂ ಮುಂಚೆ ಮೆಸ್ಸಿ ಮತ್ತು ಅವರ ತಂಡ ಚಾಣಕ್ಯಪುರಿಯಲ್ಲಿರುವ ದಿ ಲೀಲಾ ಪ್ಯಾಲೇಸ್‌ಗೆ ಭೇಟಿ ನೀಡಲಿದ್ದು, ಅಲ್ಲಿ ಅವರಿಗಾಗಿಯೇ ಸಂಪೂರ್ಣ ಮಹಡಿಯನ್ನು ಕಾಯ್ದಿರಿಸಲಾಗಿದೆ. ತಿಯೊಂದೂ ರಾತ್ರಿಗೆ 3.5 ಲಕ್ಷದಿಂದ 7 ಲಕ್ಷ ರೂ.ಗಳವರೆಗೆ ಬೆಲೆ ಬಾಳುತ್ತದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ಮೆಸ್ಸಿಯ ವಾಸ್ತವ್ಯದ ಬಗ್ಗೆ ಯಾವುದೇ ವಿವರಗಳನ್ನು ಹಂಚಿಕೊಳ್ಳದಂತೆ ಹೋಟೆಲ್ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ.
ಮೆಸ್ಸಿ ಹ್ಯಾಂಡ್ಶೇಕ್ಗೆ 1 ಕೋಟಿ ರೂ.!
ಮೆಸ್ಸಿ ಅವರು ಬೆಳಗ್ಗೆ ದೆಹಲಿಗೆ ಆಗಮಿಸಿ, ಚಾಣಕ್ಯಪುರಿಯ ಲೀಲಾ ಪ್ಯಾಲೇಸ್ ಹೋಟೆಲ್‌ಗೆ ತೆರಳುತ್ತಾರೆ. ಹೋಟೆಲ್‌ನಲ್ಲಿ ಆಯ್ದ ಕಾರ್ಪೊರೇಟ್ ಮತ್ತು VIP ಅತಿಥಿಗಳಿಗಾಗಿ ಕ್ಲೋಸ್ಡ್-ಡೋರ್ 'ಮೀಟ್ ಅಂಡ್ ಗ್ರೀಟ್' ಏರ್ಪಡಿಸಲಾಗಿದ್ದು, ಕೆಲವು ಕಾರ್ಪೊರೇಟ್‌ಗಳು ಹ್ಯಾಂಡ್‌ಶೇಕ್ ಮತ್ತು ಭೇಟಿಗಾಗಿ ಸುಮಾರು 1 ಕೋಟಿ ರೂ. ವೆಚ್ಚ ಮಾಡಿವೆ ಎಂದು ವರದಿಯಾಗಿದೆ.
ತಮ್ಮ ದೆಹಲಿ ಭೇಟಿಯ ಸಮಯದಲ್ಲಿ, ಮೆಸ್ಸಿ ಭಾರತದ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಹಲವಾರು ಸಂಸದರು, ಕ್ರಿಕೆಟಿಗರು, ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಪದಕ ವಿಜೇತರು ಸೇರಿದಂತೆ ಭಾರತೀಯ ಕ್ರೀಡಾ ತಾರೆಯರ ಗುಂಪನ್ನು ಭೇಟಿ ಮಾಡಲಿದ್ದಾರೆ.
ಕೋಲ್ಕತಾದಲ್ಲಿ ನಡೆದ ಗೊಂದಲದ ನಂತರ ದೆಹಲಿಯಲ್ಲಿ ಭದ್ರತೆಯನ್ನು ಬಹಳಷ್ಟು ಹೆಚ್ಚಿಸಲಾಗಿದೆ. ಸಾವಿರಾರು ಪೊಲೀಸ್ ಸಿಬ್ಬಂದಿ, ಮಲ್ಟಿ-ಲೇಯರ್ಡ್ ಸೆಕ್ಯೂರಿಟಿ ಮತ್ತು ಟ್ರಾಫಿಕ್ ಡೈವರ್ಷನ್‌ಗಳು ಜಾರಿಯಲ್ಲಿವೆ. ಮುಖ್ಯ ಕಾರ್ಯಕ್ರಮ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಮಧ್ಯಾಹ್ನ 1ರಿಂದ ಸಂಜೆ 4ರವರೆಗೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ನಿರೀಕ್ಷೆ ಇದೆ, ಜೊತೆಗೆ ವಿರಾಟ್ ಕೊಹ್ಲಿ ಸೇರಿದಂತೆ ಕ್ರಿಕೆಟ್ ತಾರೆಯರೊಂದಿಗೆ ಸಂವಾದ ಸಾಧ್ಯತೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).