ಗುವಾಹಟಿ: 2026ರ ಇಂಡಿಯನ್ ಪ್ರಿಮೀಯರ್ ಲೀಗ್ನ ಆರ್‌ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್(RR vs RCB) ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ, ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್ ಅವರ ಅರ್ಭಟ ಆಟದಿಂದ 6 ವಿಕೆಟ್ಗಳ ಅಂತರದಿಂದ ರಾಜಸ್ಥಾನ್ ರಾಯಲ್ಸ್ ಭರ್ಜರಿ ಜಯ ಗಳಿಸಿದೆ.
202ರನ್ ಬೆನ್ನಟ್ಟಿದ ಸೂರ್ಯವಂಶಿ ಮತ್ತು ಜುರೆಲ್ ನಡುವಿನ 108 ರನ್‌ಗಳ ಜೊತೆಯಾಟವು ಕೇವಲ 37 ಎಸೆತಗಳಲ್ಲಿ ಆರ್‌ಸಿಬಿ ತಂಡದ ಸೋಲಿಗೆ ಕಾರಣವಾಯಿತು. ಧ್ರುವ್ ಜುರೆಲ್ ಅಜೇಯ 81 ರನ್ ಗಳಿಸಿ ಅಗ್ರಸ್ಥಾನಕ್ಕೇರಿದರೆ, ವೈಭವ್ ಸೂರ್ಯವಂಶಿ 78 ರನ್ ಗಳಿಸಿ ರಾಜಸ್ಥಾನ್ ರಾಯಲ್ಸ್ ಗೆಲುವಿಗೆ ಕಾರಣರಾದರು.
ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಕ್ಯಾಪ್ಟನ್ ರಜತ್ ಪಾಟಿದಾರ್ 40 ಎಸೆತಗಳಲ್ಲಿ 63 ರನ್ ಗಳಿಸಿ ತಂಡು 201/8 ರನ್ ಗಳಿಸಲು ಸಹಾಯ ಮಾಡಿದರು.ಆರಂಭಿಕ ಆಟಗಾರರ ವಿಕೆಟ್ ಪತನದ ಬಳಿಕ ವೆಂಕಟೇಶ್ ಅಯ್ಯರ್ ಅವರ ಅಜೇಯ 30 (9 ಎಸೆತಗಳು)* ರನ್, ಅಂತಿಮ ಓವರ್‌ನಲ್ಲಿ 4, 6, 6 ರನ್‌ಗಳ ಅನುಕ್ರಮ ಸೇರಿದಂತೆ, ಆರ್‌ಸಿಬಿ 200ರ ಗಡಿ ದಾಟುವಂತೆ ಮಾಡಿತು.
201ರ ಗುರಿ ಬೆನ್ನಟ್ಟಿದ ಆರ್ಆರ್ ತಂಡ ಧ್ರುವ್ ಜುರೆಲ್ ಅಜೇಯ 81ರನ್, ವೈಭವ್ ಸೂರ್ಯವಂಶಿ ಅವರ 78ರನ್ ಗಳಿಕೆಯಿಂದ ಆರು ವಿಕೆಟ್ಗಳ ಅಂತದಿಂದ ಗೆಲುವು ಸಾಧಿಸಿತು (ಏಜೆನ್ಸಿಸ್).