RPF constable beaten to death 
ದೇಶ

ಯುವತಿ ಮೇಲೆ ಲೈಂಗಿಕ ದೌರ್ಜನ್ಯ?; ರೈಲ್ವೆ ಕಾನ್​ಸ್ಟೇಬಲ್​​ನನ್ನು ಕಂಬಕ್ಕೆ ಕಟ್ಟಿ, ಹೊಡೆದು ಕೊಂದ ಸಾರ್ವಜನಿಕರು..RPF Constable

ಪ್ರಮುಖ ಮುಖ್ಯಾಂಶಗಳು

  • ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಆರ್‌ಪಿಎಫ್​ ಪೊಲೀಸ್ ಕಾನ್​ಸ್ಟೇಬಲ್
  • ಪೊಲೀಸ್ ಕಟ್ಟಿಹಾಕಿ ಹಿಗ್ಗಾಮುಗ್ಗ ಥಳಿಸಿದ ಜನರು
  • ತೀವ್ರ ಹಲ್ಲೆ ಚಿಕಿತ್ಸೆ ಫಲಕಾರಿಯಾಗದೆ ಕಾನ್​ಸ್ಟೇಬಲ್ ಸಾವು
ಮಹಿಳೆಯೊಬ್ಬರ ಮೇಳೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ರೈಲ್ವೆ ಪೊಲೀಸ್​​ ಕಾನ್​ಸ್ಟೇಬಲ್​ನನ್ನು ಕಂಬಕ್ಕೆ ಕಟ್ಟಿ, ಕೈಕಾಲುಗಳನ್ನು ಕಟ್ಟಿ ಹೊಡೆದು ಕೊಂದ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ. ಪೊಲೀಸರ ಮುಂದೆಯೇ ನಡೆದ ಈ ಘಟನೆಯ ವಿಡಿಯೋ ವೈರಲ್ ಆಗಿದೆ.
ಮಾಹಿತಿಯ ಪ್ರಕಾರ, ಮೃತ ಕಾನ್​ಸ್ಟೇಬಲ್​ ಸೌಮ್ಯ ರಂಜನ್ ಸ್ವೈನ್ (32) ರೈಲ್ವೆ ರಕ್ಷಣಾ ಪಡೆಗೆ ಸೇರಿದವನೆಂದು ಗುರುತಿಸಲಾಗಿದೆ. ಪ್ರಕರಣದಡಿ ನಾಲ್ವರನ್ನು ಬಂಧಿಸಲಾಗಿದೆ.

ಅತ್ಯಾಚಾರಕ್ಕೆ ಯತ್ನ ಆರೋಪ

ಗುರವಾರ ಮುಂಜಾನೆ ಈತ ಮಹಿಳೆಯೊಬ್ಬರನ್ನು ಏಕಾಂತ ಸ್ಥಳಕ್ಕೆ ಎಳೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾನೆ. ಸಂತ್ರಸ್ತ ಮಹಿಳೆಯ ಕಿರುಚಾಟ ಕೇಳಿದ ಕೂಡಲೇ ಸ್ಥಳಕ್ಕೆ ಓಡಿ ಬಂದ ಸ್ಥಳೀಯರು ಮತ್ತು ಆಟೋ ಚಾಲಕರು ಕಾಮುಕನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.ಪೊಲೀಸ್ ಸಮವಸ್ತ್ರದಲ್ಲೇ ಇದ್ದರೂ ಕಿಂಚಿತ್ತೂ ಕರುಣೆ ತೋರಿಸದ ಜನಸಂದಣಿ, ಆತನನ್ನು ಹತ್ತಿರದ ವಿದ್ಯುತ್ ಕಂಬಕ್ಕೆ ಬಿಗಿದು ಕಟ್ಟಿದ್ದಾರೆ. ನೂರಾರು ಜನರು ಸೇರಿ ಆತನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಸಮವಸ್ತ್ರದ ಘನತೆ ಮರೆತು ದೌರ್ಜನ್ಯಕ್ಕೆ ಇಳಿದ ಪೇದೆಗೆ ಜನರು ಧರ್ಮದೇಟು ನೀಡಿದ್ದಾರೆ.
ಸ್ಥಳಕ್ಕೆ ಪೊಲೀಸರು ಧಾವಿಸಿ ಗಾಯಾಳುವನ್ನು ಜನರ ಕೈಯಿಂದ ಬಿಡಿಸಿ ಆಸ್ಪತ್ರೆಗೆ ದಾಖಲಿಸಿದ್ದಾರಾದರೂ, ತೀವ್ರ ರಕ್ತಸ್ರಾವ ಮತ್ತು ಗಾಯಗಳಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಘಟನೆಯಿಂದ ಇಡೀ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಕಾನೂನನ್ನು ಕೈಗೆತ್ತಿಕೊಂಡ ಆರೋಪದ ಮೇಲೆ ಪೊಲೀಸರು ಕೆಲವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ, (ಏಜೆನ್ಸೀಸ್).