Rinku Singh | ತಂದೆಯೊಂದಿಗೆ ಯುವ ಬ್ಯಾಟರ್ ರಿಂಕು ಸಿಂಗ್ 
ದೇಶ

ನಾನು ಗೆದ್ದೆ ಅಪ್ಪ, ಆದ್ರೆ ನೋಡಲು ನೀವಿಲ್ಲ.. ತಂದೆಯನ್ನು ನೆನೆದ ರಿಂಕು ಸಿಂಗ್ ಕಣ್ಣೀರು! | Rinku Singh

ನವದೆಹಲಿ: ಭಾರತ ತಂಡ 2026ರ ಟಿ20 ವಿಶ್ವಕಪ್ ಮುಕುಟವನ್ನು ಮುಡಿಗೇರಿಸಿಕೊಂಡು ಇತಿಹಾಸ ಬರೆದಿದ್ದು,  ಈ ಐತಿಹಾಸಿಕ ಗೆಲುವಿನ ಹಿಂದೆ ಯುವ ಬ್ಯಾಟರ್ ರಿಂಕು ಸಿಂಗ್​​ರ (Rinku Singh) ವೈಯಕ್ತಿಕ ತ್ಯಾಗ ಮತ್ತು ನೋವಿನ ಕಥೆಯಿದೆ. ಟೂರ್ನಿಯ ಮಧ್ಯದಲ್ಲೇ ತಮ್ಮ ತಂದೆಯನ್ನು ಕಳೆದುಕೊಂಡ ರಿಂಕು, ಈಗ ವಿಶ್ವಕಪ್ ಗೆದ್ದ ಬಳಿಕ ತಮ್ಮ ತಂದೆ ಖಾನ್‌ಚಂದ್ ಸಿಂಗ್​​​ಗೆ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

ಕ್ಯಾನ್ಸರ್ ವಿರುದ್ಧ ಹೋರಾಡಿ ಸೋತ ತಂದೆ

ರಿಂಕು ಸಿಂಗ್ ತಂದೆ ಖಾನ್‌ಚಂದ್ ಸಿಂಗ್ 4ನೇ ಹಂತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಗ್ರೇಟರ್ ನೋಯ್ಡಾದ ಯಾಥರ್ತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಸ್ಥಿತಿ ವಿಶ್ವಕಪ್‌ನ ಸೂಪರ್-8 ಪಂದ್ಯಗಳ ವೇಳೆ ಹದಗೆಟ್ಟಿತ್ತು. ಮಾರ್ಚ್ 1 ರಂದು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಅವರು ನಿಧನರಾದರು.
ತಂದೆಯ ಅಂತ್ಯಕ್ರಿಯೆಗಾಗಿ ರಿಂಕು ಎರಡು ಬಾರಿ ಮನೆಗೆ ಹೋಗಬೇಕಾಯಿತು. ಅಂತಿಮವಾಗಿ ತಂದೆಯ ಆಸೆಯಂತೆ ಮರಳಿ ತಂಡವನ್ನು ಸೇರಿಕೊಂಡರು.

ನಿಮ್ಮ ಕನಸು ನನಸಾಗಿದೆ ಅಪ್ಪ... ರಿಂಕು ಭಾವುಕ ನುಡಿ

ವಿಶ್ವಕಪ್ ಗೆದ್ದ ಬಳಿಕ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತಂದೆಯ ಫೋಟೋ ಹಂಚಿಕೊಂಡಿರುವ ರಿಂಕು, ನನಗೆ ಯಾವಾಗಲೂ ನಿನ್ನ ಅವಶ್ಯಕತೆ ಇರುತ್ತದೆ. ಜವಾಬ್ದಾರಿ ಎಷ್ಟು ಮುಖ್ಯ ಎಂದು ನೀವು ನನಗೆ ಕಲಿಸಿದ್ದೀರಿ, ಅದಕ್ಕಾಗಿಯೇ ನಾನು ಮೈದಾನದಲ್ಲಿ ನಿಮ್ಮ ಕನಸನ್ನು ನನಸಾಗಿಸಲು ಶ್ರಮಿಸಿದೆ.
ಇಂದು ನಿಮ್ಮ ಕನಸು ನನಸಾಗಿದೆ, ಆದರೆ ಇದನ್ನು ನೋಡಲು ನೀವು ನನ್ನೊಂದಿಗಿಲ್ಲ ಎಂಬುದು ನೋವಿನ ಸಂಗತಿ. ನಾನು ನಿಮ್ಮನ್ನು ಯಾವಾಗಲೂ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಬರೆದಿದ್ದಾರೆ. 28 ವರ್ಷದ ಈ ಆಟಗಾರನ ಸಂದೇಶವು ಅಭಿಮಾನಿಗಳ ಕಣ್ಣಾಲಿಗಳನ್ನು ಒದ್ದೆ ಮಾಡಿದೆ.

ಗ್ಯಾಸ್​ ಮಾರಾಟದ ಮೂಲಕ ಮಗನಿಗೆ ನೆರವಾಗಿದ್ದ ಖಚಂದ್ರ ಸಿಂಗ್