ಇರಾನ್ ಅಮೆರಿಕ ಯುದ್ಧ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ
- ಇರಾನ್-ಅಮೆರಿಕ ಯುದ್ಧ ಇದು ಅಲ್ಲಾ ವರ್ಸಸ್ ಏಸು ಕದನ ಎಂದ ಆರ್ಜಿವಿ
- ಯಾವ ಧರ್ಮ ಈ ಯುದ್ಧದಲ್ಲಿ ಗೆಲ್ಲುತ್ತದೋ ಆ ಧರ್ಮಕ್ಕೆ ನಾನು ಮತಾಂತರವಾಗುತ್ತೇನೆ
- ನಾನು ಈ ಯುದ್ಧದ ಜೊತೆ ಧುರಂಧರ್ ಮತ್ತು ಟಾಕ್ಸಿಕ್ ನಡುವಿನ ಯುದ್ಧವನ್ನು ಕಾಯುತ್ತಿದ್ದೆನೆ
ಮುಂಬೈ: ಸದ್ಯ ಈಡೀ ಜಗತ್ತಿನ ತಲ್ಲಳಕ್ಕೆ ಕಾರಣವಾಗಿರುವ ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷದ ಕುರಿತು ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (RGV on Iran US War) ವಿವಾಧಾತ್ಮಕ ಹೇಳಿಕೆಯೊಂದನ್ನು ನೀಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ವೇದಿಕೆಯಾಗಿದೆ.
ಇದು ಅಲ್ಲಾ ವರ್ಸಸ್ ಏಸು ಕದನ!
ಇರಾನ್ ಮತ್ತು ಅಮೆರಿಕ ಯುದ್ಧವನ್ನು ಅಲ್ಲಾ ವರ್ಸಸ್ ಏಸುವಿನ ನಡುವಿನ ಕಾಳಗವೆಂದಿರುವ ಆರ್ಜಿವಿ, ಈ ಯುದ್ಧದಲ್ಲಿ ಯಾವ ಧರ್ಮವು ಜಯಶಾಲಿಯಾಗುತ್ತದೆಯೋ ನಾನು ಆ ಧರ್ಮಕ್ಕೆ ಮತಾಂತರವಾಗುತ್ತೆನೆ ಎಂದು ಅವರು ತಮ್ಮ ಎಕ್ಸ್(ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಟ್ರಂಪ್ ಪರ ಬ್ಯಾಟ್ ಬೀಸಿದ ನಿರ್ದೇಶಕ
ತಮ್ಮ ಮತ್ತೊಂದು ಟ್ವಿಟ್ನಲ್ಲಿ ಅಮೆರಿಕ ಅಧ್ಯಕ್ಷ ಶಕ್ತಿಶಾಲಿಯಾಗಿರುವ ಕಾರಣ ಅವರು ಮಾಡುತ್ತಿರುವುದು ಸರಿಯಿದೆ ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ. ತಮ್ಮದೇ ಸಿನಿಮಾದ ಡೈಲಾಗ್ ಒಂದನ್ನು ಉಲ್ಲೇಖಿಸಿರುವ ಆರ್ಜಿವಿ, ಯಾರು ಬಳಿ ಶಕ್ತಿ ಇರುತ್ತದೆಯೋ ಅವರ ತಪ್ಪು ಸಹ ಸರಿಯಾಗಿ ಬಿಡುತ್ತದೆ( ಜಿಸ್ಕೇ ಪಾಸ್ ಪವರ್ ಹೋತಿ ಹೇ, ಉಸ್ಕಾ ವ್ರಾಂಗ್ಬೀ ರೈಟ್ ಹೋಜಾತಾ ಹೇ) ಎಂಬ ವಾಕ್ಯವನ್ನು ಬರೆದಿದ್ದಾರೆ.
ಅಯತೊಲ್ಲಾ ಖಮೇಲಿ ಸಾವಿನ ಬಗ್ಗೆ ಸಹ ಬರೆದಿದ್ದ ನಿರ್ದೇಶಕ, ಖಮೇನಿ ಸಾವಿಗೆ ಹೆದರಿ ಬಂಕರ್ನಲ್ಲಿ ಅಡಗಿ ಕುಳಿತಿದ್ದ ಆದರೆ, ಟ್ರಂಪ್ ಧೈರ್ಯವಂತ ಅವನು ಹೇಳಿದಂತೆ ತನ್ನ ವೈರಿಯನ್ನು ಕೊಂದುಬಿಟ್ಟ ಎಂದು ಬರೆದಿದದ್ದರು.
ತನ್ನದೇ ಸಿನಿಮಾದ ಡೈಲಾಗ್ ಬಳಕೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ನನ್ನು ಹೊಗಳಲು ಆರ್ಜಿವಿ ಉಪಯೋಗಿಸಿರುವ ಈ ಡೈಲಾಗ್ ( ಜಿಸ್ಕೇ ಪಾಸ್ ಪವರ್ ಹೋತಿ ಹೇ, ಉಸ್ಕಾ ವ್ರಾಂಗ್ಬೀ ರೈಟ್ ಹೋಜಾತಾ ಹೇ) ಅವರ ಜನಪ್ರೀಯ ಸಿನಿಮಾ ಸರ್ಕಾರ್ ಚಿತ್ರದಾಗಿದ್ದು, ಈ ಸಿನಿಮಾದಲ್ಲಿ ರಾಜಕೀಯ, ದಾದಾಗಿರಿ ಮತ್ತು ತೊಳ್ಬಲದ ಪರಾಕಾಷ್ಟೆಯನ್ನು ತೋರಿಸಲಾಗಿತ್ತು. ಈ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಕೆಕೆ ಮೆನನ್, ಕತ್ರಿಕಾ ಕೈಫ್ ನಟಿಸಿದ್ದರು.
ನಾನು ಧುರಂಧರ್ ಮತ್ತು ಟಾಕ್ಸಿಕ್ ಯುದ್ಧಕ್ಕೆ ಕಾತುರನಾಗಿದ್ದೇನೆ
ನಾನು ಇರಾನ್ ಮತ್ತು ಅಮೆರಿಕ ಯುದ್ಧವನ್ನು ಎಷ್ಟು ಮುತುವರ್ಜಿಯಿಂದ ಗಮನಿಸುತ್ತಿದ್ದೇನೋ ಅಷ್ಟೆ ಕಾತುರದಿಂದ ಧುರಂಧರ್ ಮತ್ತು ಟಾಕ್ಸಿಕ್ ನಡುವಿನ ಸಿನಿಯುದ್ಧವನ್ನು ನೋಡಲು ಕಾತುರನಾಗಿದ್ದೇನೆ. ಒಂದು ಯುದ್ಧದಲ್ಲಿ ಜನರು ಮರಣ ಹೊಂದಿದರೆ ಇನ್ನೊಂದು ಯುದ್ಧದಲ್ಲಿ ಹಣದ ಕೊಲೆಯಾಗಲಿದೆ ಎಂದು ಅವರು ಬರೆದಿದ್ದಾರೆ,(ಏಜನ್ಸೀಸ್).