ಸಿಎಂ ಸುವೇಂದು ಅಧಿಕಾರಿ 
ದೇಶ

ಆರ್.​ಜಿ.ಕರ್ ಅತ್ಯಾಚಾರ-ಕೊಲೆ ಪ್ರಕರಣ; ಸಂತ್ರಸ್ತೆ ತಾಯಿ ಕೋರಿಕೆ ಮೇರೆಗೆ ಹೊಸದಾಗಿ ತನಿಖೆಗೆ ಆದೇಶಿಸಿದ ಸಿಎಂ ಸುವೇಂದು ಅಧಿಕಾರಿ | Suvendu Adhikari

ಕೋಲ್ಕತ್ತಾ: 2024ರಲ್ಲಿ ಪಶ್ಚಿಮ ಬಂಗಾಳದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಆರ್.​ಜಿ.ಕರ್ ಮೆಡಿಕಲ್ ಕಾಲೇಜಿನ ಕಿರಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು, ಆಕೆಯ ಎರಡನೇ ವರ್ಷದ ಪುಣ್ಯತಿಥಿಯಂದು ತಾಯಿಯ ಕೋರಿಕೆ ಮೇರೆಗೆ ಹೊಸದಾಗಿ ತನಿಖೆ ನಡೆಸಲು ಭಾನುವಾರ(ಆ. 09) ಸಿಎಂ ಸುವೇಂದು ಅಧಿಕಾರಿ(Suvendu Adhikari) ಆದೇಶ ಹೊರಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಿಎಂ ಸುವೇಂದು ಅಧಿಕಾರಿ, ರತ್ನ ದೇಬ್ನಾಥ್ ಅವರು ಹೊಸ ತನಿಖೆಗೆ ಒತ್ತಾಯಿಸಿ ನನಗೆ ಪತ್ರ ಬರೆದಿದ್ದರು. ಮುಖ್ಯ ಕಾರ್ಯದರ್ಶಿ ಮತ್ತು ತಜ್ಞರ ತಂಡದೊಂದಿಗೆ ವ್ಯಾಪಕ ಚರ್ಚೆಯ ನಂತರ, ವಿಶೇಷ ಆಯೋಗ ಕಾಯ್ದೆ, 1952ರ ಅಡಿಯಲ್ಲಿ ನಾನು ಹೊಸ ತನಿಖೆಯನ್ನು ಘೋಷಿಸುತ್ತಿದ್ದೇನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಿದ್ದಾರೆ.
ಈ ಹಿಂದೆ ಬಲಿಪಶುವಿನ ಅಂತ್ಯಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಲೋಪಗಳ ಕುರಿತು ಪ್ರತ್ಯೇಕ ತನಿಖೆಗೆ ಆದೇಶಿಸಿದ್ದರು. ಮತ್ತು ಲೋಪಗಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಇನ್ನೂ ಭಾನುವಾತ ಬಂಗಾಳದಾದ್ಯಂತದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕಿರಿಯ ವೈದ್ಯರ ಎರಡನೇ ಪುಣ್ಯತಿಥಿಯಂದು ಅವರ ಸ್ಮರಣಾರ್ಥ ಎರಡು ನಿಮಿಷಗಳ ಮೌನ ಆಚರಿಸಲಾಯಿತು. ಜೂನಿಯರ್ ಡಾಕ್ಟರ್ಸ್ ಫ್ರಂಟ್ ಉತ್ತರ ಕೋಲ್ಕತ್ತಾದ ಚಿತ್ಪುರದಲ್ಲಿ ಸ್ಮರಣಾರ್ಥ ಮೆರವಣಿಗೆಯ ಜೊತೆಗೆ ದೀನದಲಿತರಿಗಾಗಿ ಕ್ಲಿನಿಕ್ ಅನ್ನು ನಡೆಸಿತು (ಏಜೆನ್ಸೀಸ್).