ಸಿಎಂ ರೇವಂತ್​ ರೆಡ್ಡಿ (ಸಂಗ್ರಹ ಚಿತ್ರ) 
ದೇಶ

'ರಾಮ ಶ್ರೀಮಂತರ ದೇವರು, ಶಿವ ಬಡವರ ದೇವರು'; ಸಿಎಂ ರೇವಂತ್​ ರೆಡ್ಡಿ ಹೇಳಿಕೆ ವಿರುದ್ಧ ಬಿಜೆಪಿ ಕಿಡಿ..Revanth Reddy

  • ನಾವು ದ್ರಾವಿಡರು, ಅವರು ಆರ್ಯರು. ನಾವು ಶಿವನ ಭಕ್ತರು, ಅವರು ರಾಮನ ಭಕ್ತರು ಎಂದ ರೇವಂತ್ ರೆಡ್ಡಿ

  • ಶಿವ ಬಡವರ ದೇವರು, ರಾಮ ಶ್ರೀಮಂತರ ದೇವರು ಎಂದ ರೇವಂತ್​ ರೆಡ್ಡಿ ವಿರುದ್ಧ ಬಿಜೆಪಿ ಕಿಡಿ

  • ಉತ್ತರ-ದಕ್ಷಿಣ ಭಾರತದ ನಡುವೆ ರಾಜಕೀಯ ರೇಖೆ ಎಳೆಯಲಾಗುತ್ತಿದೆ ಎಂದು ಕಿಡಿಕಾರಿದ ಕೇಂದ್ರ ಸಚಿವ

ರಾಮನ ಆರಾಧಕರು ಆರ್ಯರು, ಶಿವನ ಆರಾಧಕರು ದ್ರಾವಿಡರು ಬಡವರು, ದಕ್ಷಿಣ ಮತ್ತು ಉತ್ತರ ಭಾರತದವರ ಧಾರ್ಮಿಕ ಆಚರಣೆ ಬಗ್ಗೆ ತೆಲಂಗಾಣ ಸಿಎಂ ರೇವಂತ್​ ರೆಡ್ಡಿ ಅವರು ಕೊಟ್ಟ ಹೇಳಿಕೆಯು ಸದ್ಯ ರಾಜಕೀಯ ಹಗ್ಗ-ಜಗ್ಗಾಟಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕರು, ಸಿಎಂ ರೇವಂತ್ ರೆಡ್ಡಿ ಅವರ ಹೇಳಿಕೆ ಸಮಾಜವನ್ನು ವಿಭಜಿಸುವ ಯತ್ನ ಎಂದು ಕೆಂಡಕಾರಿದ್ದಾರೆ.

ರೇವಂತ್​ ರೆಡ್ಡಿ ಹೇಳಿದ್ದೇನು?

'ಪ್ರಧಾನಿ ಮೊದಿ ಅವರು ಪ್ರತಿ ವಿಚಾರಕ್ಕೂ ಜೈ ಶ್ರೀರಾಮ್​ ಜೈ ಶ್ರೀರಾಮ್​ ಅನ್ನೋದು ಯಾಕೆ?. ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರು ಯಾಕೆ ಹರ ಹರ ಮಹಾದೇವ ಎಂದು ಜಪಿಸೋದಿಲ್ಲ. ಯಾವಾಗ್ಲಾದರೂ ಹರಹರ ಮಹಾದೇವ ಎಂದಿದ್ದಾರಾ?, ಅವರು ಜೈ ಶ್ರೀರಾಮ್​ ಎಂತಲೇ ಹೇಳುತ್ತಾರೆ.

'ನಾವು ದ್ರಾವಿಡರು, ಅವರು ಆರ್ಯರು. ನಾವು ಶಿವನ ಭಕ್ತರು, ಅವರು ರಾಮನ ಭಕ್ತರು ಅಷ್ಟೆ,. ಶಿವನನ್ನು ಬಡವರ ದೇವರು ಎನ್ನುತ್ತಾರೆ. ರಾಮನನ್ನು ಶ್ರೀಮಂತರ ದೇವರು ಎನ್ನುತ್ತಾರೆ, ಆದರೆ, ಇಬ್ಬರು ದೇವರನ್ನು ಜನರು ಪೂಜೆ ಮಾಡುತ್ತಾರೆ. ಉತ್ತರ ಮತ್ತು ದಕ್ಷಿಣ ಭಾಗದ ಭಾರತೀಯರ ಸಂಸ್ಕೃತಿ ಪಾಲನೆಯಲ್ಲಿ ಸಾಕಷ್ಟು ಬದಲಾವಣೆಗಳು ಇವೆ' ಎಂದು ಮಾತನಾಡಿದ್ದಾರೆ.

ಸಾಕ್ಷಿ ಹಂಚಿಕೊಂಡ ಬಿಜೆಪಿ

ಬಿಜೆಪಿ ನಾಯಕರು ಶಿವನನ್ನು ಆರಾಧಿಸೋದಿಲ್ಲ, ಶಿವನ ಹೆಸರನ್ನು ಬಳಕೆ ಮಾಡೋದಿಲ್ಲ ಎಂದು ರೇವಂತ್​ ರೆಡ್ಡಿ ಅವರು ಹೇಳಿದ ವಿಚಾರವಾಗಿ ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ ಸುಳ್ಳು ಎಂದಿದ್ದಾರೆ. ಜೊತೆಗೆ ಪ್ರಧಾನಿ ಮೋದಿ ಅವರು ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿ ಅಲ್ಲಿ ಅವರು ಹರ ಹರ ಮಹಾದೇವ ಎಂದಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಬಿಜೆಪಿ ನಾಯಕರು ಹೇಳಿದ್ದೇನು?

ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ ಅವರು ರೇವಂತ್​ ರೆಡ್ಡಿ ಹೇಳಿಕೆ ಕುರಿತು ಎಕ್ಸ್​ನಲ್ಲಿ ಮಾತನಾಡಿದ್ದು, ಕಾಂಗ್ರೆಸ್​ ಪ್ರಾದೇಶಿಕ ಗುರುತನ್ನು ರಾಜಕೀಯ ಲಾಭಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್​ ಎಂದರೆ ಮುಸ್ಲಿಂ, ಮುಸ್ಲಿಂ ಎಂದರೆ ಕಾಂಗ್ರೆಸ್​​ ಎಂದು ಹೇಳುವ ರೇವಂತ್​ ರೆಡ್ಡಿ ಅವರು ಈಗ ರಾಮ ಮತ್ತು ಶಿವನ ನಡುವೆ ರಾಜಕೀಯ ಗಡಿ ಎಳೆಯಲು ಹೊರಟಿದ್ದಾರೆ ಎಂದು ಗುಡುಗಿದರು.

‘ವೇಮುಲವಾಡದಲ್ಲಿ ದಕ್ಷಿಣ ಕಾಶಿ, ಭದ್ರಾಚಲಂನಲ್ಲಿ ದಕ್ಷಿಣ ಅಯೋಧ್ಯೆ ಹೊಂದಿರುವ ತೆಲಂಗಾಣ ಸಿಎಂ ಆಗಿರುವ ರೇವಂತ್​ ಅವರು ರಾಮ ಮತ್ತು ಶಿವ ದಕ್ಷಿಣ ಹಾಗೂ ಉತ್ತರ ಭಾರತದ ದೇವರು ಎಂದು ವಿಭಜಿಸಬಾರದು ಶಿವನು ಹಾಲಾಹಲವನ್ನು ಕುಡಿದು ನೀಲಕಂಠನಾದನು ಎಂದರು.

ಮುಂದುವರೆದು, ಜಾತಿಯ ವಿರುದ್ಧ ಜಾತಿ, ಉತ್ತರದ ವಿರುದ್ಧ ದಕ್ಷಿಣ, ಮತ್ತು ಈಗ ಶಿವನ ವಿರುದ್ಧ ರಾಮನನ್ನು ಎತ್ತಿಕಟ್ಟಿ ರಾಜಕೀಯ ಕೆಸೆರೆರಚಾಟ ಶುರುವಿಟ್ಟುಕೊಂಡಿದ್ದಾರೆ. ಜನರ ಮತಗಳನ್ನು ಪಡೆಯಲು ನೀವು ದೇವರುಗಳ ಹೆಸರಿನಲ್ಲಿ ಪ್ರಮಾಣ ಮಾಡಿದ್ದೀರಿ. ಈಗ ಅದೇ ದೇವರುಗಳನ್ನು ಬಳಸಿಕೊಂಡು ಅದೇ ಜನರನ್ನು ವಿಭಜಿಸುತ್ತಿದ್ದೀರಿ.ನಿನ್ನೆ, ದೇವರುಗಳು ನಿಮ್ಮ ಭರವಸೆಗಳಿಗೆ ಸಾಕ್ಷಿಯಾಗಿದ್ದರು. ಇಂದು, ನೀವು ದೇವರುಗಳಿಗೆ ಜಾತಿ, ವರ್ಗ ಮತ್ತು ಭೌಗೋಳಿಕತೆಯನ್ನು ನೀಡಲು ಬಯಸುತ್ತೀರಿ ಎಂದು ಎಕ್ಸ್​​ನಲ್ಲಿ ಬರೆದುಕೊಂಡಿದ್ದಾರೆ, (ಏಜೆನ್ಸೀಸ್).