Mamata Banerjee | ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 
ದೇಶ

Mamata Banerjee | ಮತದಾರರ ಪಟ್ಟಿಯಿಂದ ಒಂದು ಹೆಸರನ್ನು ತೆಗೆದುಹಾಕಿ, ಧರಣಿ ಎದುರಿಸಿ; ಕೇಂದ್ರಕ್ಕೆ ಧಮ್ಕಿ ಹಾಕಿದ ಮಮತಾ ಬ್ಯಾನರ್ಜಿ

ಕೋಲ್ಕತಾ: ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯಿಂದ ಒಬ್ಬ ಅರ್ಹ ವ್ಯಕ್ತಿಯ ಹೆಸರು ಅಳಿಸಿ ಹಾಕಿದರೂ ನಾನು ಧರಣಿ ಕೂರುತ್ತೇವೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಗುರುವಾರ (ಡಿ.11) ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಹೇಳಿದ್ದಾರೆ.
ಈ ಬಗ್ಗೆ ಕೃಷ್ಣನಗರದಲ್ಲಿ ಗುರುವಾರ ನಡೆದ ಱಲಿಯನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ನಾನು ಇಲ್ಲಿಯವರೆಗೆ ತಮ್ಮ ಎಣಿಕೆ ಫಾರ್ಮ್ ಅನ್ನು ಭರ್ತಿ ಮಾಡಿಲ್ಲ. ಅಲ್ಲದೆ, ಗಲಭೆಕೋರರ ಪಕ್ಷಕ್ಕೆ ನನ್ನ ಪೌರತ್ವವನ್ನು ಸಾಬೀತುಪಡಿಸಬೇಕೇ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.
ಮುಂದುವರೆದು ಮಾತನಾಡಿದ ಮಮತಾ ಬ್ಯಾನರ್ಜಿ, ಎಸ್‌ಐಆರ್ ವಿಚಾರಣೆಯ ಸಮಯದಲ್ಲಿ ಜಿಲ್ಲಾಧಿಕಾರಿಗಳ ಕೆಲಸವನ್ನು ಮೇಲ್ವಿಚಾರಣೆ ಮಾಡಲು ಚುನಾವಣಾ ಆಯೋಗವು ದೆಹಲಿಯಿಂದ ಬಿಜೆಪಿಗೆ ಒಲವಿರುವ ಅಧಿಕಾರಿಗಳನ್ನು ಕಳುಹಿಸುತ್ತಿದೆ. ಅಲ್ಲದೆ, ಕೇಂದ್ರ ಗೃಹ ಸಚಿವರು ಎಲ್ಲಾ ಬಂಗಾಳಿಗಳನ್ನು ಬಾಂಗ್ಲಾದೇಶೀಯರು ಎಂದು ಹಣೆಪಟ್ಟಿ ಕಟ್ಟಿ ಬಂಧನ ಶಿಬಿರಗಳಿಗೆ ಕಳುಹಿಸಲು ಏನು ಬೇಕಾದರೂ ಮಾಡಬಹುದು ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಅಪಾಯಕಾರಿ ವ್ಯಕ್ತಿಯಾಗಿದ್ದಾರೆ. 2026 ರ ವಿಧಾನಸಭಾ ಚುನಾವಣೆಗೆ ಮುನ್ನ ಎಸ್‌ಐಆರ್ ಅನ್ನು ರಾಜಕೀಯ ಅಸ್ತ್ರವಾಗಿ ಬಳಸಲಾಗುತ್ತಿದೆ. ಅಲ್ಲದೆ, ಒಬ್ಬ ಅರ್ಹ ಮತದಾರರ ಹೆಸರನ್ನು ಅಳಿಸಿದರೂ ನಾನು ಧರಣಿ ಕೂರುತ್ತೇನೆ. ಪಶ್ಚಿಮ ಬಂಗಾಳದಲ್ಲಿ ಯಾವುದೇ ಬಂಧನ ಶಿಬಿರಗಳು ಇರುವುದಿಲ್ಲ. ಬಿಜೆಪಿ ಮತಗಳಿಗಾಗಿ ತುಂಬಾ ಹಸಿದಿದ್ದಾರೆ, ಚುನಾವಣೆಗೆ ಕೇವಲ ಎರಡು ತಿಂಗಳ ಮೊದಲು ಅವರು ಎಸ್‌ಐಆರ್ ಅನ್ನು ನಡೆಸುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಬಿಹಾರದಲ್ಲಿ ಚುನಾವಣಾ ಪರಿಷ್ಕರಣೆ ನಡೆಸಿದ ನಂತರ, ಅಕ್ಟೋಬರ್‌ನಲ್ಲಿ ಭಾರತೀಯ ಚುನಾವಣಾ ಆಯೋಗ (ECI) ಎರಡನೇ ಹಂತದ SIR ಅನ್ನು ಘೋಷಿಸಿತು. ಇದು ಪಶ್ಚಿಮ ಬಂಗಾಳ ಸೇರಿದಂತೆ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿದೆ. ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (TMC) ನೇತೃತ್ವದ ರಾಜ್ಯ ಸರ್ಕಾರವು ಚುನಾವಣಾ ಸಂಸ್ಥೆಯ ಕ್ರಮವನ್ನು ಯಾವಾಗಲೂ ವಿರೋಧಿಸುತ್ತಾ ಬಂದಿದೆ. ಇದು ಭಾರತೀಯ ಜನತಾ ಪಕ್ಷಕ್ಕೆ (BJP) ಲಾಭ ತರುವ ಉದ್ದೇಶದಿಂದ ಮಾಡಲಾಗುತ್ತಿದೆ ಎಂದು ಆರೋಪಿಸುತ್ತಿದೆ,(ಏಜೆನ್ಸೀಸ್).