ನವದೆಹಲಿ: ದೆಹಲಿಯಲ್ಲಿರುವ 135 ವರ್ಷದ ಹಳೆಯ 'ಸೆಂಟ್ರಲ್ ಸೆಕ್ರೆಟರಿಯೇಟ್ ಲೈಬ್ರರಿ'(CSL) ಕುರಿತು ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸುವಲ್ಲಿ ವಿಫಲವಾದ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೋಮವಾರ(ನ. 16) ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಹೊಸ 'ಸೆಂಟ್ರಲ್ ವಿಸ್ಟಾ' ಯೋಜನೆಯ ಭಾಗವಾಗಿ 8.5 ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಹೊಂದಿರುವ ಈ ಗ್ರಂಥಾಲಯವನ್ನು, ಸ್ಥಳಾಂತರಿಸಲಾಗುತ್ತಿದೆ ಎನ್ನಲಾಗಿದ್ದು, ಗ್ರಂಥಾಲಯದೊಂದಿಗೆ ನಡೆದುಕೊಂಡಿರುವ ರೀತಿಯ ಬಗ್ಗೆ ಸುಪ್ರೀಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಪುಸ್ತಕಗಳ ಬಗ್ಗೆ ಸ್ವಲ್ಪ ಗೌರವ ತೋರಿಸಿ ಎಂದು ಕೇಂದ್ರಕ್ಕೆ ಕಿಡಿಕಾರಿರುವ ಕೋರ್ಟ್, ನಿಮಗೆ ಇದು ಬೇಡವೆಂದಾದರೆ, ಅದನ್ನು ಚೆನ್ನಾಗಿ ನೋಡಿಕೊಳ್ಳಬಲ್ಲ ಬೇರೆ ದೇಶಕ್ಕೆ ನೀಡಿಬಿಡಿ ಎಂದು ಆಕ್ರೋಶ ಹೊರ ಹಾಕಿದೆ. ಅಲ್ಲದೆ, ಮುಂದಿನ ವಿಚಾರಣೆಯ ದಿನಾಂಕದವರೆಗೆ ಪುಸ್ತಕಗಳನ್ನು ಸ್ಥಳಾಂತರಿಸದಂತೆ ಸರ್ಕಾರಕ್ಕೆ ಕೋರ್ಟ್ ನಿರ್ದೇಶನ ನೀಡಿತು (ಏಜೆನ್ಸೀಸ್).