Ghaziabad Sushil Prajapati
- ಅತ್ಯಾಚಾರಿ ಆರೋಪಿಗೆ ಗಾಜಿಯಾಬಾದ್ ಜೈಲಿನ ಮುಂದೆ ಭರ್ಜರಿ ಸ್ವಾಗತ
- ಒಬ್ಬ ಆರೋಪಿಯನ್ನು ಹೀರೋನಂತೆ ಕಾಣೋದು ಸರಿನಾ? ಎಂದ ನೆಟ್ಟಿಗರು
- ಸುಶೀಲ್ ಪ್ರಜಾಪತಿ ವಿರುದ್ಧ ದಾಖಲಾಗಿದೆ ಅತ್ಯಾಚಾರ ಆರೋಪ ಕೇಸ್
Ghaziabad Sushil Prajapati: ಉತ್ತರ ಪ್ರದೇಶದ ಗಾಜಿಯಾಬಾದ್ನ ಹಿಂದೂ ಯುವ ವಾಹಿನಿಯ ಕಾರ್ಯಕರ್ತನ ಮೇಲೆ ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪವಿತ್ತು. ಆತ ಜಾಮೀನಿನ ಮೇಲೆ ಜೈಲಿನಿಂದ ರಿಲೀಸ್ ಆದ ವೇಳೆ ಆತನ ಬೆಂಬಲಿಗರು, ಚೆಂಡು ಹೂಮಾಲೆಗಳನ್ನು ಹಾಕಿ, ಹೆಗಲ ಮೇಲೆ ಹೊತ್ತು ಮೆರೆಸಿರುವ ಘಟನೆ ಬೆಳಕಿಗೆ ಬಂದಿದೆ. ಸದ್ಯ ಇದು ಸೋಶಿಯಲ್ ಮೀಡಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಆಗಸ್ಟ್ 2025ರಂದು ಸುಶೀಲ್ ಪ್ರಜಾಪತಿ ಕಾನೂನು ವಿದ್ಯಾರ್ಥಿನಿಯೊಬ್ಬಳಿಗೆ ಲಾಯರ್ ಅನ್ನು ಪರಿಚಯ ಮಾಡಿಸಿ ಕೊಡುವ ನೆಪದಲ್ಲಿ ಕಾರಿನಲ್ಲಿ ಮತ್ತು ಬರುವ ಡ್ರಿಂಕ್ಸ್ ಕೊಟ್ಟು ಪ್ರಜ್ಞೆ ತಪ್ಪಿ ಬೀಳುವಂತೆ ಮಾಡಿದ್ದಾರೆ. ಆನಂತರ ಆಕೆಯನ್ನು ಫ್ಲಾಟ್ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎನ್ನುವ ಆರೋಪವಿತ್ತು. ಇಷ್ಟೇ ಅಲ್ಲದೇ ವಿಚಾರವು ಹೊರಗಡೆ ಎಲ್ಲಿಯೂ ಪ್ರಚಾರವಾಗದಂತೆ ತಡೆಯಲು ಜೀವ ಬೆದರಿಕೆ ಒಡ್ಡಿದ ಆಧಾರದ ಮೇಲೆ ಬಂಧಿಸಿಲಾಗಿತ್ತು. 9 ತಿಂಗಳು ಜೈಲಿನಲ್ಲಿದ್ದ ಈತ ಮೇ.17ರಂದು ಜೈಲಿನಿಂದ ರಿಲೀಸ್ ಆಗಿದ್ದ.
ಸುಶೀಲ್ ಪ್ರಜಾಪತಿ ರಿಲೀಸ್ ಆಗುತ್ತಲೇ ಆತನ ಬೆಂಬಲಿಗರು, ಮತ್ತು ಸ್ನೇಹಿತರು ಸೇರಿದಂತೆ ಮೂವತ್ತಕ್ಕೂ ಹೆಚ್ಚು ಜನರು ಆತನನ್ನು ಹೆಗಲ ಮೇಲೆ ಹೊತ್ತುಕೊಂಡು ಬಿಳಿ ಬಟ್ಟೆ ಹಾಕಿಸಿ, ಆತನ ಕಣ್ಣಿಗೆ ಗಾಗಲ್ಸ್ ಹಾಕಿ, ಐದಕ್ಕೂ ಹೆಚ್ಚು ಚೆಂಡು ಹೂವಿನ ಮಾಲೆ ಹಾಕಿ, ಕಾರುಗಳ ಬೃಹತ್ ಬೆಂಗಾವಲು ಪಡೆಯೊಂದಿಗೆ ವಿಜಯೋತ್ಸವ ಸಾಧಿಸಿದಂತೆ ಕೇಕೆ ಹಾಕುತ್ತಾ, ಘೋಷಣೆ ಕೂಗುತ್ತಾ ಸ್ವಾಗತಿಸಿತು. ಸದ್ಯ ಈ ವಿಡಿಯೋಗಳು ವೈರಲ್ ಆಗಿದ್ದು, ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಬ್ಬ ಅತ್ಯಾಚಾರಿ ಆರೋಪಿಯನ್ನು ಹೀಗಾ ನಡೆಸಿಕೊಳ್ಳೋದು ಇದೇನಾ ಸಂಸ್ಕೃತಿ ಎಂದು ಕಿಡಿಕಾರಿದ್ದಾರೆ.
ತನಿಖೆ ಮಾಡ್ತೇವೆ
ಸುಶೀಲ್ ಪ್ರಜಾಪತಿ ಬೆಂಬಲಿಗರು ಆತನನ್ನು ಹೊತ್ತು ಮೆರೆಸಿರುವುದು. ರೋಡ್ ಶೋ ನಡೆಸಿರುವ ಬಗ್ಗೆ ವಿಡಿಯೋಗಳನ್ನು ನೋಡಿದ್ದೇವೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ನೆಟ್ಟಿಗರು ಏನಂದ್ರು
ಸುಶೀಲ್ ಪ್ರಜಾಪತಿ ಅವರನ್ನು ಆಗಸ್ಟ್ 2025 ರಲ್ಲಿ ಎಲ್‌ಎಲ್‌ಬಿ ವಿದ್ಯಾರ್ಥಿಯೊಬ್ಬ ಮಾದಕ ದ್ರವ್ಯ ಸೇವಿಸಿ ಅತ್ಯಾಚಾರ ಮಾಡಿದ ಆರೋಪದ ಮೇಲೆ ಬಂಧಿಸಲಾಯಿತು. ಅತ್ಯಾಚಾರಿಗಳನ್ನು ಜೈಲಿನಿಂದ ಬಿಡುಗಡೆ ಮಾಡುವುದಲ್ಲದೆ, ಹೀರೋಗಳಂತೆ ನೋಡಲಾಗುತ್ತದೆ. ಇದು ವಿಶ್ವಗುರುವಿನ ಸಾಧನೆಯೇ ಎಂದು ಒಬ್ಬ ಎಕ್ಸ್ ಬಳಕೆದಾರ ಕಿಡಿಕಾರಿದ್ದಾರೆ, (ಏಜೆನ್ಸೀಸ್).