ಹೈದರಾಬಾದ್: ಹೈದರಾಬಾದ್ ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ)ಯ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್‌ನ ಅಂತಿಮ ವರ್ಷದ ವಿದ್ಯಾರ್ಥಿ ಎಡ್ವರ್ಡ್ ನಾಥನ್ ವರ್ಗೀಸ್ ಅವರು ನೆದರ್ಲ್ಯಾಂಡ್ಸ್ ಮೂಲದ ಜಾಗತಿಕ ಟ್ರೇಡಿಂಗ್ ಕಂಪನಿ ಆಪ್ಟಿವರ್‌ನಿಂದ 2.5 ಕೋಟಿ ವಾರ್ಷಿಕ ಪ್ಯಾಕೇಜ್ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಹೌದು, 2008ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಯ ಇತಿಹಾಸದಲ್ಲಿ ಇದು ಇಲ್ಲಿಯವರೆಗಿನ ಅತ್ಯಧಿಕ ಪ್ಯಾಕೇಜ್ ಆಫರ್ ಆಗಿದೆ. ಮೊದಲು 2017ರಲ್ಲಿ ಸುಮಾರು 1 ಕೋಟಿ ಪ್ಯಾಕೇಜ್ ದಾಖಲೆಯಾಗಿತ್ತು.21 ವರ್ಷದ ಎಡ್ವರ್ಡ್ ಅವರು ಹೈದರಾಬಾದ್‌ನಲ್ಲಿ ಹುಟ್ಟಿ ಬೆಳೆದವರು. ನಂತರ ಬೆಂಗಳೂರಿನಲ್ಲಿ 7ನೇ ತರಗತಿಯಿಂದ 12ನೇ ತರಗತಿವರೆಗೆ ಶಿಕ್ಷಣ ಪಡೆದರು. ಎರಡು ತಿಂಗಳ ಸಮ್ಮರ್ ಇಂಟರ್ನ್‌ಶಿಪ್ ಅನ್ನು ಪ್ರಿ-ಪ್ಲೇಸ್‌ಮೆಂಟ್ ಆಫರ್ (PPO) ಆಗಿ ಪರಿವರ್ತಿಸಿ ಈ ಸಾಧನೆ ಮಾಡಿದ್ದಾರೆ. ಜುಲೈನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ನೆದರ್ಲ್ಯಾಂಡ್ಸ್ ಕಚೇರಿಯಲ್ಲಿ ಕೆಲಸ ಆರಂಭಿಸಲಿದ್ದಾರೆ.
ಐಐಟಿಎಚ್‌ನ ಮತ್ತೊಬ್ಬ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿದ್ಯಾರ್ಥಿ ರೂ. 1.1 ಕೋಟಿ ಪ್ಯಾಕೇಜ್ ಪಡೆದ ಒಂದು ವರ್ಷದೊಳಗೆ ಈ ದಾಖಲೆಯ ಆಫರ್ ಬಂದಿದ್ದು, 2017 ರಲ್ಲಿ ಕ್ಯಾಂಪಸ್‌ನ ಮಾನದಂಡವನ್ನು ಗಮನಾರ್ಹವಾಗಿ ಹೆಚ್ಚಿಸಿದೆ, ಆದರೆ ಈ ಹಿಂದೆ 1 ಕೋಟಿ ರೂ.ಗಳ ಗರಿಷ್ಠ ಆಫರ್ ಇತ್ತು.
ಈ ವರ್ಷದ ಪ್ಲೇಸ್‌ಮೆಂಟ್ ಸೀಸನ್‌ನಲ್ಲಿ ಐಐಟಿ ಹೈದರಾಬಾದ್ ಉತ್ತಮ ಪ್ರದರ್ಶನ ತೋರಿದೆ. ಪ್ಯಾಕೇಜ್ ಕಳೆದ ವರ್ಷದ 20.8 ಲಕ್ಷದಿಂದ 36.2 ಲಕ್ಷಕ್ಕೆ ಶೇ.75ರಷ್ಟು ಏರಿಕೆ ಕಂಡಿದೆ. ಮೊದಲ ಹಂತದಲ್ಲಿ 24 ಅಂತಾರಾಷ್ಟ್ರೀಯ ಆಫರ್‌ಗಳು ಸಿಕ್ಕಿವೆ .ಪದವಿಧರರಲ್ಲಿ 487 ವಿದ್ಯಾರ್ಥಿಗಳು ನೋಂದಾಯಿಸಿದ್ದು, ಶೇ.62ರಷ್ಟು ಉದ್ಯೋಗ ಪಡೆದಿದ್ದಾರೆ,(ಏಜೆನ್ಸೀಸ್).