ಮುಂಬೈ: 2026ರ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ರಾಧಾ ಯಾದವ್ ಅವರ ಅರ್ಧ ಶತಕ ಮತ್ತು ಶ್ರೇಯಾಂಕಾ ಪಾಟೀಲ್ ಅವರ ಐದು ವಿಕೆಟ್ಗಳ ಗೊಂಚಲಿನಿಂದ ಗುಜರಾತ್ ಜೈಂಟ್ಸ್ ವಿರುದ್ಧ 32 ರನ್ಗಳ ಅಂತರಿಂದ ಆರ್ಸಿಬಿ ಗೆಲುವು ಸಾಧಿಸುವ ಮೂಲಕ ಲೀಗ್‌ನಲ್ಲಿ ಸತತ ಮೂರನೇ ಗೆಲುವು ದಾಖಲಿಸಿದೆ.
ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಆರ್ಸಿಬಿ ತಂಡ ಆರಂಭದಲ್ಲಿ ಮುಗ್ಗರಿಸಿತ್ತು. ಬಳಿಕ ಆಟಗಾರರಾದ ರಾಧಾ ಯಾದವ್ 47 ಎಸೆತಗಳಲ್ಲಿ 66 ರನ್ ಮತ್ತು ಘೋಷ್ 28 ಎಸೆತಗಳಲ್ಲಿ 44 ರನ್ ಗಳಿಸುವ ಮೂಲಕ ಆರ್ಸಿಬಿ ದೊಡ್ಡ ಮೊತ್ತದ ರನ್ ಗಳಿಸುವಿಕೆಗೆ ನೆರವಾದರು. ತಂಡವು 7 ವಿಕೆಟ್ಗೆ 182 ರನ್ಗಳ ಗುರಿಯನ್ನು ನೀಡಿತು.
ಬಳಿಕ ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ ತಂಡ, ಗುರಿಯನ್ನು ಸಕಾರಾತ್ಮಕವಾಗಿ ಆರಂಭಿಸಿತು. ಮೊದಲ ಎಸೆತದಲ್ಲೇ ಬೆತ್ ಮೂನಿ ಲಾರೆನ್ ಬೆಲ್ ಬೌಂಡರಿ ಬಾರಿಸಿದರು. ಮುಂದಿನ ಓವರ್‌ನಲ್ಲಿ ಸೋಫಿ ಡಿವೈನ್ ಮುಂದಿನ ಓವರ್‌ನಲ್ಲಿ ಸತತ ಬೌಂಡರಿ ಬಾರಿಸಿದರು. ಬಳಿಕ ನಿಯಮಿತ ಅಂತರದಲ್ಲಿ ವಿಕೆಟ್ ಕಳೆದುಕೊಂಡು 150 ರನ್ಗಳಿಗೆ ಆಲೌಟ್ ಆಯಿತು. ಆರ್ಸಿಬಿಯ ಶ್ರೇಯಂಕಾ ಪಾಟೀಲ್ 23 ರನ್ ನೀಡಿ 5 ವಿಕೆಟ್ ಪಡೆದು ಅದ್ಭುತ ಪ್ರದರ್ಶನ ನೀಡಿದರು. ಪಂದ್ಯದ ಆಟಗಾರ್ತಿ ಪ್ರಶಸ್ತಿಯನ್ನು ರಾಧಾ ಯಾದವ್ ನೀಡಲಾಗಿದೆ.
ಆರ್ಸಿಬಿ: 20 ಓವರ್ಗಳಲ್ಲಿ 185/7 (ರಾಧಾ ಯಾದವ್ 66, ರಿಚಾ ಘೋಷ್ 44, ನದಿನ್ ಡಿ ಕ್ಲರ್ಕ್ 26, ಶ್ರೇಯಾಂಕಾ ಪಾಟೀಲ್ 23 ರನ್ 5 ವಿಕೆಟ್, ಲಾರೆನ್ ಬೆಲ್ 29 ರನ್ ನೀಡಿ 3 ವಿಕೆಟ್)
ಗುಜರಾತ್ ಜೈಂಟ್ಸ್: 18.5 ಓವರ್‌ನಲ್ಲಿ 150/10 ( ಬೆತ್ ಮೂನಿ 27, ಭಾರತಿ ಫೂಲ್ಮಾಲಿ 39, ರೇಣುಕಾ ಸಿಂಗ್ 41 ರನ್ಗೆ 1 ವಿಕೆಟ್, ಕಶ್ವಿ ಗೌತಮ್ 42 ರನ್ 2 ವಿಕೆಟ್, ಸೋಫಿ ಡಿವೈನ್ 31 ರನ್ ನೀಡಿ 3 ವಿಕೆಟ್)