ಮುಂಬೈ: ಟಾಲಿವುಡ್‌ನ ಸ್ಟಾರ್ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ( rashmika mandanna) ಮುಂದಿನ ತಿಂಗಳು ಮದುವೆಯಾಗಲಿದ್ದಾರೆ ಎಂಬ ಗಾಳಿ ಸುದ್ದಿ ಜೋರಾಗಿದೆ. ಈ ಕುರಿತು ರಶ್ಮಿಕಾ ಮಂದಣ್ಣ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದಾರೆ.
ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಅದ್ಧೂರಿ ವಿವಾಹ ನಡೆಯಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿತ್ತು.
ಸಂದರ್ಶನದಲ್ಲಿ ಮದುವೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರಶ್ಮಿಕಾ, "ಕಳೆದ ನಾಲ್ಕು ವರ್ಷಗಳಿಂದ ಇಂತಹ ಸುದ್ದಿಗಳನ್ನು ನಾನು ಕೇಳುತ್ತಲೇ ಇದ್ದೇನೆ. ಜನರು ಸದಾ ಇದೇ ಪ್ರಶ್ನೆ ಕೇಳುತ್ತಿರುತ್ತಾರೆ. ನಾನೂ ಕೂಡ ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದೇನೆ. ಯಾವುದನ್ನೇ ಆದರೂ ಹೇಳಬೇಕಾದ ಸಮಯದಲ್ಲಿ ನಾನೇ ಖಂಡಿತವಾಗಿ ಹೇಳುತ್ತೇನೆ," ಎಂದು ಉತ್ತರಿಸಿದ್ದಾರೆ.
ಈ ಬಗ್ಗೆ ಕ್ಯಾಮೆರಾ ಮುಂದೆ ಮಾತನಾಡುವುದಕ್ಕಿಂತ ಆಫ್ ದಿ ರೆಕಾರ್ಡ್ (ಕ್ಯಾಮೆರಾ ಇಲ್ಲದಿದ್ದಾಗ) ಮಾತನಾಡಲು ಇಷ್ಟಪಡುತ್ತೇನೆ," ಎಂದಿದ್ದಾರೆ.
ಒಟ್ಟಿನಲ್ಲಿ, ಮದುವೆಯ ಸುದ್ದಿಯನ್ನು ರಶ್ಮಿಕಾ ನೇರವಾಗಿ ಒಪ್ಪಿಕೊಳ್ಳದಿದ್ದರೂ, ನಿರಾಕರಿಸುವಂತೆಯೂ ಕಾಣುತ್ತಿಲ್ಲ. "ಸಮಯ ಬಂದಾಗ ಹೇಳುತ್ತೇನೆ" ಎಂಬ ಅವರ ಮಾತು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.