Ranveer Singh  
ದೇಶ

ತುಳುನಾಡಿನ ದೈವಕ್ಕೆ ಅಪಮಾನ: ಬೆಂಗಳೂರಿನಲ್ಲಿ ರಣವೀರ್ ಸಿಂಗ್‌ ವಿರುದ್ಧ FIR..Ranveer Singh

ಮುಂಬೈ : ( Ranveer Singh ) ತುಳುನಾಡಿನ ದೈವಕ್ಕೆ ಅಪಮಾನ ಮಾಡಿದ್ದ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಕ್ಷಮೆ ಕೇಳಿದರೂ ಸಂಕಷ್ಟ ತಪ್ಪದಂತಾಗಿದೆ. ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.
ಕಳೆದ ವರ್ಷ, ಗೋವಾದಲ್ಲಿ ನಡೆದ 2025 ರ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಂದರ್ಭದಲ್ಲಿ, ರಣವೀರ್ ಸಿಂಗ್ ತಮ್ಮ ನೃತ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಈ ವೇಳೆ ರಿಷಬ್‌ ಶೆಟ್ಟಿ (Rishab Shetty) ನಟನೆಯನ್ನ ಹೊಗಳಲು ಮುಂದಾಗಿ ಬಾಲಿವುಡ್‌ ನಟ ಯಡವಟ್ಟು ಮಾಡಿಕೊಂಡಿದ್ದರು.
ರಣವೀರ್ ಸಿಂಗ್ ಕಾಂತಾರ: ಅಧ್ಯಾಯ 1" ರ ರಿಷಭ್ ಶೆಟ್ಟಿ ಅವರ ದೈವವನ್ನು ಅನುಕರಿಸಿದರು, ದೈವವನ್ನು ‘ಹೆಣ್ಣು ದೆವ್ವ’ ಎಂದು ಹೇಳಿ ಟೀಕೆಗೆ ಗುರಿಯಾಗಿದ್ದರು. ನಂತರ ಆ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ತ್ವರಿತವಾಗಿ ವೈರಲ್ ಆಯಿತು ಮತ್ತು ಜನರು ರಣವೀರ್ ಸಿಂಗ್ ಅವರ ಹಾಸ್ಯವನ್ನು ಇಷ್ಟಪಡಲಿಲ್ಲ.
ಪ್ರೇಕ್ಷಕರಲ್ಲಿ ಕುಳಿತಿದ್ದ ರಿಷಭ್ ಶೆಟ್ಟಿ, ರಣವೀರ್ ಸಿಂಗ್ ಅವರ ಕೃತ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಹಾಗೆ ಮಾಡದಂತೆ ಕೇಳಿಕೊಂಡರು. ವಿಷಯ ಉಲ್ಬಣಗೊಂಡಾಗ, ರಣವೀರ್ ಸಿಂಗ್ ಇನ್​​ಸ್ಟಾಗ್ರಾಮ್​​​ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದರು. ಈಗ, ಈ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ.
ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ರಣವೀರ್ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಎಫ್‌ಐಆರ್‌ನಲ್ಲಿ ರಣವೀರ್ ಸಿಂಗ್ ಹಿಂದೂ ಧಾರ್ಮಿಕ ಭಾವನೆಗಳನ್ನು ಮತ್ತು ಕರಾವಳಿ ಕರ್ನಾಟಕದ ಚಾವುಂಡಿ ದೈವ ಸಂಪ್ರದಾಯವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ವಕೀಲ ಪ್ರಶಾಂತ್ ಮೆಥಾಲ್ ಪಿಸಿಆರ್ ದಾಖಲಿಸಿ ಮಾಡಿಸಿದ್ದಾರೆ. ಬಿಎನ್‌ಎಸ್‌ ಸೆಕ್ಷನ್‌ 196, 299, 302 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ನವೆಂಬರ್ 28, 2025 ರಂದು ನಡೆದ ಐಎಫ್‌ಎಫ್‌ಐ ಗೋವಾದ ಸಮಾರೋಪ ಸಮಾರಂಭದಲ್ಲಿ ರಣವೀರ್ ಸಿಂಗ್ ಅವರ ಹೇಳಿಕೆಗಳು ಮತ್ತು ಸನ್ನೆಗಳು ದೇವತೆ ಸಂಪ್ರದಾಯವನ್ನು ಅವಮಾನಿಸಿವೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಪವಿತ್ರ ಚಾವುಂಡಿ ದೇವತೆಯನ್ನು ರಣವೀರ್ ಸಿಂಗ್ ಸ್ತ್ರೀ ದೆವ್ವ ಎಂದು ಉಲ್ಲೇಖಿಸಿದ್ದಾರೆ, ಇದರಿಂದಾಗಿ ಕರ್ನಾಟಕದ ಜನರ ಭಾವನೆಗಳಿಗೆ ನೋವುಂಟಾಗಿದೆ ಎಂದು ಆರೋಪಿಸಲಾಗಿದೆ.