Ram temple fund theft Courts not for politics Supreme Court asks parties not to politicise matter 
ದೇಶ

ರಾಮಮಂದಿರ ದೇಣಿಗೆ ದುರಪಯೋಗ ಕೇಸ್; ಇದೊಂದು ಕ್ರಿಮಿನಲ್ ಅಪರಾಧ, ರಾಜಕೀಯ ಬಣ್ಣ ಬಳಿಯೋದು ಬೇಡ ಎಂದ ಸುಪ್ರೀಂ ಕೋರ್ಟ್​​

ಪ್ರಮುಖ ಮುಖ್ಯಾಂಶಗಳು

  • ರಾಮಮಂದಿರ ದೇಣಿಗೆ ದುರಪಯೋಗ ಕ್ರಿಮಿನಲ್​ ಪ್ರಕರಣ ರಾಜಕೀಯ ಬಣ್ಣ ಬಳಿಯೋದು ಬೇಡ
  • ಕಾನೂನಿನ ಚೌಕಟ್ಟಿನಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸುಪ್ರೀಂ
  • ಪ್ರಕರಣವನ್ನು ರಾಜಕೀಯ ಲಾಭಕ್ಕಾಗಿ ಬಳಕೆ ಮಾಡಿಕೊಳ್ಳಬೇಡಿ ಎಂದು ಸೂಚನೆ
ನವದೆಹಲಿ: ಅಯೋಧ್ಯೆ ರಾಮಮಂದಿರಕ್ಕೆ ನೀಡಲಾದ ದೇಣಿಗೆ ಹಣವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎನ್ನುವ ಪ್ರಕರಣವನ್ನು ರಾಜಕೀಯಗೊಳಿಸಬೇಡಿ. ಇದನ್ನು ಕ್ರಿಮಿನಲ್ ಕೇಸ್ಕೋ ಆಗಿ ನೋಡಬೇಕು ಬದಲಾಗಿ ರಾಜಕೀಯ ಬಣ್ಣ ಬಳಿಯೋದಲ್ಲ​ ಎಂದು ಸುಪ್ರೀಂ ಕೋರ್ಟ್​​ ಹೇಳಿದೆ.
ಆಯೋಧ್ಯೆ ರಾಮಮಂದಿರ ದೇಣಿಗೆ ದುರುಪಯೋಗ ಪ್ರಕರಣದ ತನಿಖೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ನಡೆಸಬೇಕೆಂದು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್​​​, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಹಾಗೂ ವಿ ಮೋಹನ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸಿತು. ಈ ಸಂದರ್ಭದಲ್ಲಿ ಇದನ್ನು ರಾಜಕೀಯವಾಗಿ ಬಳಕೆ ಮಾಡಿಕೊಳ್ಳೋದು ಬೇಡ ಎಂದು ಹೇಳಿದೆ. ಇದರಲ್ಲಿ ಸಿಬಿಐ ತನಿಖೆ, ವಿಧಿವಿಜ್ಞಾನ ಲೆಕ್ಕಪರಿಶೋಧನೆ ಮತ್ತು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಖಾತೆಗಳ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಆಡಿಟ್ ಸೇರಿದಂತೆ ಹಲವು ಬೇಡಿಕೆಗಳಿವೆ.

ಕೋರ್ಟ್​ ಹೇಳಿದ್ದೇನು?

ಇದೊಂದು ಕ್ರಿಮಿನಲ್​​ ಅಪರಾಧ ಪ್ರಕರಣ. ತನಿಖೆ ಯಾವ ರೀತಿಯಲ್ಲಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಮಾತ್ರ ನಾವು ಇಲ್ಲಿದ್ದೇವೆ. ಕೋರ್ಟ್​ಗಳು ರಾಜಕೀಯ ಸ್ಥಳವಲ್ಲ. ಪ್ರಕರಣಕ್ಕೆ ರಾಜಕೀಯ ಬಣ್ಣ ಬಳಿಯೋದು ಬೇಡ ಎಂದು ಕೋರ್ಟ್​ ರಾಜಕೀಯ ಪಕ್ಷಗಳ ಕಿವಿ ಹಿಂಡಿತು.

ಎಸ್​ಐಟಿ ರಚನೆ ಬಗ್ಗೆ ಮಾಹಿತಿ

ದೇಣಿಗೆ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷಾ ತನಿಖಾ ತಂಡವನ್ನು ಪುನರ್​​ ರಚಿಸಬಹುದೇ ಎನ್ನುವುದರ ಕುರಿತು ಮಾಹಿತಿ ಪಡೆಯುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಸುಪ್ರೀಂ ಕೋರ್ಟ್ ಕೇಳಿದೆ. ಇದಕ್ಕೆ ಉತ್ತರಿಸಿದ ಸಾಲಿಸಿಟರ್ ಜನರಲ್, ಈಗಾಗಲೇ ಎಸ್‌ಐಟಿ ರಚಿಸಲಾಗಿದ್ದು, ಪ್ರಕರಣದ ಪ್ರಾರಂಭದ ತನಿಖೆಯನ್ನು ನಡೆಸಿತ್ತು. ಸದ್ಯ ಉತ್ತರ ಪ್ರದೇಶ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ಎಸ್​ಐಟಿಗೆ ಖಡಕ್​ ಸೂಚನೆ

ಅಧಿಕಾರಿಗಳು ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗದೆ ಸ್ವತಂತ್ರ್ಯವಾಗಿ, ಪ್ರಾಮಾಣಿಕವಾಗಿ ತನಿಖೆ ನಡೆಸಿ, ನ್ಯಾಯಯುತವಾಗಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋರ್ಟ್​ ಹೇಳಿದೆ. ಮುಂದಿನ ವಿಚಾರಣೆಯನ್ನು ಜುಲೈ27ಕ್ಕೆ ಕೋರ್ಟ್​ ಮುಂದೂಡಿದೆ.
ಅಯೋಧ್ಯೆ ರಾಮಮಂದಿರಕ್ಕೆ ಭಕ್ತರು ನೀಡಿದ ದೇಣಿಗೆ ಹಣ ದುರುಪಯೋಗವಾಗಿದೆ ಮತ್ತು ಕಳ್ಳತನವಾಗಿದೆ ಎನ್ನುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಎಸ್​ಐಟಿ ರಚಿಸಿತ್ತು. ಅಧಿಕಾರಿಗಳು ತನಿಖೆ ನಡೆಸಿ ಇಲ್ಲಿಯವರೆಗೂ 8 ಮಂದಿ ಟ್ರಸ್ಟ್​ ನೌಕರನ್ನು ಬಂಧಿಸಿ, 79 ಲಕ್ಷಕ್ಕೂ ಹೆಚ್ಚು ಹಣವನ್ನು ವಶಪಡಿಸಿಕೊಂಡಿದೆ. ಅಲ್ಲದೇ ಈ ಕೇಸ್​ನಿಂದಾಗಿ ಈ ತನಿಖೆಯು ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಮಾಜಿ ಟ್ರಸ್ಟಿ ಅನಿಲ್ ಮಿಶ್ರಾ ಅವರ ರಾಜೀನಾಮೆ ನೀಡಿದ್ದಾರೆ, (ಏಜೆನ್ಸೀಸ್).