ಕೈಯಲ್ಲಿ ಕಾಣಿಕೆ ಡಬ್ಬಿ ಹಿಡಿದು, ಕಾವಿ ಧರಿಸಿ ಸಂಸತ್ ಭವನದ ಮುಂದೆ ಸಂಸದ ಪಪ್ಪು ಯಾದವ್ ಪ್ರತಿಭಟನೆ 
ದೇಶ

ರಾಮ ಮಂದಿರ ದೇಣಿಗೆ ವಿವಾದ: ಕೈಯಲ್ಲಿ ಕಾಣಿಕೆ ಡಬ್ಬಿ, ಹಣೆಗೆ ಕುಂಕುಮ; ಸಂಸತ್ ಮುಂದೆ ಕಾವಿ ಧರಿಸಿ ಪಪ್ಪು ಯಾದವ್ ಹೈಡ್ರಾಮಾ! Pappu Yadav Parliament Protest

ಪ್ರಮುಖ ಮುಖ್ಯಾಂಶಗಳು

  • ರಾಮ ಮಂದಿರ ದೇಣಿಗೆ ವಿವಾದ
  • ಕೈಯಲ್ಲಿ ಕಾಣಿಕೆ ಡಬ್ಬಿ ಹಿಡಿದು, ಕಾವಿ ಧರಿಸಿ ಸಂಸತ್ ಭವನದ ಮುಂದೆ ಸಂಸದ ಪಪ್ಪು ಯಾದವ್ ಪ್ರತಿಭಟನೆ
  • ಪಪ್ಪು ಪ್ರತಿಭಟನೆಗೆ ವಿಪಕ್ಷಗಳ ಬೆಂಬಲ
  • ಅಮಿತ್​ ಶಾ ರಾಜೀನಾಮೆ ಕೋರಿ ಘೋಷಣೆ
ನವದೆಹಲಿ: ಅಯೋಧ್ಯಾ ರಾಮ ಮಂದಿರದಲ್ಲಿ ನಡೆದಿದೆ ಎನ್ನಲಾದ ಹಣಕಾಸು ಅಕ್ರಮದ ಕುರಿತು ಮಳೆಗಾಲದ ಅಧಿವೇಶನದಲ್ಲಿ ಚರ್ಚೆಯಾಗಬೇಕೆಂದು ವಿರೋಧ ಪಕ್ಷ ಪಟ್ಟು ಹಿಡಿದಿದೆ. ಶುಕ್ರವಾರ (ಜು.31) ಸಂಸತ್​ ಭವನದ ಮುಂದೆ ಹೈಡ್ರಾಮಾ ನಡೆದಿದ್ದು, ಬಿಹಾರದ ಸಂಸದ ಪಪ್ಪು ಯಾದವ್​ (Pappu Yadav Parliament Protest) ಕಾವಿ ಬಟ್ಟೆ ಧರಿಸಿ, ಕೈಯಲ್ಲಿ ದೇಣಿಗೆ ಡಬ್ಬಿ ಹಿಡಿಡು ಸಂಸತ್​ ಭವನದ ಮುಂದೆ ಕುಳಿತಿದ್ದಾರೆ.
ಈಗ ಈ ವಿಡಿಯೋ, ಸೋಷಿಯಲ್​ ಮೀಡಿಯಾನಲ್ಲಿ ಸಕ್ಕತ್​ ವೈರಲ್​ ಆಗುತ್ತಿದ್ದು, ಪಪ್ಪು ಯಾದವ್​ ಪ್ರತಿಭಟನೆಗೆ ಕಾಂಗ್ರೆಸ್​ ಸೇರಿದಂತೆ ಇತರ ವಿರೋಧ ಪಕ್ಷಗಳು ಬೆಂಬಲ ಸೂಚಿಸಿವೆ.

ವಿಡಿಯೋನಲ್ಲೇನಿದೆ?

ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಆಗುತ್ತಿರುವ ವಿಡಿಯೋನಲ್ಲಿ, ಪುರ್ನಿಯಾ ಸಂಸದ ಪಪ್ಪು ಯಾದವ್​ ಕಾವಿ ಬಟ್ಟೆ ಧರಿಸಿ, ಹಣೆಗೆ ಕುಂಕುಮವನ್ನು ಬಳಿದು, ಕೈಯಲ್ಲಿ ಕಾಣಿಕೆ ಡಬ್ಬಿಯನ್ನು ಹಿಡಿದು ಕುಳಿತಿದ್ದಾರೆ. ವಿಡಿಯೋನಲ್ಲಿ ವಿಪಕ್ಷ ನಾಯಕ ರಾಹುಲ್​ ಗಾಂಧಿ, ಪಪ್ಪು ಯಾದವ್​ಗೆ ದಕ್ಷಿಣೆ ನೀಡುತ್ತಿರುವ ದೃಶ್ಯವನ್ನು ಕೂಡ ನೋಡಬಹುದಾಗಿದೆ.
ರಾಮ ಮಂದಿರದಲ್ಲಿ ಕಾಣಿಕೆ ಹಣವನ್ನು ಕಳ್ಳತನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಆಡಳಿತ ಪಕ್ಷ ಅಧಿವೇಶದಲ್ಲಿ ಚರ್ಚೆ ನಡೆಸಬೇಕು ಎನ್ನುವುದು ವಿಪಕ್ಷಗಳ ಬೇಡಿಕೆಯಾಗಿದೆ.

ಅಮಿತ್​ ಶಾ ಅಧಿವೇಶನಕ್ಕೆ ಏಕೆ ಬರುತ್ತಿಲ್ಲ?

ಇದರ ಜೊತೆಗೆ ಜು.20 ರಂದು ಜಂತರ್​-ಮಂತರ್​ನಲ್ಲಿ ನೀಟ್​ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳ ಮೇಲೆ ಭದ್ರತಾ ಸಿಬ್ಬಂದಿಗಳು ಕಠಿಣ ಕ್ರಮ ಕೈಗೊಳ್ಳಲು ಆದೇಶ ನೀಡಿದವರು ಯಾರು? ಪ್ರಶ್ನೆ ಮಾಡಿದ ಮಕ್ಕಳ ಮೇಲೆ ಅಶ್ರುವಾಯು, ಪೆಲೆಟ್​ ಗನ್​ ಪ್ರಯೋಗಿಸಲಾಗಿದೆ. ಇದಕ್ಕೆ ಗೃಹ ಸಚಿವರಾದ ಅಮಿತ್​ ಶಾ ಉತ್ತರಿಸಬೇಕು. ಆದರೆ ಅವರು ಅಧಿವೇಶನಕ್ಕೆ ಹಾಜರಾಗುತ್ತಿಲ್ಲ. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ವಿಪಕ್ಷಗಳು ಪ್ರತಿಭಟನೆ ನಡೆಸಿವೆ, (ಏಜನ್ಸೀಸ್​).