ಅಯೋಧ್ಯೆ ರಾಮಮಂದಿರ ದೇಣಿಗೆ ಅಕ್ರಮ ಆರೋಪ ಪ್ರಕರಣ
- ಅಯೋಧ್ಯೆ ರಾಮಮಂದಿರ ದೇಣಿಗೆ ಅಕ್ರಮ ಆರೋಪ ಪ್ರಕರಣ
- ಚಂಪತ್ ರಾಯ್ ಹಾಗೂ ಅನಿಲ್ ಮಿಶ್ರಾ ಅವರಿಗೆ SIT ಕ್ಲೀನ್ ಚಿಟ್
- 8 ಜನರ ವಿರುದ್ಧ ಎಫ್‌ಐಆರ್ ದಾಖಲು
ಅಯೋಧ್ಯಾ: ಉತ್ತರ ಪ್ರದೇಶದದಲ್ಲಿರುವ ಅಯೋಧ್ಯಾ ರಾಮ ಮಂದಿರದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿರುವ ದೇಣಿಗೆ ಕಳ್ಳತನ (Ram Mandir Donation) ಆರೋಪದಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿಯಾಗುದ್ದ, ಚಂಪತ್ ರಾಯ್ ಹಾಗೂ ಅನಿಲ್ ಮಿಶ್ರಾ ಗುಲಾಟಿ ಎಸ್ಐಟಿಯಿಂದ ಕ್ಲೀನ್ ಚೀಟ್ ಪಡೆದಿದ್ದಾರೆಂದು ಹೇಳಲಾಗುತ್ತಿದೆ.
ರಾಮ ಮಂದಿರಕ್ಕೆ ಹರಿದು ಬಂದಿರುವ ಕೋಟ್ಯಾಂತರ ರೂಪಾಯಿ ದೇಣಿಗೆ ಹಣದಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಕೇಳಿಬಂದ ಹಿನ್ನಲೆ ರಾಜ್ಯ ಸರ್ಕಾರ, ಎಸ್ಐಟಿ ರಚಿಸಿ, ತನಿಖೆಗೆ ಮುಂದಾಗಿತ್ತು. ಇನ್ನೂ ಅಂತಿಮ ವರದಿ ಸಿದ್ಧವಾಗುತ್ತಿದ್ದು, ಸದ್ಯದ ಮಟ್ಟಿಗೆ, ಈ ದೇಣಿಗೆ ಅಕ್ರಮದಲ್ಲಿ ಚಂಪತ್ ರಾಯ್ ಹಾಗೂ ಅನಿಲ್ ಮಿಶ್ರಾ ಗುಲಾಟಿ ಅವರ ಯಾವುದೇ ನೇರ ಪಾತ್ರವಿತ್ತು ಎಂದು ಸಾಬೀತಾಗದ ಕಾರಣ ಇವರಿಬ್ಬರಿಗೆ ಕ್ಲೀನ್ ಚೀಟ್ ನೀಡಲಾಗಿದೆ.
ಪ್ರಾಥಮಿಕ ವರದಿ ಸಲ್ಲಿಕೆ!
ಕೋಟ್ಯಾಂತರ ಹಿಂದೂಗಳ ನಂಬಿಕೆ ಹಾಗೂ ಅಸ್ತಿತ್ವ ಎಂದು ನಂಬಲಾಗುವ ಪ್ರಭು ಶ್ರೀರಾಮನ ದೇವಸ್ಥಾನದಲ್ಲಿ ಅಕ್ರಮ ನಡೆದಿದೆ ಎಂಬ ಸುದ್ದಿ ದೇಶಾದ್ಯಂತ ಚರ್ಚೆಗೆ ನಾಂದಿ ಹಾಡಿತ್ತು. ಆದ್ದರಿಂದು ಕೂಡಲೇ ಯುಪಿ ಸರ್ಕಾರ, ಎಸ್ಐಟಿ ರಚಿಸಿ ತನಿಖೆ ಆರಂಭಿಸಿತ್ತು. ಸುಪ್ರೀಂ ಕೋರ್ಟ್ ಕೂಡ ತನಿಖೆ ಆದಷ್ಟು ಬೇಗ ನಡೆಸಿ ವರದಿ ಸಲ್ಲಿಸುವಂತೆ ಎಸ್ಐಟಿಗೆ ನಿರ್ದೇಶನ ನೀಡಿತ್ತು.
ಈಗ ಪ್ರಾಥಮಿಕ ವರದಿಯನ್ನು ಎಸ್ಐಟಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಸಲ್ಲಿಸಿದ್ದು, ಇದರಲ್ಲಿ ಚಂಪತ್ ರಾಯ್ ಹಾಗೂ ಅನಿಲ್ ಮಿಶ್ರಾ ಅವರ ಯಾವುದೇ ನೇರ ಪಾತ್ರವಿಲ್ಲ ಎಂದು ತಿಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಅಂತಿಮ ವರದಿ ಸಿದ್ಧವಾಗದ ಹಿನ್ನಲೆ, ಅದು ಹೊರಬಿದ್ದ ಬಳಿಕ ಸ್ಪಷ್ಟ ಚಿತ್ರಣ ದೊರೆಯಲಿದೆ.
ಎಂಟು ಜನರ ವಿರುದ್ಧ ಎಫ್‌ಐಆರ್!
ಜೂನ್ 13 ರಂದು ಸಿಎಂ ಯೋಗಿ ಆದಿತ್ಯನಾಥ್ ಎಸ್ಐಟಿಯನ್ನು ರಚಿಸಿದ್ದು ಜೂನ್ 25 ರಂದು ಎಂಟು ಜನರ ಮೇಲೆ ಎಫ್‌ಐಆರ್ ದಾಖಲಾಗಿತ್ತು. ಅಯೋಧ್ಯಾ ರಾಮ ಮಂದಿರದ ದೇಣಿಗೆ ಅಕ್ರಮಕ್ಕೆ ಸಂಬಂಧಿಸಿದಂತೆ ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವ್ಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮಶಂಕರ್ ಮಿಶ್ರಾ, ಸುಭಾಷ್ ಶ್ರೀವಾಸ್ತವ ಮತ್ತು ರಾಮ್ ಶಂಕರ್ ಯಾದವ್ ಅಲಿಯಾಸ್ ತಿನ್ನು ಎನ್ನುವವರ ಮೇಲೆ ಎಫ್‌ಐಆರ್ ದಾಖಲಾಗಿತ್ತು ವಿಚಾರಣೆ ಮುಂದುವರಿಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ, (ಏಜನ್ಸೀಸ್).