PBKS vs RR: ಐಪಿಎಲ್ 2006ರ ಆವೃತ್ತಿಯ ಚಂಡೀಗಢದ ಮುಲ್ಲಾಪುರದ ಯಾದವೇಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅಧ್ಭುತ ಬ್ಯಾಟಿಂಗ್ ಮೂಲಕ ರಾಜಸ್ಥಾನ ರಾಯಲ್ಸ್ 6 ವಿಕೆಟ್ಗಳಿಂದ ಗೆದ್ದು ಬೀಗಿದ್ದು, ಈ ಆವತ್ತಿಯಲ್ಲಿ ಪಂಜಾಬ್ ಮೊದಲು ಸೋಲು ಕಂಡಿದೆ.
ಪಂಜಾಬ್ ಕಿಂಗ್ಸ್ ನೀಡಿದ 222 ರನ್ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ, ಇನ್ನೂ 4 ಎಸೆತಗಳಿರುವಂತೆಯೇ ಗೆಲುವು 19.2 ಓವರ್ಗಳಿಂದ ನಾಲ್ಕು ವಿಕೆಟ್ ನಷ್ಟಕ್ಕೆ 228 ರನ್ಗಳಿಸಿ ರೋಚಕ ಗೆಲುವನ್ನು ಸಾಧಿಸಿತು. ವೈಭವ್ ಸೂರ್ಯವಂಶಿ (43), ಯಶಸ್ವಿ ಜೈಸ್ವಾಲ್ (51), ಫೆರೇರಾ(ಅಜೇಯ 52) ಹಾಗೂ ಶುಭಂ ದುಬೆ (ಅಜೇಯ 31) ಗಳಿಸಿದರು.
ಫರೇರಾ, ಶುಭಂ ದುಬೆ ಆರ್ಭಟ
ಪಂದ್ಯದಲ್ಲಿ ಫರೇರಾ ಹಾಗೂ ಇಂಪ್ಯಾಕ್ಟ್ ಪ್ಲೇಯರ್ ಶುಭಂ ದುಬೆ ಪಂಜಾಬ್ ಬೌಲರ್ಗಳನ್ನು ಅಕ್ಷರಶಃ ಬೆಂಡೆತ್ತಿದ್ದು, 5ನೇ ವಿಕೆಟ್ ಜೊತೆಯಾಟದಲ್ಲಿ 32 ಎಸೆತಗಳಲ್ಲಿ 77 ರನ್ಗಳಿಸಿ ಡವನ್ನ ಗೆಲುವಿನ ತಂಡವನ್ನು ಗೆಲುವಿಗೆ ಕಾರಣರಾದರು. ಫೆರೇರಾ 26 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ಗಳ ಸಹಿತ ಅಜೇಯ 52 ರನ್ಗಳಿಸಿದರೆ, ದುಬೆ ಕೇವಲ 12 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ಗಳ 31 ರನ್ ಗಳಿಸಿ ಅಜೇಯರಾದರು.
ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ತಂಡ, 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 222 ರನ್ಗಳಿಸಿತ್ತು. ಪ್ರಭ್ಸಿಮ್ರಾನ್ ಸಿಂಗ್, ಪ್ರಿಯಾಂಶ್ ಆರ್ಯ, ಶ್ರೇಯಸ್ ಅಯ್ಯರ್ ಅವರೊಂದಿಗೆ ಅದ್ಭುತವಾಗಿ ಆಟವಾಡಿ 59 ರನ್ ಗಳಿಸಿದರು. ಕೊನೆ ಓವರ್ನಲ್ಲಿ ಮಾರ್ಕಸ್ ಸ್ಟೊಯಿನಿಸ್ 24 ರನ್ಗಳಿಸಿ ಕೇವಲ 22 ಎಸೆತಗಳಲ್ಲಿ 62 ರನ್ ಗಳಿಕೆ ವ್ಯರ್ಥವಾಯಿತು.
ಪಿಬಿಕೆಎಸ್ ಮೊತ್ತ: 222/4 (20 ಓವರ್)
ಆರ್ಆರ್ ಮೊತ್ತ: 228/04 (19.2 ಓವರ್)