- ರಾಜಸ್ಥಾನ ಸರ್ಕಾರಿ ಶಾಲೆಗಳಲ್ಲಿ ಇನ್ಮುಂದೆ ದಿನಪತ್ರಿಕೆ ಓದುವುದು ಕಡ್ಡಾಯ
- ರಾಜಸ್ಥಾನ ಶಾಲೆಗಳಲ್ಲಿ 'ನ್ಯೂಸ್ ಪೇಪರ್' ಕಡ್ಡಾಯ: ಶಿಕ್ಷಣದಲ್ಲಿ ಹೊಸ ಕ್ರಾಂತಿ
ರಾಜಸ್ಥಾನ: ( newspaper reading) ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಪತ್ರಿಕೆ ಓದುವುದು ಕಡ್ಡಾಯಗೊಳಿಸುವ ಮೂಲಕ ಶಾಲೆಗಳ ನೋಟವನ್ನು ಬದಲಾಯಿಸುವುದರ ಜೊತೆಗೆ, ವಿದ್ಯಾರ್ಥಿಗಳ ಆಲೋಚನಾ ಶೈಲಿಯನ್ನು ಸುಧಾರಿಸಲು ಯೋಗಿ ಸರ್ಕಾರ ಈ ಮಹತ್ವದ ನಿರ್ಧಾರಕ್ಕೆ ಬಂದಿರುವುದು ಗೊತ್ತಿರುವ ವಿಚಾರ. ಇದೇ ಮಾದರಿಯಲ್ಲಿ ರಾಜಸ್ಥಾನದ ಶಿಕ್ಷಣ ( newspaper reading) ಇಲಾಖೆಯು ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ದಿನಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸಿದೆ. ಡಿಸೆಂಬರ್ 31, 2025 ರಂದು ಈ ಕುರಿತು ಅಧಿಕೃತ ಆದೇಶ ಹೊರಡಿಸಲಾಗಿದೆ.
ಸರ್ಕಾರದ ಸೂಚನೆಗಳ ಪ್ರಕಾರ, ಪ್ರೌಢಶಾಲೆಗಳು ಒಂದು ಇಂಗ್ಲಿಷ್ ಮತ್ತು ಒಂದು ಹಿಂದಿ ಪತ್ರಕೆಯನ್ನು ಶಾಲೆಗೆ ತರಿಸಬೇಕು. ಪ್ರತಿದಿನ ಬೆಳಗಿನ ಶಾಲಾ ಪ್ರಾರ್ಥನಾ ಸಭೆಯಲ್ಲಿ (Morning Assembly) ಕನಿಷ್ಠ 10 ನಿಮಿಷಗಳನ್ನು ದಿನಪತ್ರಿಕೆ ಓದಲು ಮೀಸಲಿಡಬೇಕು.ವಿದ್ಯಾರ್ಥಿಗಳು ರಾಷ್ಟ್ರೀಯ, ಅಂತರಾಷ್ಟ್ರೀಯ, ಕ್ರೀಡೆ ಮತ್ತು ಸಂಪಾದಕೀಯ ಪುಟದ ಮುಖ್ಯ ಸುದ್ದಿಗಳನ್ನು ಓದಬೇಕು. ಪತ್ರಿಕೆ ಓದುವ ವಿದ್ಯಾರ್ಥಿಗಳು ಶಾಲೆ ಆರಂಭವಾಗುವ 30 ನಿಮಿಷ ಮೊದಲೇ ಬಂದು ಸಿದ್ಧತೆ ನಡೆಸಬೇಕು.
ಪತ್ರಿಕೆಯಿಂದ ಪ್ರತಿದಿನ 5 ಹೊಸ ಪದಗಳನ್ನು ಆಯ್ದು, ಅವುಗಳ ಅರ್ಥವನ್ನು ವಿದ್ಯಾರ್ಥಿಗಳಿಗೆ ವಿವರಿಸಬೇಕು. ಇದರಿಂದ ಮಕ್ಕಳ ಶಬ್ದಕೋಶ (Vocabulary) ವೃದ್ಧಿಯಾಗಲಿದೆ. ಹಿರಿಯ ಮಾಧ್ಯಮಿಕ ಶಾಲೆಗಳು ಕನಿಷ್ಠ ಒಂದು ಇಂಗ್ಲಿಷ್ ಮತ್ತು ಒಂದು ಹಿಂದಿ ಪತ್ರಿಕೆಯನ್ನು ತರಿಸಬೇಕು.ಪ್ರಾಥಮಿಕ ಶಾಲೆಗಳು ಕನಿಷ್ಠ ಎರಡು ಹಿಂದಿ ಪತ್ರಿಕೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು.ಪ್ರತಿ ಶನಿವಾರದ 'ಬ್ಯಾಗ್ ರಹಿತ ದಿನ'ದಂದು ಪ್ರಚಲಿತ ವಿದ್ಯಮಾನಗಳ ಬಗ್ಗೆ ಗುಂಪು ಚರ್ಚೆ ಮತ್ತು ವಿಶೇಷ ಸಭೆಗಳನ್ನು ನಡೆಸಲು ಸೂಚಿಸಲಾಗಿದೆ.
ಈ ಉಪಕ್ರಮವು "ವಿದ್ಯಾರ್ಥಿಗಳಲ್ಲಿ ಸುದ್ದಿಗಳಲ್ಲಿ ಆಸಕ್ತಿಯನ್ನು ಹೆಚ್ಚಿಸುತ್ತದೆ, ಅವರ ಸಾಮಾನ್ಯ ಜ್ಞಾನವನ್ನು ವಿಸ್ತರಿಸುತ್ತದೆ ಮತ್ತು ಅವರ ಭಾಷೆ ಮತ್ತು ಅಭಿವ್ಯಕ್ತಿ ಕೌಶಲ್ಯಗಳನ್ನು ಹಾಗೂ ಸಾಮಾಜಿಕ ಅರಿವನ್ನು ಧನಾತ್ಮಕವಾಗಿ ಸುಧಾರಿಸುತ್ತದೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ಸಹಾಯ ಮಾಡುತ್ತದೆ" ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ರಾಜಸ್ಥಾನದ ಶಿಕ್ಷಣ ಕಾರ್ಯದರ್ಶಿ ಕೃಷ್ಣ ಕುನಾಲ್ ಅವರ ಪ್ರಕಾರ, ಈ ಉಪಕ್ರಮವು ವಿದ್ಯಾರ್ಥಿಗಳಲ್ಲಿ ಡಿಜಿಟಲ್ ಪರದೆಯ ಮೇಲಿನ ಅವಲಂಬನೆಯನ್ನು (Screen Time) ಕಡಿಮೆ ಮಾಡಿ, ಮುದ್ರಿತ ಪತ್ರಿಕೆಗಳನ್ನು ಓದುವ ಆಸಕ್ತಿ ಮೂಡಿಸುತ್ತದೆ. ಇದು ಭವಿಷ್ಯದಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಹಕಾರಿಯಾಗಲಿದೆ.
ಉತ್ತರ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಇನ್ಮುಂದೆ ದಿನಪತ್ರಿಕೆ ಓದುವುದು ಕಡ್ಡಾಯ!
ಉತ್ತರ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಪತ್ರಿಕೆ ಓದುವುದು ಕಡ್ಡಾಯಗೊಳಿಸುವ ಮೂಲಕ ಶಾಲೆಗಳ ನೋಟವನ್ನು ಬದಲಾಯಿಸುವುದರ ಜೊತೆಗೆ, ವಿದ್ಯಾರ್ಥಿಗಳ ಆಲೋಚನಾ ಶೈಲಿಯನ್ನು ಸುಧಾರಿಸಲು ಯೋಗಿ ಸರ್ಕಾರ ಈ ಮಹತ್ವದ ನಿರ್ಧಾರಕ್ಕೆ ಬಂದಿದೆ.
ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸಿ ಶಿಕ್ಷಣ ಇಲಾಖೆ ಆದೇಶಗಳನ್ನು ಹೊರಡಿಸಿದ್ದು, ವಿದ್ಯಾರ್ಥಿಗಳು ಓದುವ ಶಕ್ತಿಯನ್ನು ಹೆಚ್ಚಿಸುವುದು ಮತ್ತು ಗ್ಯಾಜೆಟ್‌ಗಳ ವ್ಯಸನದಿಂದ ಬಳಲುತ್ತಿರುವ ವಿದ್ಯಾರ್ಥಿಗಳನ್ನು ಇದರಿಂದ ಬಚಾವ್ ಮಾಡುವ ಉದ್ದೇಶ ಪರದೆಯ ಸಮಯವನ್ನು ಕಡಿಮೆ ಮಾಡುವುದಾಗಿದೆ.
ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಾರ್ಥಸಾರಥಿ ಸೇನ್ ಶರ್ಮಾ ಡಿಸೆಂಬರ್ 23 ರಂದು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅದರ ಪ್ರಕಾರ, ಪ್ರತಿದಿನ ಬೆಳಿಗ್ಗೆ ಶಾಲಾ ಸಭೆಯಲ್ಲಿ ಪತ್ರಿಕೆ ಓದಲು 10 ನಿಮಿಷಗಳ ಸಮಯವನ್ನು ನಿರ್ದಿಷ್ಟವಾಗಿ ನಿಗದಿಪಡಿಸಬೇಕು. ವಿದ್ಯಾರ್ಥಿಗಳು ರಾಷ್ಟ್ರೀಯ, ಅಂತರರಾಷ್ಟ್ರೀಯ, ಕ್ರೀಡೆ ಮತ್ತು ಸಂಪಾದಕೀಯ ಲೇಖನಗಳಿಂದ ಪ್ರಮುಖ ಅಂಶಗಳನ್ನು ಸರದಿ ಆಧಾರದ ಮೇಲೆ ಪಠಿಸಬೇಕಾಗುತ್ತದೆ. ಹಿಂದಿ ಮತ್ತು ಇಂಗ್ಲಿಷ್ ದಿನಪತ್ರಿಕೆಗಳನ್ನು ಶಾಲಾ ಸಂಸ್ಕೃತಿಯ ಅವಿಭಾಜ್ಯ ಅಂಗವನ್ನಾಗಿ ಮಾಡಬೇಕೆಂದು ಸರ್ಕಾರ ಸ್ಪಷ್ಟಪಡಿಸಿದೆ.