Rajasthan Badminton Player Murder Case
- 21 ವರ್ಷದ ಬ್ಯಾಡ್ಮಿಂಟನ್ ಆಟಗಾರನ ಅಪಹರಿಸಿ, ದೈಹಿಕವಾಗಿ ಹಿಂಸಿಸಿ ಕೊಲೆ
- ಫರಿದಾಬಾದ್ನ ಅಲ್ವಾರ್ನಲ್ಲಿ ನಡೆದ ಘಟನೆ, ಇಬ್ಬರ ಬಂಧನ
- ಮಗಳೊಂದಿಗೆ ಪರಾರಿಯಾಗಿದ್ದ ಬಗ್ಗೆ ದೂರು ದಾಖಲಿಸಿದ್ದ ಪ್ರೇಯಸಿ ಕುಟುಂಬಸ್ಥರು
Rajasthan Badminton Player Murder Case: ಫರಿದಾಬಾದ್ನ ಅಲ್ವಾರ್ನಲ್ಲಿ ಬ್ಯಾಡ್ಮಿಂಟನ್ ಆಟಗಾರನೊಬ್ಬನ್ನು ಅಪರಹರಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಇದು ಮರ್ಯಾದ ಹತ್ಯಾ ಪ್ರಕರಣ ಎಂದು ಶಂಕಿಸಿದ್ದು, ಯುವಕ ಪ್ರೀತಿಸುತ್ತಿದ್ದ ಪ್ರೇಯಸಿ ಮನೆಯವರೇ ಆರೋಪಿಗಳು ಎನ್ನಲಾಗುತ್ತಿದೆ.
ಮೃತ ಬ್ಯಾಡ್ಮಿಂಟನ್ ಆಟಗಾರನನ್ನು ಮೋನು ಎಂದು ಗುರುತಿಸಲಾಗಿದೆ. ರಾಜಸ್ಥಾನದ ಭಿವಾಡಿ ಪ್ರದೇಶದ ಸೈದ್‌ಪುರ ಗ್ರಾಮದ ನಿವಾಸಿಯಾಗಿದ್ದು, ದ್ವಿತೀಯ ಪಿಯುಸಿ ಪರೀಕ್ಷೆ ಬರೆದು, ಶೇ.70ರಷ್ಟು ಅಂಕಗಳನ್ನು ಗಳಿಸಿದ್ದ ಎನ್ನಲಾಗಿದೆ.
ಪ್ರೀತಿಗೆ ವಿರೋಧ
ಈತ ಅಪ್ರಾಪ್ತ ಬಾಲಕಿಯನ್ನು ಪ್ರೇಮಿಸುತ್ತಿದ್ದ. ಇದು ಬಾಲಕಿಯ ಕುಟುಂಬಸ್ಥರಿಗೆ ಇಷ್ಟವಿರಲಿಲ್ಲ. ಅಲ್ಲದೇ, ಇಬ್ಬರು ಕಳೆದ ಕೆಲವು ವಾರದ ಹಿಂದೆ ಓಡಿ ಹೋಗಿದ್ದರು. ಅದರ ವಿರುದ್ಧ ಆಕೆಯ ತಂದೆ ದೂರು ದಾಖಲಿಸಿ ಆಕೆಯನ್ನು ಪತ್ತೆ ಹಚ್ಚಿದ್ದರು. ಇದೇ ದ್ವೇಷವನ್ನು ಮನದಲ್ಲಿಟ್ಟುಕೊಂಡು, ಮೋನುನನ್ನು ಅಪಹರಿಸಿ ಮೂರು ದಿನ ಬಂಧನದಲ್ಲಿರಿಸಿ, ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ ಎಂದಿದ್ದಾರೆ
21 ವರ್ಷದ ಮೋನು ಪ್ರತಿಭಾನ್ವಿತ ಬ್ಯಾಡ್ಮಿಂಟನ್ ಆಟಗಾರ. ಆತ ರಾಜ್ಯಮಟ್ಟದಲ್ಲಿ ತನ್ನ ಕಾಲೇಜನ್ನು ಪ್ರತಿನಿಧಿಸಿದ್ದ ಅಲ್ಲದೆ, ಜಿಲ್ಲಾಮಟ್ಟದ ಪಂದ್ಯಾವಳಿಗಳಲ್ಲಿ ಪದಕವನ್ನು ಗೆದ್ದುಕೊಂಡಿದ್ದ ಎಂದು ಆತನ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ.
ಮೋನು ಚಿಕ್ಕಪ್ಪ ಹೇಳಿದ್ದಿಷ್ಟು
ಮೋನು ಚಿಕಪ್ಪ ನರೇಂದ್ರ ಅವರು ಹೇಳಿಕೆಯ ಪ್ರಕಾರ, ಮೇ.17ರಂದು ಆತನ ಹಳೆಯ ಕೇಸ್ ವಿಚಾರಣೆಗಾಗಿ ಹರಿಯಾಣದ ತಿಗಾಂವ್ ಪೊಲೀಸ್ ಠಾಣೆಗೆ ಹೋಗುತ್ತಿರುವುದಾಗಿ ಹೊರಟ. ಆತನನ್ನು ಅಪಹರಿಸಿ, ಮೂರು ದಿನ ಬಂಧನದಲ್ಲಿರಿಸಿ ಆತನ ಮೇಲೆ ಕ್ರೂರವಾಗಿ ಹಲ್ಲೆ ಮಾಡಲಾಗಿದೆ. ಮೇ.20ರಂದು ಹುಡುಗಿಯ ತಂದೆ ಕುಲಭೂಷಣ್ ಅವರು ಮನೆಯ ಹೊರಗೆ ಮೋನು ರಕ್ತಸಿಕ್ತ ಪರಿಸ್ಥಿಯಲ್ಲಿರುವ ಬಗ್ಗೆ ಮಾಹಿತಿ ಕೊಟ್ಟರು. ನಂತರ ನಾವು ಆಸ್ಪತ್ರೆಗೆ ಸೇರಿದಿದೆವು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದರು.
ಬಾಲಕಿಯೊಂದಿಗೆ ಪರಾರಿಯಾಗಿದ್ದ ಮೋನು
ಏಪ್ರಿಲ್ನಲ್ಲಿ ಬಾಲಕಿಯೊಂದಿಗೆ ಮೋನು ಓಡಿ ಹೋದ ಕೇಸ್ ಮೋನು ವಿರುದ್ಧ ದಾಖಲಾಗಿತ್ತು. ತಿಗಾಂವ್ನಲ್ಲಿ ಕುಲಭೂಷಣ್ ಅವರು ದೂರು ಕೊಟ್ಟಿದ್ದರು. ಆನಂತರ ಬಾಲಕಿ ಎಲ್ಲಿದ್ದಾಳೆ ಎಂದು ಪತ್ತೆ ಹಚ್ಚಿ ಕರೆತರಲಾಗಿತ್ತು. ಆದರೆ, ಮೋನು ತಲೆಮರೆಸಿಕೊಂಡಿದ್ದರು. ಈ ವೇಳೆ ಪೊಲೀಸರಿಗೆ ಕುಲ್ಭೂಷನ್ ಕರೆ ಮಾಡಿ ಮನೆಯಲ್ಲೇ ಇದ್ದಾನೆ ಎಂದು ಮಾಹಿತಿ ಕೊಟ್ಟಿದ್ದಾರೆ. ಆಗ ಮೋನು ಕುಟುಂಬಕ್ಕೆ ಕರೆ ಮಾಡಿದರೆ ಆತ ಗಾಯಗೊಂಡು ಮೃತಪಟ್ಟಿದ್ದು ತಿಳಿದು ಬಂದಿತು.
ಸದ್ಯ ಕುಟುಂಬಸ್ಥರು ಕಿಡ್ನ್ಯಾಪ್ ಕೇಸ್ ದಾಖಲಿಸಿದ್ದಾರೆ. ಪ್ರಕರಣದ ಮೇರೆಗೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ, (ಏಜೆನ್ಸೀಸ್).