ಪಿ.ಕೆ.ಮಿಶ್ರಾ ಕೊಲೆಯಾದ ಹೆಡ್ ಕಾನ್ಸ್‌ಟೇಬಲ್
ರಾಯ್‌ಗಢ: ಛತ್ತೀಸ್ಗಢದ ರಾಯ್‌ಗಢ ಆರ್‌ಪಿಎಫ್ ಪೋಸ್ಟ್ ಒಳಗೆ ಇಂದು(ಡಿ. 03) ಬೆಳಗ್ಗೆ ರೈಲ್ವೆ ರಕ್ಷಣಾ ಪಡೆಯ ಹೆಡ್ ಕಾನ್ಸ್‌ಟೇಬಲ್ ಒಬ್ಬರು ಅವರ ಸಹೋದ್ಯೋಗಿಯೊಬ್ಬರನ್ನು ಗುಂಡು ಹಾರಿಸಿ ಕೊಲೆ(Murder) ಮಾಡಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು, ಆತನ ಬಳಿಯಿದ್ದ ಬಂದೂಕನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.
ಪಿ.ಕೆ.ಮಿಶ್ರಾ ಕೊಲೆಯಾದ ಹೆಡ್ ಕಾನ್ಸ್‌ಟೇಬಲ್. ಸಹವರ್ತಿ ಕೆ.ಎಸ್.ಲಾಡರ್ ತನ್ನ ಸರ್ವಿಸ್ ಬಂದೂಕಿನಿಂದ ನಾಲ್ಕು ಬಾರಿ ಗುಂಡು ಹಾರಿಸಿ ಕೊಲೆ ಮಾಡಿದ ಆರೋಪಿ. ಮಿಶ್ರಾ ಮತ್ತು ಲಾಡರ್ ಇಬ್ಬರೂ ರಾಯ್‌ಗಢ ಆರ್‌ಪಿಎಫ್ ಪೋಸ್ಟ್‌ನಲ್ಲಿ ನಿಯೋಜನೆಗೊಂಡಿದ್ದರು. ಇಬ್ಬರು ಸಹೋದ್ಯೋಗಿಗಳು ಮಾತ್ರವಲ್ಲದೆ ಬ್ಯಾಚ್‌ಮೇಟ್‌ಗಳಾಗಿದ್ದರು. 2001ರಲ್ಲಿ ಒಟ್ಟಿಗೆ ಆರ್ಪಿಎಫ್ಗೆ ಸೇರಿದ್ದರು, ಆಪ್ತ ಸ್ನೇಹಿತರೆಂದು ಪರಿಗಣಿಸಲಾಗಿತ್ತು. ಆದರೆ ಯಾಕೆ ಕೊಲೆ ಮಾಡದ್ದಾರೆ ಕಾರಣ ತಿಳಿದು ಬಂದಿಲ್ಲ.
ಆರೋಪಿ ಹೆಡ್ ಕಾನ್ಸ್‌ಟೇಬಲ್ ಎಸ್. ಲಾಡರ್, ಜಾಂಜ್‌ಗೀರ್‌ನ ಭಟಪಾರ ಮೂಲದವನಾಗಿದ್ದು, ಘಟನೆ ಬಳಿಕ ಆತನನ್ನು ವಶಕ್ಕೆ ಪಡೆಯಲಾಗಿದೆ. ಘಟನೆಗೆ ನಿಖರ ಉದ್ದೇಶ ತಿಳಿದು ಬಂದಿಲ್ಲವಾದ್ರೂ, ಇಬ್ಬರ ನಡುವೆ ಜಗಳ ನಡೆದಿದ್ದು, ಅದು ಕೊಲೆ ಮಾಡುವ ಹಂತಕ್ಕೆ ಹೋಗಿದೆ ಎನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ (ಏಜೆನ್ಸೀಸ್).