ಮಹಿಳೆಯರ ರೇಟ್ ಎಷ್ಟು ಎಂದು ಕೇಳಿದ ಪಕ್ಷ ನಿಮ್ಮದು ಎಂದು ವಾಗ್ದಾಳಿ
- ರಾಹುಲ್ ಗಾಂಧಿ ಮಹಿಳಾ ಸಬಲೀಕರಣ ಹೇಳಿಕೆ
- ಮಹಿಳೆಯರ ರೇಟ್ ಎಷ್ಟು ಎಂದು ಕೇಳಿದ ಪಕ್ಷ ನಿಮ್ಮದು ಎಂದು ವಾಗ್ದಾಳಿ
- ಬಿಜೆಪಿ ನಾಯಕಿ ಬಾಸುರಿ ಸ್ವರಾಜ್ ತೀಕ್ಷ್ಣ ತಿರುಗೇಟು
ನವದೆಹಲಿ: ಕೆಲ ದಿನಗಳ ಹಿಂದೆ ಪುಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಛಾತ್ರೋಂಕೆ ಗೂಂಜ್ ಎಂಬ ಕಾರ್ಯಕ್ರಮದಲ್ಲಿ, ದೇಶಲ್ಲಿ ಪುರುಷ ಪ್ರಧಾನತೆಯಿಂದ ತೊಂದರೆಯಾಗುತ್ತಿದೆ. ಇದರಿಂದ ಮಹಿಳೆಯರು ಕಟ್ಟುಪಾಡಿನಿಂದ ಬಾಳುವಂತಾಗಿದೆ ಎಂದು ಹೇಳಿದ್ದರು.
ಈಗ, ರಾಹುಲ್ ಗಾಂಧಿ ಹೇಳಿಕೆಗೆ, ಬಿಜೆಪಿ ಸಂಸದೆ ಬಾಸುರಿ ಸ್ವರಾಜ್ (Bansuri Swaraj on Rahul Gandhi) ತಿರುಗೇಟು ನೀಡುತ್ತಾ, ರಾಹುಲ್ ಗಾಂಧಿಯಲ್ಲಿ ಸ್ಪಷ್ಟ ವಿಚಾರಧಾರೆಯೇ ಇಲ್ಲ ಎಂದಿದ್ದಾರೆ.
ರೇಟ್ ಎಷ್ಟು ಎಂದು ಕೇಳಿದ್ದ ಪಕ್ಷ ನಿಮ್ಮದು!
ರಾಹುಲ್ ಗಾಂಧಿ ಪುರುಷ ಪ್ರಧಾನ ವಿರೋಧಿ ಹಾಗೂ ಸ್ತ್ರೀ ಪರ ಮಾತುಗಳಿಗೆ ಪ್ರತಿಕ್ರಿಯೆ ನೀಡಿದ ಬಾಸುರಿ ಸ್ವರಾಜ್, ಇತ್ತೀಚೆಗೆ ರಾಹುಲ್ ಗಾಂಧಿ ಅವರ ಬಾಯಿಂದ ಮಹಿಳಾ ಸಬಲೀಕರಣ ಬಗ್ಗೆ ಕೇಳಿ ಖುಷಿಯಾಯಿತು, ಆದರೆ ಈ ಸ್ತ್ರೀ ವಿರೋಧಿ ನೀತಿಗೆ ವಿರೋಧ ಕೇವಲ ಪುಣೆಗೆ ಮಾತ್ರ ಸೀಮಿತವೇ? ಎಂದು ಪ್ರಶ್ನಿಸಿದ್ದಾರೆ.
2024 ರ ಚುನಾವಣೆ ಸಂದರ್ಭದಲ್ಲಿ ಮಂಡಿ ಲೋಕಸಭಾ ಕ್ಷೇತ್ರದಿಂದ ಕಂಗನಾ ರಣಾವತ್ ಚುನಾವಣೆಗೆ ನಿಂತಾಗ ನಿಮ್ಮ ಪಕ್ಷದ ಸುಪ್ರೀಯಾ ಶ್ರೀನೇಟ್ 'ರೇಟ್ ಎಷ್ಟು'? ಎಂದು ಕೇಳಿದಾಗ ರಾಹುಲ್ ಗಾಂಧಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆ ಸಂದರ್ಭದಲ್ಲಿ ನಾನು ಪ್ರಕರಣ ದಾಖಲಿಸಿದ್ದೆ.
ಕಾಂಗ್ರೆಸ್ ಪಕ್ಷದ ರಣದೀಪ್ ಸುರ್ಜೇವಾಲಾ ಮುಥುರಾ ಸಂಸದೆ ಹೇಮಾ ಮಾಲೀನಿ ಬಗ್ಗೆ ಮಾನಹಾನಿಕರ ಪದ ಪ್ರಯೋಗ ಮಾಡಿದ್ದಾಗ, ರಾಹುಲ್ ಯಾವುದೇ ವಿರೋಧ ವ್ಯಕ್ತ ಪಡಿಸಿರಲಿಲ್ಲ. ನಿಮ್ಮ ಪಕ್ಷದ ಅಧೀರ್ ರಂಜನ್ ಚೌಧರಿ, ಬುಡಕಟ್ಟು ಮಹಿಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು 'ರಾಷ್ಟ್ರಪತ್ನಿ' ಎಂಬ ಅತ್ಯಂತ ಕೀಳು ಮಟ್ಟದ ಮಾತನ್ನು ಆಡಿದ್ದಾಗ ರಾಹುಲ್ ತುಟಿಕ್-ಪಿಟಿಕ್ ಎಂದಿಲ್ಲ.
ಈಗ, ಕಾರ್ಯಕ್ರಮದಲ್ಲಿ ನಾವು ಪುರುಷ ಪ್ರಧಾನ ಸಮಾಜವನ್ನು ಕೊನೆಗೊಳಿಸಬೇಕೆಂದು ಭಾಷಣ ಮಾಡುತ್ತಾರೆ. ಸ್ವಂತ ಪಕ್ಷದಲ್ಲಿಯೇ ಎಷ್ಟು ಸ್ತ್ರೀ ಸ್ವಾತಂತ್ರ್ಯವಿದೆ ಎಂದು ಮೊದಲು ಅಧ್ಯಯನ ನಡೆಸಲಿ ಆಮೇಲೆ ದೇಶದ ಬಗ್ಗೆ ಮಾತನಾಡಲಿ ಎಂದು ಬಾಸುರಿ ಕಿಡಿ ಕಾರಿದ್ದಾರೆ, (ಏಜನ್ಸೀಸ್).