ದೇಶ

ಗಂಡ ರಿತೇಶ್ ತೊಡೆ ಮೇಲೆ ಕುಳಿತು ಜೆನಿಲಿಯಾ ಊಟ ಮಾಡುತ್ತಿರುವ ಫೋಟೋ ರೀ-ಪೋಸ್ಟ್ ಮಾಡಿದ ರಾಹುಲ್ ಗಾಂಧಿ; ಇದರ ಹಿಂದಿನ ಅಸಲಿಯತ್ತೇನು?!..Rahul Gandhi

  • ​ರಿತೇಶ್ ದೇಶಮುಖ್ ತೊಡೆಯ ಮೇಲೆ ಕುಳಿತು ಊಟ ಮಾಡುತ್ತಿರುವ ಜೆನಿಲಿಯಾ ಡಿಸೋಜಾ

  • ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋ ರೀ ಪೋಸ್ಟ್ ಮಾಡಿದ ರಾಹುಲ್ ಗಾಂಧಿ.

  • ​ಯಾವುದೇ ಶೀರ್ಷಿಕೆ ಅಥವಾ ಎಮೋಜಿ ಬಳಸದೆ ಮೌನವಾಗಿಯೇ ಫೋಟೋ ರೀಪೋಸ್ಟ್

  • ಪೋಷಕರ ಕುರಿತು ರಾಹುಲ್ ಹಂಚಿಕೊಂಡಿದ್ದ ಹಳೆಯ ನೆನಪಿಗೆ ಈ ಫೋಟೋ ಹೋಲಿಕೆಯಾಗುತ್ತಿದೆ ಎಂದ ನೆಟ್ಟಿಗರು.

Riteish Deshmukh Genelia lap photo: ತಂದೆ ರಾಜೀವ್ ಗಾಂಧಿ ಹಾಗೂ ತಾಯಿ ಸೋನಿಯಾ ಗಾಂಧಿ ಅವರ ನಡುವಿನ ಆತ್ಮೀಯ ಬಾಂಧವ್ಯದ ಕುರಿತು ತಾವು ಹಂಚಿಕೊಂಡಿದ್ದ ಹಳೆಯ ನೆನಪೊಂದು ರಾಜಕೀಯ ವಿವಾದಕ್ಕೆ ಕಾರಣವಾಗಿರುವ ಬೆನ್ನಲ್ಲೇ, ರಾಹುಲ್​ ಗಾಂಧಿಯವರು ತಮ್ಮ ಇನ್​ಸ್ಟಾಗ್ರಾಮ್​​ ಸ್ಟೋರಿಯಲ್ಲಿ ನಟಿ ಜೆನಿಲಿಯಾ ಅವರು, ಪತಿ ರಿತೇಶ್​ ದೇಶ್​ಮುಖ್​ ತೊಡೆಯ ಮೇಲೆ ಕುಳಿತು ಊಟ ಮಾಡುತ್ತಿರುವ ಮುದ್ದಾದ ಫೋಟೋವನ್ನು ರೀ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಯಾವುದೇ ಕ್ಯಾಪ್ಶನ್ ಅಥವಾ ಇಮೋಜಿ ಹಾಕಿಲ್ಲ. ಆದರೆ, ಇದರ ಹಿಂದಿನ ಅರ್ಥದ ವಿರುದ್ಧ ಸೋಶಿಯಲ್​ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಹೌದು, ಇತ್ತೀಚೆಗೆ ಸೋನಿಯಾ ಗಾಂಧಿ ಅವರ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಆತ್ಮ ಚರಿತ್ರೆ ಪುಸ್ತಕ ಬಿಡುಗಡೆಯಾದ ಸಂದರ್ಭದಲ್ಲಿ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್​ ಗಾಂಧಿ ಅವರು ತಮ್ಮ ಪೋಷಕರ ಪ್ರೀತಿಯ ಬಗ್ಗೆ ಮಾತನಾಡಿದ್ದು, ಬಿಜೆಪಿ ನಾಯಕರಿಂದ ಟೀಕೆಗೆ ಗುರಿಯಾಗುವಂತೆ ಮಾಡಿತ್ತು.

ಏನಿದೆ ಪೋಸ್ಟ್​ನಲ್ಲಿ?

ಈ ವಾದ-ವಿವಾದ ಟೀಕೆ ಗಳ ಮಧ್ಯ ನಟಿ ಜೆನಿಲಿಯಾ ಅವರು ಪತಿ ರಿತೇಶ್​ ದೇಶ್​ಮುಖ್​​​​ ದೇಶ್​ಮುಖ್ ಅವರ ತೊಡೆಯ ಮೇಲೆ ಕುಳಿತು ಊಟ ಮಾಡುವ ಫೋಟೋವನ್ನು ಹಂಚಿಕೊಂಡಿದ್ದರು. ಇದಕ್ಕೆ ದಂಪತಿ ಟೇಬಲ್​ ಫಾರ್​ ಟು, ಚೇರ್ ಫಾರ್ ಒನ್(ಆಹಾರದ ಟೇಬಲ್​ ಇಬ್ಬರಿಗೆ..ಚೇರ್ ಮಾತ್ರ ಒಬ್ಬರಿಗೆ) ಎನ್ನುವ ಶೀರ್ಷಿಕೆ ಕೊಟ್ಟುಕೊಂಡಿದ್ದಾರೆ.

ಪರೋಕ್ಷವಾಗಿ ಟೀಕೆಗೆ ಪ್ರತಿಕ್ರಿಯೆ

ಈ ಪೋಸ್ಟ್ ಅನ್ನು ಲೋಕಸಭೆಯ ವಿಪಕ್ಷ ನಾಯಕ ರಾಹುಲ್​ ಗಾಂಧಿಯವರು ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಗೆ ಯಾವುದೇ ಕ್ಯಾಪ್ಶನ್ ಹಾಕದೆ, ಇಮೋಜಿ ಬಳಸದೆ ಹಂಚಿಕೊಂಡಿದ್ದಾರೆ. ದಂಪತಿಯ ಫೋಟೋ ರೀ ಪೋಸ್ಟ್ ಮಾಡುವ ಮೂಲಕ ಬಿಜೆಪಿ ನಾಯಕರು ಮಾಡುತ್ತಿದ್ದ ಟೀಕೆಗಳಿಗೆ ಉತ್ತರ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ

​ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಬಿಡುಗಡೆ ವೇಳೆ ರಾಹುಲ್ ಗಾಂಧಿ ವಿವರಿಸಿದ್ದ ತಮ್ಮ ಬಾಲ್ಯದ ನೆನಪನ್ನು ಈ ತಾರಾ ದಂಪತಿ ತಮಾಷೆಯಾಗಿ ಮರುಸೃಷ್ಟಿಸಿದಂತಿದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಫೋಟೋ ಮತ್ತು ತಮ್ಮ ಬಾಲ್ಯದ ನೆನಪಿನ ನಡುವಿನ ಸಾಮ್ಯತೆಯನ್ನು ಒಪ್ಪಿಕೊಂಡಂತೆಯೇ ರಾಹುಲ್ ಇದನ್ನು ಹಂಚಿಕೊಂಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ರಾಹುಲ್ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು

ಈ ಎಲ್ಲಾ ಚರ್ಚೆಗಳು ನವೆಂಬರ್ 16ರಂದು ನಡೆದ ಸೋನಿಯಾ ಗಾಂಧಿ ಅವರ 'ಬಿಲಾಂಗಿಂಗ್' ಆತ್ಮಚರಿತ್ರೆ ಬಿಡುಗಡೆ ಸಮಾರಂಭದಿಂದ ಶುರುವಾಗಿದ್ದವು. ಅಂದು ತಮ್ಮ ಬಾಲ್ಯ ಮತ್ತು ಕುಟುಂಬದ ದಿನಗಳನ್ನು ನೆನಪಿಸಿಕೊಂಡಿದ್ದ ರಾಹುಲ್ ಗಾಂಧಿ, ತಮ್ಮ ಪೋಷಕರು ಪರಸ್ಪರ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಿದ್ದರು. ಕುಟುಂಬದೊಂದಿಗೆ ಊಟ ಮಾಡುವಾಗ ತಾಯಿ ಸೋನಿಯಾ ಗಾಂಧಿ ಅವರು ತಂದೆ ರಾಜೀವ್ ಗಾಂಧಿ ಅವರ ತೊಡೆಯ ಮೇಲೆ ಕೂರುತ್ತಿದ್ದರು, ಬಾಲ್ಯದಲ್ಲಿ ತಮಗೆ ಅದು ಅತ್ಯಂತ ಸಹಜ ಸಂಗತಿಯಾಗಿ ಕಾಣುತ್ತಿತ್ತು ಎಂದು ರಾಹುಲ್ ವಿವರಿಸಿದ್ದರು.

'ಪ್ರತಿ ಊಟದ ಸಮಯದಲ್ಲೂ ಅಪ್ಪ (ರಾಜೀವ್ ಗಾಂಧಿ) ಇರುತ್ತಿದ್ದರು ಮತ್ತು ಅಪ್ಪನ ತೊಡೆಯ ಮೇಲೆ ಅಮ್ಮ ಕೂರುತ್ತಿದ್ದರು. ಇದೊಂದು ಸಾಮಾನ್ಯ ವಿಷಯ ಎಂದು ನಾನು ಭಾವಿಸಿದ್ದೆ' ಎಂದು ರಾಹುಲ್ ಅಂದು ಹೇಳಿದ್ದರು. ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕಕ್ಕಿಂತಲೂ ರಾಹುಲ್ ಅವರ ಈ ವೈಯಕ್ತಿಕ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.

​ಬಿಜೆಪಿ ಟೀಕೆ

ಸಾರ್ವಜನಿಕ ವೇದಿಕೆಯಲ್ಲಿ ಕುಟುಂಬದ ಇಂತಹ ಖಾಸಗಿ ವಿಚಾರಗಳನ್ನು ಹಂಚಿಕೊಂಡಿದ್ದಕ್ಕಾಗಿ ಹಲವು ಬಿಜೆಪಿ ನಾಯಕರು ರಾಹುಲ್ ಗಾಂಧಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ಇದು ರಾಜಕೀಯ ವಾಕ್ಸಮರಕ್ಕೂ ಕಾರಣವಾಗಿತ್ತು. ಇತ್ತ ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಕೆಲವರು ಮೀಮ್ಸ್ ಮತ್ತು ಜೋಕ್‌ಗಳ ಮೂಲಕ ಪ್ರತಿಕ್ರಿಯಿಸಿದ್ದರೆ, ಮತ್ತೆ ಕೆಲವರು ಪೋಷಕರ ಪ್ರೀತಿಯ ನೆನಪನ್ನು ಮೆಚ್ಚಿಕೊಂಡಿದ್ದರು, (ಏಜೆನ್ಸೀಸ್).