Rahul Gandhi | ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಪ್ರಧಾನಿ ಮೋದಿ
ನವದೆಹಲಿ: ಕೇಂದ್ರ ಸರ್ಕಾರವು ವಿರೋಧ ಪಕ್ಷದ ನಾಯಕರನ್ನು ವಿದೇಶಿ ಗಣ್ಯರನ್ನು ಭೇಟಿ ಮಾಡುವುದರಿಂದ ವ್ಯವಸ್ಥಿತವಾಗಿ ದೂರವಿಡುತ್ತಿದೆ ಎಂದು ಕಾಂಗ್ರೆಸ್ ಸಂಸದ ಮತ್ತು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ(Rahul Gandhi) ಗುರುವಾರ (ಡಿ.4) ಆರೋಪಿಸಿದ್ದಾರೆ.
ಈ ಬಗ್ಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನವದೆಹಲಿಗೆ ಆಗಮಿಸುವ ಮುನ್ನ ಮಾತನಾಡಿದ ಗಾಂಧಿ, ವಿದೇಶಿ ನಿಯೋಗಗಳೊಂದಿಗೆ ವಿರೋಧ ಪಕ್ಷದ ಸಭೆಗಳು ದೀರ್ಘಕಾಲದಿಂದ ನಡೆದುಕೊಂಡು ಬಂದ ಸಂಸದೀಯ ಪದ್ದತಿಯಾಗಿದೆ. ಹಿಂದಿನ ಆಡಳಿತಗಳು ಈ ಪದ್ಧತಿಯನ್ನು ಗೌರವಿಸುತ್ತಿದ್ದವು. ಆದರೆ ಈಗ ಇದನ್ನು ಕೈಬಿಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಂದುವರೆದು ಮಾತನಾಡಿದ ರಾಹುಲ್, ದೇಶದ ಮಾಜಿ ಪ್ರಧಾನಿಗಳಾದ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಅವರ ಸರ್ಕಾರಗಳ ಅವಧಿಯಲ್ಲಿ ಇದು ನಡೆಯುತ್ತಿತ್ತು. ಅಲ್ಲದೆ, ಇದು ಒಂದು ಸಂಪ್ರದಾಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ, ವಿದೇಶಿ ಗಣ್ಯರು ಭೇಟಿ ನೀಡಿದಾಗ ಅಥವಾ ನಾನು ವಿದೇಶ ಪ್ರವಾಸ ಮಾಡುವಾಗ, ಸರ್ಕಾರವು ಅವರಿಗೆ ಎಲ್‌ಒಪಿಯನ್ನು ಭೇಟಿ ಮಾಡದಂತೆ ಸಲಹೆ ನೀಡುತ್ತದೆ. ನಾವು ಕೂಡ ಭಾರತವನ್ನು ಪ್ರತಿನಿಧಿಸುತ್ತೇವೆ. ಇದು ಕೇವಲ ಸರ್ಕಾರವಲ್ಲ ಎಂದು ತಿಳಿಸಿದ್ದಾರೆ.
ಪ್ರಧಾನಿ ಮತ್ತು ವಿದೇಶಾಂಗ ಸಚಿವಾಲಯ ಇಬ್ಬರೂ ಭೇಟಿ ನೀಡುವ ನಿಯೋಗಗಳನ್ನು ಪ್ರತಿಪಕ್ಷಗಳಿಂದ ದೂರವಿಡುತ್ತಾರೆ. ಇದನ್ನು ಅಭದ್ರತೆಯಿಂದ ನಡೆಸಲ್ಪಡುವ ಕೃತ್ಯ ಎಂದು ಕರೆಯುತ್ತಾರೆ.ಅಲ್ಲದೆ, ಭಾರತದ ನಿಲುವಿನ ಬಗ್ಗೆ ಎಲ್‌ಒಪಿ ವಿಭಿನ್ನ ದೃಷ್ಟಿಕೋನವನ್ನು ನೀಡುವುದನ್ನು ಸರ್ಕಾರ ಬಯಸುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಕಿಡಿಕಾರಿದ್ದಾರೆ.
ಕಾರ್ ಸವಾರಿ...
ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಮೋದಿಯವರೊಂದಿಗೆ ಸೆಪ್ಟೆಂಬರ್ ಚರ್ಚೆಯಾದ ಪ್ರಧಾನಿ ಮೋದಿ ಜೊತೆಗಿನ ಕಾರು ಸವಾರಿ ಬಗ್ಗೆ ಮಾತನಾಡಿದ ಪುಟ್ಟಿ, ಅದು ನನ್ನ ಕಲ್ಪನೆ, ನಮ್ಮ ಸ್ನೇಹದ ಸಂಕೇತವಾಗಿತ್ತು ಎಂದು ಹೇಳಿದರು. ಅದು ಪೂರ್ವ ನಿಯೋಜಿತ ಕಾರ್ಯಕ್ರಮವಾಗಿರಲಿಲ್ಲ. ನಾವು ಸಭೆಯ ಬಳಿಕ ಹೊರಗೆ ಹೋದೆವು, ನನ್ನ ಕಾರು ಅಲ್ಲಿತ್ತು, ಒಟ್ಟಿಗೆ ಸವಾರಿ ಮಾಡೋಣ ಎಂದು ಮೋದಿಯವರಿಗೆ ಸೂಚಿಸಿದೆ. ದಾರಿಯ ಬಗ್ಗೆ ಮಾತನಾಡಿದೆವು, ಚರ್ಚಿಸಲು ಯಾವಾಗಲೂ ಏನಾದರೂ ಇರುತ್ತದೆ ಎಂದು ಹೇಳಿದರು.
ರಷ್ಯಾ-ಭಾರತ ಒಪ್ಪಂದಗಳು
ದೆಹಲಿ ಭೇಟಿಯ ಸಂದರ್ಭದಲ್ಲಿ ರಷ್ಯಾ ಮತ್ತು ಭಾರತ ಹಲವು ಒಪ್ಪಂದಗಳಿಗೆ ಸಹಿ ಹಾಕಲು ಸಿದ್ಧತೆ ನಡೆಸುತ್ತಿದೆ, ಕೆಲವು ಪ್ರಮುಖ ಘೋಷಣೆಗಳು ಕುರಿತಾದ ಪ್ರಶ್ನೆಗೆ ಉತ್ತರಿಸಿದ ಪುಟಿನ್, ಭಾರತವು ಶೇ. 7.7 ರಷ್ಟು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯನ್ನು ಹೊಂದಿರುವ ಅದ್ಭುತ ದೇಶ. ಇದು ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ, ರಾಷ್ಟ್ರವೇ ಹೆಮ್ಮೆಪಡಬಹುದಾದ ಸಾಧನೆಯಾಗಿದೆ.
ಘೋಷಣೆಗಳ ಬಗ್ಗೆ ಗುಟ್ಟು ಬಿಟ್ಟು ಕೊಡದ ಪುಟ್ಟಿ, ಮುಂದುವರಿದ ತಂತ್ರಜ್ಞಾನ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸೇರಿವೆ ದೇಶಗಳು ಸಮಗ್ರ ಸಹಕಾರ ಕಾರ್ಯಕ್ರಮವನ್ನು ಆಯೋಜಿಸಿದೆ(ಏಜೆನ್ಸೀಸ್).