ರಾಜಕೀಯದ ಹೊರತು ಬೇರೆ ಕೆಲಸಕ್ಕೆ ಕೈ ಹಾಕಿದ ರಾಹುಲ್​ ಗಾಂಧಿ 
ದೇಶ

ರಾಜಕಾರಣ ಬದಿಗಿಟ್ಟು ಫೈಟರ್​ ಆದ ರಾಹುಲ್ ಗಾಂಧಿ: ಈಶಾನ್ಯ ಭಾರತದ ಮಕ್ಕಳಿಗೆ ಸಮರಕಲೆ ಕಲಿಸಲು ಮುಂದಾದ ವಿಪಕ್ಷ ನಾಯಕ | Rahul Gandhi

ಪ್ರಮುಖ ಮುಖ್ಯಾಂಶಗಳು

  • ರಾಜಕೀಯದ ಹೊರತು ಬೇರೆ ಕೆಲಸಕ್ಕೆ ಕೈ ಹಾಕಿದ ರಾಹುಲ್​ ಗಾಂಧಿ
  • ಈಶಾನ್ಯ ಭಾರತದ ಮಕ್ಕಳಿಗೆ ಸಮರ ಕಲೆ ಕಲಿಸಲು ಮುಂದಾದ ರಾಗಾ
  • ಸ್ವತಃ ರಾಹುಲ್​ ಗಾಂಧಿ ಐಕಿಡೋದಲ್ಲಿ ಬ್ಲಾಕ್​ ಬೆಲ್ಟ್
ನವದೆಹಲಿ: ರಾಜಕಾರಣಿಗಳು, ರಾಜಕೀಯದ ಹೊರತಾಗಿ ತಮ್ಮನ್ನು ಇತರೆ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದು ಅಪರೂಪ. ಆದರೆ ಲೋಕಸಭೆಯ ವಿರೋಧ ಪಕ್ಷದ ಹಾಗೂ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ (Rahul Gandhi) ಈ ಸಾಹಸಕ್ಕೆ ಕೈ ಹಾಕಿದ್ದಾರೆ.
ಈಶಾನ್ಯ ಭಾರತದಿಂದ ಆಯ್ದ 18 ಜನ ಮಕ್ಕಳಿಗೆ ರಾಹುಲ್​ಗಾಂಧಿ ಸಮರ ಕಲೆ ಹಾಗೂ ಆತ್ಮರಕ್ಷಣಾ ಕಲೆಗಳನ್ನು ಕಲಿಸುವ ಮೂಲಕ ತಾವು ರಾಜಕೀಯದ ಹೊರತಾಗಿಯೂ ಬೇರೆ ಕ್ಷೇತ್ರದಲ್ಲಿ ಸಹ ಅಭಿರುಚಿ ಹೊಂದಿರುವುದಾಗಿ ಸಾಭೀತು ಪಡಿಸಿದ್ದಾರೆ.

ಈಶಾನ್ಯ ಭಾರತದವರನ್ನೇ ಏಕೆ ಆಯ್ದು ಕೊಂಡರು?

ದೆಹಲಿಯಲ್ಲಿ ನಡೆದ ಈ ವಿಶೇಷ ಕಾರ್ಯಾಗಾರಕ್ಕೆ ಕೇವಲ ಈಶಾನ್ಯ ಭಾರತದ ಹುಡುಗ ಮತ್ತು ಹುಡುಗಿಯರನ್ನು ಆಯ್ಕೆ ಮಾಡಲಾಗಿತ್ತು. ಈಶಾನ್ಯದ ರಾಜ್ಯಗಳಲ್ಲಿ ಮಕ್ಕಳ ಮೇಲೆ ಹಿಂಸಾಚಾರ ಹೆಚ್ಚಾಗುತ್ತಿರುವ ಕಾರಣಕ್ಕೆ ರಾಹುಲ್​ ಗಾಂಧಿ ಈ ಕಾರ್ಯಾಗಾರವನ್ನು ಆಯೋಜನೆ ಮಾಡಿದ್ದರು ಎಂದು ತಿಳಿದು ಬಂದಿದೆ. ಅಲ್ಲಿಯ ಮಕ್ಕಳಿಗೆ ಈ ಆತ್ಮರಕ್ಷಣೆ ಹಾಗೂ ಸಮರ ಕಲೆಗಳ ಅವಶ್ಯಕತೆ ಹೆಚ್ಚಿರುವ ಕಾರಣ ಆ ಭಾಗದ ಮಕ್ಕಳನ್ನೇ ಆಯ್ಕೆ ಮಾಡಲಾಗಿತ್ತು ಎಂದು ತಿಳಿಸಲಾಗಿದೆ.
ರಾಹುಲ್​ ಗಾಂಧಿ ಐಕಿಡೋದಲ್ಲಿ ಬ್ಲಾಕ್​ ಬೆಲ್ಟ್!
ನಾನು ರಾಹುಲ್​ ಗಾಂಧಿಯವರನ್ನು ಕೇವಲ ರಾಜಕಾರಣಿಯಾಗಿ ಮಾತ್ರ ಪರಿಚಯಹೊಂದಿದ್ದೆವೆ. ಆದರೆ ಅವರು ರಾಜಕಾರಣದ ಜೊತೆಗೆ ಜಪಾನಿನ ಸಮರ ಕಲೆಯಾದ ಐಕಿಡೋದಲ್ಲಿ ಬ್ಲಾಕ್​ ಬೆಲ್ಟ್ ಪಡಿದಿರುವುದು ಬಹುತೇಕರಿಗೆ ಗೊತ್ತಿಲ್ಲದ ವಿಚಾರವಾಗಿದೆ.
ರಾಹುಲ್​ ಗಾಂಧಿಗೆ ತಮ್ಮ ಬಾಲ್ಯದ ದಿನದಿಂದ ಸಹ ಸಮರ ಕಲೆಗಳ ಬಗ್ಗೆ ವಿಶೇಷ ಆಸಕ್ತಿಯಿದ್ದ ಕಾರಣ ಅವರು ಈ ಸಮರ ಕಲೆಯಲ್ಲಿ ಉನ್ನತ ಸ್ಥಾನವನ್ನು ಪಡೆಯಲು ಸಹಾಯವಾಗಿದೆ ಎಂದು ಹೇಳಲಾಗುತ್ತಿದೆ.

ಕೊಟ್ಟ ಮಾತು ಉಳಿಸಿಕೊಂಡ ರಾಗಾ

ಫೆಬ್ರುವರಿ 27 ರಂದು ಈಶಾನ್ಯ ಭಾರತ ಪ್ರವಾಸಕ್ಕೆ ತೆರಳಿದ್ದಾಗ, ಅಲ್ಲಿಯ ಮಕ್ಕಳು, ತಮ್ಮ ಪ್ರದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರ, ಆಕ್ರಮಣಗಳ ಬಗ್ಗೆ ಕಳವಳ ವ್ಯಕ್ತ ಪಡಿಸಿದ್ದರು. ಆಗ ರಾಹುಲ್​ ಗಾಂಧಿ ಈಶಾನ್ಯ ಭಾರತದ ಮಕ್ಕಳಿಗೆ ಆತ್ಮರಕ್ಷಣೆ ಹಾಗೂ ಸಮರ ಕಲೆಗಳ ಬಗ್ಗೆ ಮಾಹಿತಿ ಜೊತಗೆ ತರಬೇತಿಯನ್ನು ನೀಡುವುದಾಗಿ ಭರವಸೆ ನೀಡಿದ್ದರು,(ಏಜನ್ಸೀಸ್​).