Rahul Gandhi on dharna at police station as Delhi pellet gun victim alleges no FIR
- ದೆಹಲಿಯ ಸಂಸತ್ ಮಾರ್ಗ ಪೊಲೀಸ್ ಠಾಣೆಯ ಹೊರಗೆ ಹೈಡ್ರಾಮಾ.
- ಪೆಲೆಟ್ ಗನ್ ಪ್ರಯೋಗದ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲು ಹಿಂದೇಟು.
- ಸಂತ್ರಸ್ತ ಯುವಕನೊಂದಿಗೆ ದೆಹಲಿ ಪೊಲೀಸ್ ಠಾಣೆ ಮುಂದೆ ಧರಣಿ ಕುಳಿತ ರಾಹುಲ್ ಗಾಂಧಿ
ನವದೆಹಲಿ: ಜುಲೈ 20 ರಂದು ನಡೆದ 'ಜೆನ್ ಜಿ' ಪ್ರತಿಭಟನೆಯ ವೇಳೆ ಪೆಲೆಟ್ ಗನ್ ದಾಳಿಯಿಂದ ಗಾಯಗೊಂಡಿದ್ದ 19 ವರ್ಷದ ಸಾಹಿಲ್ ಲೋಚಬ್ ಎಂಬ ಯುವಕನೊಂದಿಗೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಆಗಮಿಸಿ ಧರಣಿ ನಡೆಸಿದರು.
ಧರಣಿಗೆ ಕಾರಣ ಏನು?
ಜುಲೈ 20 ರಂದು ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿನ ಶಿಕ್ಷಣ ಸಚಿವರ ರಾಜೀನಾಮೆ ಅಗ್ರಹಿಸಿ 'ಜೆನ್ ಜಿ' ಸಂಸತ್ತಿನತ್ತ ಪ್ರಯಾಣ ಆರಂಭಿಸಿದಾಗ ದೆಹಲಿ ಪೊಲೀಸರು ಪೆಲೆಟ್ ಗನ್ ಬಳಕೆ ಮಾಡಿದ್ದರು. ಇದರಿಂದ 19 ವರ್ಷದ ಸಾಹಿಲ್ ಲೋಚಬ್ ಗಾಯಗೊಂಡಿದ್ದರು. ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿಕೊಳ್ಳಲು ನಿರಾಕರಿಸಿರುವ ಹಿನ್ನೆಲೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಯುವಕ ಧರಣಿ ಕುಳಿತರು.
ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲೆ ಪೊಲೀಸರು ಪೆಲೆಟ್ ಗನ್ ಬಳಸಿರುವುದರ ವಿರುದ್ಧ ಅಧಿಕೃತವಾಗಿ ದೂರು ದಾಖಲಿಸುವಂತೆ ರಾಹುಲ್ ಗಾಂಧಿ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಒತ್ತಾಯಿಸಿದರು. ದೂರು ದಾಖಲಾಗುವವರೆಗೂ ತಾವು ಪೊಲೀಸ್ ಠಾಣೆಯಲ್ಲೇ ಇರುವುದಾಗಿ ಅವರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿ ಸಾಹಿಲ್ ಲೋಚಬ್ರೊಂದಿಗೆ ರಾಹುಲ್ ಗಾಂಧಿ ಮೊದಲು ಮಂದಿರ ಮಾರ್ಗ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಪ್ರಕರಣ ದಾಖಲಿಸುವಂತೆ ವಿನಂತಿಸಿದ್ದರು. ಆದರೆ ಪೊಲೀಸರು ದೂರು ಸ್ವೀಕರಿಸಲು ಹಿಂದೇಟು ಹಾಕಿದ ನಂತರ, ಅವರು ಡಿಸಿಪಿ (ಕೇಂದ್ರ) ಅವರನ್ನು ಭೇಟಿ ಮಾಡಲು ತೆರಳಿದರು.
ದೆಹಲಿ ಪೊಲೀಸರು ಪೆಲೆಟ್ ಗನ್ ದಾಳಿಯ ಕುರಿತು ಎಫ್‌ಐಆರ್ ದಾಖಲಿಸಲು ನಿರಾಕರಿಸಿದ್ದಾರೆ ವಕೀಲರ ಸಮಕ್ಷಮದಲ್ಲಿ ದೆಹಲಿ ಪೊಲೀಸರಿಗೆ ಲಿಖಿತ ದೂರು ನೀಡಿದ್ದರೂ, ಪೊಲೀಸರು ಕೇಸ್ ದಾಖಲಿಸಿಕೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ತಿಳಿಸಿದೆ,