Rahul Gandhi Faces Expulsion | ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ 
ದೇಶ

ರಾಹುಲ್ ಗಾಂಧಿಗೆ ಮತ್ತೆ ಅನರ್ಹತೆ ಭೀತಿ..? ಸಂಸದರನ್ನು ಅನರ್ಹಗೊಳಿಸುವ ನಿಯಮಗಳೇನು..? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್ | Rahul Gandhi Faces Expulsion

ಪ್ರಮುಖ ಮುಖ್ಯಾಂಶಗಳು

  • ರಾಹುಲ್ ಗಾಂಧಿಗೆ ಮತ್ತೆ ಅನರ್ಹತೆ ಭೀತಿ..?
  • ಹಾಲಿ ಸದಸ್ಯರನ್ನು ಲೋಕಸಭೆಯಿಂದ ತೆಗೆದುಹಾಕಲು ಅವಕಾಶವಿದೆಯೇ..?
  • ಸಂಸದರನ್ನು ಹೇಗೆ ಅಮಾನತು ಮಾಡಬಹುದು ಎಂಬುದರ ಕುರಿತಾದ ವಿವರಣೆ ಇಲ್ಲಿದೆ..
ದೆಹಲಿ: ಇತ್ತೀಚಿನ ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಕುರಿತು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗಳನ್ನು ಖಂಡಿಸಿ ಕಾಂಗ್ರೆಸ್ ನಾಯಕನ ಅನರ್ಹತೆ (Rahul Gandhi Faces Expulsion) ಕೋರಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಗುರುವಾರ (ಫೆ.13) ನಿರ್ಣಯ ಮಂಡಿಸಿದ್ದಾರೆ.
ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಬೇಕು ಮತ್ತು ಭವಿಷ್ಯದಲ್ಲಿ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧ ಹೇರಬೇಕು ಎಂದು ದುಬೆ ಒತ್ತಾಯಿಸಿದ್ದಾರೆ. ಆದರೆ ಸದ್ಯ ಎದುರಾಗಿರುವ ದೊಡ್ಡ ಪ್ರಶ್ನೆಯೆಂದರೆ, ಹಾಲಿ ಸದಸ್ಯರನ್ನು ಲೋಕಸಭೆಯಿಂದ ತೆಗೆದುಹಾಕಲು ಅವಕಾಶವಿದೆಯೇ ಎನ್ನುವುದು.

ಸಂಸದರನ್ನು ಹೇಗೆ ಅಮಾನತು ಮಾಡಬಹುದು ಎಂಬುದರ ಕುರಿತಾದ ವಿವರಣೆ ಇಲ್ಲಿದೆ..

  • ಸೂಚನೆ ಸಲ್ಲಿಕೆ: ಹಾಲಿ ಸದಸ್ಯರ ವಿರುದ್ಧ ಔಪಚಾರಿಕ ದೂರು ದಾಖಲಿಸಿದಾಗ ಈ ಪ್ರಕ್ರಿಯೆಗೆ ಚಾಲನೆ ಸಿಗುತ್ತದೆ. 
  •  ನೀತಿ ಸಮಿತಿಗೆ ಉಲ್ಲೇಖ: ಲೋಕಸಭಾ ಸ್ಪೀಕರ್, ದೂರನ್ನು ಸಮಿತಿಗೆ ಉಲ್ಲೇಖಿಸಬಹುದು, ಆಗ ಅದು ವಿವರವಾದ ತನಿಖೆ ನಡೆಸುತ್ತದೆ.
  •  ಸಮಿತಿ ತನಿಖೆ: ಸಮಿತಿಯು ಈ ವಿಷಯವನ್ನು ತನಿಖೆ ಮಾಡುತ್ತದೆ, ಸಾಕ್ಷಿಗಳನ್ನು ಕರೆಯಬಹುದು ಮತ್ತು ಸದರಿ ಸಂಸದರಿಗೆ ತಮ್ಮ ಪ್ರತಿವಾದವನ್ನು ಮಂಡಿಸಲು ಅವಕಾಶ ನೀಡಬಹುದು. ಪುರಾವೆಗಳನ್ನು ಪರಿಶೀಲಿಸಿದ ಬಳಿಕ, ಅದು ತನ್ನ ಸಂಶೋಧನೆಗಳು ಮತ್ತು ಶಿಫಾರಸುಗಳೊಂದಿಗೆ ವರದಿಯನ್ನು ಸಲ್ಲಿಸುತ್ತದೆ.
  •  ಸದನದಲ್ಲಿ ಪ್ರಸ್ತುತಿ: ಸಮಿತಿಯ ವರದಿಯನ್ನು ಲೋಕಸಭೆಯಲ್ಲಿ ಮಂಡಿಸಲಾಗುತ್ತದೆ. ಸಮಿತಿಯು ಸದಸ್ಯರನ್ನು ತಪ್ಪಿತಸ್ಥರೆಂದು ಕಂಡುಕೊಂಡು ಹೊರಹಾಕಲು ಶಿಫಾರಸು ಮಾಡಿದರೆ, ಶಿಫಾರಸನ್ನು ಅಂಗೀಕರಿಸಲು ಲೋಕಸಭೆಯಲ್ಲಿ ಪ್ರಸ್ತಾವನೆಯನ್ನು ಮಂಡಿಸಲಾಗುತ್ತದೆ. 
  •  ಉಚ್ಚಾಟನೆಗೆ ಪ್ರಸ್ತಾವನೆ: ಈ ನಿರ್ಣಯವನ್ನು ಹಾಜರಿರುವ ಮತ್ತು ಮತ ಚಲಾಯಿಸುವ ಬಹುಪಾಲು ಸಂಸದರು ಅನುಮೋದಿಸಬೇಕು. ಅವರೆಲ್ಲಾ ಈ ನಿರ್ಣಯವನ್ನು ಬೆಂಬಲಿಸಿದರೆ, ಆಗ ಸದಸ್ಯರನ್ನು ಅಮಾನತು ಮಾಡಬಹುದು.

2023 ರಲ್ಲಿ ರಾಹುಲ್ ಗಾಂಧಿಯ ಉಚ್ಚಾಟನೆ

2023 ರಲ್ಲಿ ಮೋದಿ ಉಪನಾಮದ ಬಗ್ಗೆ ರಾಹುಲ್ ಗಾಂಧಿ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದ ಬಳಿಕ ಸೂರತ್ ನ್ಯಾಯಾಲಯವು ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತು.
1951 ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 8(3) ರ ಪ್ರಕಾರ, ಒಬ್ಬ ಸಂಸದರು ಕ್ರಿಮಿನಲ್ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದರೆ ಮತ್ತು ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆಗೆ ಗುರಿಯಾದರೆ, ಅವರು ಸ್ವಯಂಚಾಲಿತವಾಗಿ ಸಂಸತ್ತಿನಿಂದ ಅನರ್ಹರಾಗುತ್ತಾರೆ.
ಸೂರತ್​ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿದ್ದ ರಾಹುಲ್​, ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದರು, ಇದಾದ ಬಳಿಕ ಸರ್ವೋಚ್ಛ ನ್ಯಾಯಾಲಯ ಶಿಕ್ಷೆಗೆ ತಡೆ ನೀಡಿದ ಪರಿಣಾಮವಾಗಿ, ಅವರ ಲೋಕಸಭಾ ಸದಸ್ಯತ್ವವನ್ನು ಪುನಃಸ್ಥಾಪಿಸಲಾಯಿತು ಮತ್ತು ರಾಹುಲ್​ ಮತ್ತೇ ಸಂಸದರಾಗಿ ಸಂಸತ್ತಿಗೆ ಮರಳಿದರು(ಏಜೆನ್ಸೀಸ್​).