ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ 
ದೇಶ

ಬಿಹಾರದಲ್ಲಿ ರಾಹುಲ್ ಗಾಂಧಿ ನಡೆಸಿದ ಮತದಾರರ ಅಧಿಕಾರ ಯಾತ್ರೆ ಫೇಲ್​: ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್​ಗೆ ಹಿನ್ನೆಡೆ | Rahul Gandhi

ಪಾಟ್ನಾ: ಬಿಹಾರ ಚುನಾವಣಾ ಫಲಿತಾಂಶಗಳು ಕಾಂಗ್ರೆಸ್‌ಗೆ ಗಂಭೀರ ಸೋಲನ್ನು ಉಂಟು ಮಾಡಿದೆ. ಅಲ್ಲದೆ, ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಯು(Rahul Gandhi) ಬಿಜೆಪಿ ಮತಗಳನ್ನು ಕದಿಯುತ್ತಿದೆ ಎಂಬ ಆರೋಪವನ್ನು ಮುಂದಿಟ್ಟುಕೊಂಡು ಮತದಾರರಿಗೆ ಮನವರಿಕೆ ಮಾಡಿಕೊಡಲು ರಾಜ್ಯಾದ್ಯಂತ ಕೈಗೊಂಡಿದ್ದ ಮತದಾರರ ಅಧಿಕಾರ ಯಾತ್ರೆಯ ಎಲ್ಲಾ ಕ್ಷೇತ್ರಗಳಲ್ಲಿ ಮಹಾಮೈತ್ರಿಕೂಟಕ್ಕೆ ದೊಡ್ಡ ಹಿನ್ನಡೆ ಆಗಿದೆ.
ಬಿಹಾರದಲ್ಲಿ ವಿಪಕ್ಷ ನಾಯಕ ರಾಹುಲ್​ ಗಾಂಧಿ ನಡೆಸಿದ ಮತದಾರರ ಅಧಿಕಾರ ಯಾತ್ರೆಯು ಸಸಾರಂನಿಂದ ಪ್ರಾರಂಭವಾಗಿ ಪಾಟ್ನಾದಲ್ಲಿ ಕೊನೆಗೊಂಡಿತು. ಈ ಯಾತ್ರೆಯು ರಾಜ್ಯದ 25 ಜಿಲ್ಲೆಗಳು ಮತ್ತು 110 ವಿಧಾನಸಭಾ ಕ್ಷೇತ್ರಗಳನ್ನೋಳಗೊಂಡು, ಸುಮಾರು 1,300 ಕಿ.ಮೀ. ಕ್ರಮಿಸಿತು. ಆದರೆ ಈ ಮಾರ್ಗದ ಬಹುತೇಕ ಕ್ಷೇತ್ರಗಳು ಕಾಂಗ್ರೆಸ್​ಪಕ್ಷವು ಮುನ್ನಡೆ ಸಾಧಿಸಾಲು ಸಾಧ್ಯವಾಗಿಲ್ಲ. ಪ್ರಸ್ತುತ ಫಲಿತಾಂಶವು ಕಾಂಗ್ರೆಸ್ ಸ್ಪರ್ಧಿಸಿದ 61 ಸ್ಥಾನಗಳಲ್ಲಿ ಕೇವಲ ನಾಲ್ಕು ಸ್ಥಾನಗಳಾದ ವಾಲ್ಮೀಕಿ ನಗರ, ಕಿಶನ್‌ಗಂಜ್, ಮಣಿಹರಿ ಮತ್ತು ಬೇಗುಸರಾಯ್ - ಮುನ್ನಡೆ ಸಾಧಿಸುತ್ತಿದೆ.

ಬಿಹಾರದಲ್ಲಿ ನಡೆಯದ ರಾಹುಲ್​ ಗಾಂಧಿ ಮ್ಯಾಜಿಕ್?

2024 ರ ಲೋಕಸಭಾ ಚುನಾವಣೆ ಮತ್ತು 2023 ರ ತೆಲಂಗಾಣ ಚುನಾವಣೆಯಲ್ಲಿ ರಾಹುಲ್​ ಗಾಂಧಿಯ ಯಾತ್ರೆಗಳು ಅದ್ಭುತ ಪ್ರದರ್ಶನ ನೀಡುವಂತೆ ಮಾಡಿತ್ತು. ಅಲ್ಲದೆ, 2022 ಮತ್ತು 2024 ರ ನಡುವೆ ರಾಹುಲ್​ ಕೈಗೊಂಡ ಎರಡು ಪ್ಯಾನ್-ಇಂಡಿಯಾ ಭಾರತ್ ಜೋಡೋ ಯಾತ್ರೆಗಳ ಮಾರ್ಗಗಳಲ್ಲಿ ಕಾಂಗ್ರೆಸ್ 41 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ತೆಲಂಗಾಣ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್​ ಸರ್ಕಾರ ರಚಿಸಿತು.
ಆದರೆ. ಬಿಹಾರದಲ್ಲಿ ರಾಹುಲ್​ ಯಾತ್ರೆಯು ಸಂಪೂರ್ಣ ವಿಫಲವಾಗಿದೆ. ಎನ್‌ಡಿಎ ಹೆಚ್ಚಿನ ಸ್ಥಾನಗಳನ್ನು ಗೆದ್ದಿದ್ದು, ಬಿಜೆಪಿ ಮತ್ತು ಜೆಡಿಯು ಎರಡೂ ಸ್ಪರ್ಧಿಸಿದ್ದ ಹೆಚ್ಚಿನ ಸ್ಥಾನಗಳನ್ನು ಗೆದ್ದಿವೆ. ಬಿಜೆಪಿ ಈಗ 91 ಮತ್ತು ಜೆಡಿಯು 80 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಉಭಯ ಪಕ್ಷಗಳು ತಲಾ 101 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು. ಇವರ ಮಿತ್ರಪಕ್ಷಗಳು ಸಹ ಪ್ರಭಾವಶಾಲಿ ಪ್ರದರ್ಶನ ನೀಡಿವೆ. ಚಿರಾಗ್ ಪಾಸ್ವಾನ್​ರ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಸ್ಪರ್ಧಿಸಿದ್ದ 28 ಸ್ಥಾನಗಳಲ್ಲಿ 22 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಉಪೇಂದ್ರ ಕುಶ್ವಾಹರ ಆರ್‌ಎಲ್‌ಎಂ 6 ಸ್ಥಾನಗಳಲ್ಲಿ 3 ಸ್ಥಾನಗಳಲ್ಲಿ ಮುಂದಿದ್ದರೆ, ಜಿತನ್ ರಾಮ್ ಮಾಂಝಿರ ಎಚ್‌ಎಎಂ 6 ಸ್ಥಾನಗಳಲ್ಲಿ 5 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.

ಮತ ಕಳ್ಳತನ ಆರೋಪವನ್ನು ಸ್ವೀಕರಿಸದ ಮತದಾರರರು?

ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧ ರಾಹುಲ್​ ಗಾಂಧಿಯ ಮತ ಕಳ್ಳತನ ಆರೋಪವು ಮತದಾರರನ್ನು ಮನವೊಲಿಸುವಲ್ಲಿ ವಿಫಲವಾಗಿದೆ ಎಂಬುದನ್ನು ಬಿಹಾರ ಫಲಿತಾಂಶಗಳು ಸೂಚಿಸುತ್ತಿದೆ.
ಅಲ್ಲದೆ, ಕಾಂಗ್ರೆಸ್ ಪ್ರಕಾರ, ಕೈಗೊಂಡಿದ್ದ ಬಿಹಾರ ಯಾತ್ರೆಯು ಮತದಾರರ ಪಟ್ಟಿಯ SIR (ವಿಶೇಷ ತೀವ್ರ ಪರಿಷ್ಕರಣೆ) ಮೂಲಕ ಬಿಹಾರದಲ್ಲಿ ಲಕ್ಷಾಂತರ ಮತದಾರರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಬಿಜೆಪಿ ತಂತ್ರ ಎಂದು ಆರೋಪಿಸಿತ್ತು.
ಇದು ಅತ್ಯಂತ ಸಾಂಕೇತಿಕ ಪ್ರಜಾಸತ್ತಾತ್ಮಕ ಹಕ್ಕನ್ನು ಒಬ್ಬ ವ್ಯಕ್ತಿ, ಒಂದು ಮತವನ್ನು ರಕ್ಷಿಸುವ ಹೋರಾಟ ಎಂದು ಗಾಂಧಿ ಹೇಳಿದ್ದರು. ಅದರೆ, ಚುನಾವಣಾ ಆಯೋಗವು ಆರೋಪಗಳನ್ನು ತಪ್ಪೆಂದು ನಿರಾಕರಿಸಿತ್ತು. ಬಿಹಾರದ ಮತದಾರರು ಕೂಡ ಈಗ ಗಾಂಧಿಯ ಆರೋಪಗಳನ್ನು ತಿರಸ್ಕರಿಸಿದಂತೆ ಕಾಣುತ್ತಿದೆ,(ಏಜೆನ್ಸೀಸ್).