ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸಂಸದೆ ಕಂಗನಾ ರಣಾವತ್ ತೀವ್ರ ವಾಗ್ದಾಳಿ
- ರಾಹುಲ್ ಗಾಂಧಿ ಮತ್ತು ವಿರೋಧ ಪಕ್ಷದವರಿಂದ ನಿತ್ಯ ಸಂಸತ್ ಕಲಾಪಕ್ಕೆ ಅಡ್ಡಿ
- ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸಂಸದೆ ಕಂಗನಾ ರಣಾವತ್ ತೀವ್ರ ವಾಗ್ದಾಳಿ
- ನಾವು ಚರ್ಚೆಗೆ ಸಿದ್ಧವಿದ್ದವೆ, ಆದರೆ ನೀವೇ ಓಡಿಹೋಗುತ್ತಿದ್ದಿರಿ
ನವದೆಹಲಿ: ಸಂಸತ್ನಲ್ಲಿ ಮಳೆಗಾಲದ ಅಧಿವೇಶನ ನಡೆಯುತ್ತಿದೆ, ಆದರೆ ಒಂದು ದಿನವೂ ಕೂಡ ಅಧಿವೇಶನ ಸರಿಯಾಗಿ ನಡೆಯಲು ವಿರೋಧ ಪಕ್ಷ ಅದರಲ್ಲೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬಿಡುತ್ತಿಲ್ಲ ಎಂದು ನಟಿ, ಬಿಜಿಪಿ ಸಂಸದೆ ಕಂಗನಾ ರಣಾವತ್ (Kangana Ranaut on Rahul Gandhi) ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಮೊದಲು ಸಂಸತ್ತಿನಲ್ಲಿ ಚರ್ಚೆ ನಡೆಯಬೇಕೆಂದು ಕಾಂಗ್ರೆಸ್ ಪಟ್ಟು ಹಿಡಿಯುತ್ತದೆ. ಚರ್ಚೆಗೆ ನಾವು ಸಿದ್ಧವಿದ್ದೇವೆ ಎಂದು ಬಿಜೆಪಿ ಹೇಳಿದರೆ, ಅಧಿವೇಶನ ನಡೆಯದಂತೆ ಮಾಡುತ್ತಾರೆ, ಇವರು ಜನರನ್ನು ದಿಕ್ಕು ತಪ್ಪಿಸುವ ಕೆಲಸವೊಂದನ್ನು ಬಿಟ್ಟು ಬೇರೆನನ್ನು ಮಾಡುತ್ತಿಲ್ಲ ಎಂದು ಕಂಗನಾ ಆರೋಪಿಸಿದ್ದಾರೆ.
ಜಾರ್ಖಂಡ್ ಬಗ್ಗೆಗೂ ಮಾತನಾಡಿ!
ಅಧಿವೇಶನ ಆರಂಭಕ್ಕೂ ಮುನ್ನ ದೆಹಲಿಯಲ್ಲಿ ನಡೆದಿದ್ದ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ, ನೀಟ್ ಬಗ್ಗೆ ಚರ್ಚೆ ನಡೆಯಬೇಕೆಂದು ರಾಹುಲ್ ಗಾಂಧಿ ಒತ್ತಾಯ ಮಾಡಿದರು. ಇದಕ್ಕೆ ಕಿರಣ್ ರಿಜುಜು ಹಾಗೂ ಅಮಿತ್ ಶಾ ತಯಾರಿದ್ದೆವೆ ಎಂದರು. ನಂತರ ರಾಹುಲ್ ಗಾಂಧಿ ಚರ್ಚೆಗೆ ಪಾಲ್ಗೊಳ್ಳಲೇ ಇಲ್ಲ, ಈಗ ಸಂಸತ್ ಭವನದ ಹೊರಗಡೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದಿದ್ದಾರೆ.
ನಾವು ದೆಹಲಿಯಲ್ಲಿ ನಡೆದ ಘಟನೆ ಬಗ್ಗೆ ಮಾತನಾಡಲು ತಯಾರಿದ್ದೆವೆ, ಆದರೆ ನಿನ್ನೆ ಜಾರ್ಖಂಡ್ನಲ್ಲಿ ನಡೆದಿರುವ ಘಟನೆ ಬಗ್ಗೆ ಮಾತನಾಡಲು ರಾಹುಲ್ ತಯಾರಿದ್ದಾರಾ? ಎಂದು ಸಂಸದೆ ಪ್ರಶ್ನಿಸಿದ್ದಾರೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಕಂಗನಾ ಮಾತನಾಡುತ್ತಿದ್ದ ವೇಳೆ,'ರಾಹುಲ್ ಓಡಬೇಡಿ, ಜಾರ್ಖಂಡ್ ಬಗ್ಗೆ ಉತ್ತರಿಸಿ' ಎಂಬ ಪೋಸ್ಟರ್ಅನ್ನು ಹಿಡಿದುಕೊಂಡಿದ್ದರು.
ವಿರೋಧ ಪಕ್ಷ ಶಾಂತವಾಗಿದ್ದರೆ ಮಾತ್ರ ಚರ್ಚೆ!
ಸದ್ಯ ಮದ್ಯಾಹ್ನ 2 ಗಂಟೆವರೆಗೆ ಲೋಕಸಭಾ ಕಲಾಪವನ್ನು ಮುಂದೂಡಲಾಗಿದೆ. ಸಂಸದೀಯ ಸಚಿವ ಕಿರಣ್ ರಿಜುಜು, ದೆಹಲಿಯಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆ ಬಗ್ಗೆ ಉತ್ತರಿಸಲು ಗೃಹಮಂತ್ರಿ ಅಮಿತ್ ಶಾ ತಯಾರಿದ್ದಾರೆ. ಆದರೆ ವಿರೋಧ ಪಕ್ಷದವರು ಕಲಾಪಕ್ಕೆ ಅಡ್ಡಿ ಪಡಿಸಿದರೆ ಯಾವುದೇ ರೀತಿಯ ಚರ್ಚೆ ನಡೆಯುವುದಿಲ್ಲ ಎಂದು ಸ್ಪೀಕರ್ ಓಂ ಬಿರ್ಲಾ ಅವರಿಗೆ ತಿಳಿಸಿದ್ದಾರೆ, (ಏಜನ್ಸೀಸ್).