Raghav Chadha 
ದೇಶ

ರಾಘವ್​ ಚಡ್ಡಾ VS ಎಎಪಿ​; ಸಂಸದರಿಗೆ ನೀಡಿದ್ದ 'Z+' ಭದ್ರತೆ ಹಿಂಪಡೆದುಕೊಂಡ ಪಂಜಾಬ್​ ಸರ್ಕಾರ..Raghav Chadha

ಭಿನ್ನಮತಕ್ಕೆ ಕಾರಣಗಳೇನು?

ಕಳೆದ ಕೆಲವು ದಿನಗಳ ಹಿಂದೆ ರಾಜ್ಯಸಭಾ ಸಂಸದ ರಾಘವ್​ ಚಡ್ಡಾರನ್ನು ಎಎಪಿಯ ರಾಜ್ಯಸಭಾ  ಉಪನಾಯಕನ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಪಂಜಾಬ್​ಗೆ ಸಂಬಂಧಿಸಿದ ಸಮಸ್ಯೆ ಬಗ್ಗೆ ಮಾತನಾಡುತ್ತಿಲ್ಲ ಎನ್ನುವುದಾಗಿ ಪಕ್ಷ ಆರೋಪಿಸಿತ್ತು. ಜೊತೆಗೆ ಅರವಿಂದ್​ ಕೇಜ್ರಿವಾಲ್​ ಅವರ ಆಪ್ತವಲಯದಲ್ಲಿ ಗರುತಿಸಿಕೊಂಡಿದ್ದರೂ ಸಹ ಅವರ ಪರ ಯಾವುದೇ ಹೇಳಿಕೆ ನೀಡುತ್ತಿಲ್ಲ ಎನ್ನುವ ಚರ್ಚೆ ಮುನ್ನೆಲೆಗೆ ಬಂದಿತ್ತು.
ಆ ನಂತರ ಎಎಪಿಯನ್ನು ಪ್ರಶ್ನಿಸಿ ಚಡ್ಡಾರವರು ವಿಡಿಯೋ ಹಂಚಿಕೊಂಡಿದ್ದರು, ಜನ ಸಾಮಾನ್ಯರ ಕಷ್ಟದ ಬಗ್ಗೆ ಕೇಳೋದು ತಪ್ಪಾ ಎಂದಿದ್ದರು. ಎಎಪಿ ನಾಯಕರು ಸಹ ಅವರು ಬಿಜೆಪಿ ಪರ, ಮೋದಿ ವಿರುದ್ಧ ಮಾತನಾಡಲು ಹೆದರುತ್ತಾರೆ ಎಂದಿದ್ದರು. ಸದ್ಯ ಈಗ ಕಂಡಿರುವ ಪಂಜಾಬ್ ಸರ್ಕಾರದ ನಡೆ, ಪಕ್ಷದ ಹೈಕಮಾಂಡ್ ಮತ್ತು ಚಡ್ಡಾ ನಡುವೆ ತೀವ್ರ ಭಿನ್ನಮತ  ಎಷ್ಟಿದೆ ಎನ್ನುವುದನ್ನು ತೋರಿಸಿದೆ. 

ಎಎಪಿ ವಿರುದ್ಧ ಚಡ್ಡಾ ಪೋಸ್ಟ್

ಈ ಬೆಳವಣಿಗೆಗಳ ನಡುವೆ ರಾಘವ್ ಚಡ್ಡಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವ ಪೋಸ್ಟ್‌ಗಳು ಗಮನ ಸೆಳೆಯುತ್ತಿವೆ. ಇತ್ತೀಚೆಗೆ ಅವರು "Never Outshine the Master" ಯಜಮಾನನಿಗಿಂತ ಹೆಚ್ಚು ಮಿಂಚಬೇಡ ಎಂಬ ಪುಸ್ತಕದ ಪುಟವೊಂದರ ಫೋಟೋ ಹಂಚಿಕೊಂಡಿದ್ದರು, ಇದು ಅರವಿಂದ್ ಕೇಜ್ರಿವಾಲ್ ಅವರಿಗೆ ನೀಡಿದ ಟಾಂಗ್ ಎಂದು ವಿಶ್ಲೇಷಿಸಲಾಗುತ್ತಿದೆ. ಅಲ್ಲದೆ, ಹೊಸ ಪಕ್ಷ ಕಟ್ಟುವ ಬಗ್ಗೆ ಬಂದ ವಿಡಿಯೋವೊಂದಕ್ಕೆ ಅವರು ಕುತೂಹಲಕಾರಿ ಆಲೋಚನೆ ಎಂದು ಪ್ರತಿಕ್ರಿಯಿಸಿದ್ದು ಮುಂಬರುವ ಬದಲಾವಣೆಯ ಸೂಚನೆ ನೀಡಿದೆ.  ನನ್ನನ್ನು ಮೌನಗೊಳಿಸಲು ಪ್ರಯತ್ನಿಸಲಾಗುತ್ತಿದೆ, ಮೌನಿಯಾಗಿರಬಹುದು ಆದರೆ ನಾನೆಂದಿಗೂ ಸೋಲೊಪ್ಪಿಕೊಂಡಿಲ್ಲ ಎಂದು ಈ ಹಿಂದೆ ಎಎಪಿ ವಿರುದ್ಧ ಚಡ್ಡಾ ಕಿಡಿಕಾರಿದ್ದರು. 

Z+ ಭದ್ರತೆ ಎಂದರೇನು?

ಭಾರತದಲ್ಲಿ Z+ ಭದ್ರತೆ ಉನ್ನತ ಮಟ್ಟದ ನಾಯಕರಿಗೆ, ರಾಜಕೀಯ ನಾಯಕರಿಗೆ ನೀಡಲಾಗುತ್ತದೆ. ಸರ್ಕಾರದಿಂದ ಆಯ್ಕೆಯಾದವರಿಗೆ ಮಾತ್ರ ನೀಡಲಾಗುತ್ತದೆ. ಜೀವಬೆದರಿಕೆ, ಪ್ರಾಣಾಪಾಯ ಹೆಚ್ಚಿರುವವರಿಗೆ ಈ ವ್ಯವಸ್ಥೆ ಆಯಾ ರಾಜ್ಯದ ಗೃಹಸಚಿವಾಲಯದಿಂದ ಮಾಡಿಕೊಟ್ಟಿರಲಾಗುತ್ತದೆ. Z+  ಭದ್ರತೆಯಲ್ಲಿ ಹತ್ತಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಇರುತ್ತಾರೆ, ಕಮಾಂಡೋಗಳು, 55 ಪೊಲೀಸರ ತಂಡ, ಸುಧಾರಿತ ಶಸ್ತ್ರಾಸ್ತ್ರ ಒದಗಿಸಲಾಗಿರುತ್ತದೆ, (ಏಜೆನ್ಸೀಸ್​).